Asianet Suvarna News Asianet Suvarna News

ಶೀಘ್ರ ರಾಜ್ಯ ಸಂಪುಟ ವಿಸ್ತರಣೆ : ಯಾರಿಗೆ ಎಂಟ್ರಿ , ಯಾರಿಗೆ ಎಕ್ಸಿಟ್..?

ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

Soon Karnataka Cabinet Expansion Will Happen This Month Says Dinesh Gundurao
Author
Bengaluru, First Published Nov 15, 2018, 8:15 AM IST

ಬೆಂಗಳೂರು :  ರಾಜ್ಯ ಸಚಿವ ಸಂಪುಟ ವಿಸ್ತ​ರಣೆ ಬಗ್ಗೆ ಶೀಘ್ರವೇ ಹೈಕ​ಮಾಂಡ್‌​ನೊಂದಿಗೆ ಚರ್ಚಿ​ಸ​ಲಿದ್ದು, ಒಟ್ಟಾರೆ ಈ ಮಾಸಾಂತ್ಯದ ವೇಳೆಗೆ ಸಂಪುಟ ವಿಸ್ತ​ರಣೆ ಪ್ರಕ್ರಿಯೆ ಪೂರ್ಣ​ಗೊ​ಳ್ಳ​ಲಿದೆ ಎಂದು ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಹೇಳಿ​ದ​ರು.

ಬುಧ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಪ್ರಸ್ತುತ ಜೆಡಿ​ಎಸ್‌ ವರಿಷ್ಠ ಎಚ್‌.ಡಿ. ದೇವೇ​ಗೌಡ ಅವರು ವಿದೇಶ ಪ್ರವಾ​ಸ​ದಲ್ಲಿ ಇದ್ದಾರೆ. ಇತರೆ ನಾಯ​ಕರು ಪ್ರವಾ​ಸ​ದ​ಲ್ಲಿ​ದ್ದಾರೆ. ಎಲ್ಲಾ ನಾಯ​ಕರು ಪ್ರವಾಸ ಪೂರ್ಣ​ಗೊ​ಳಿ​ಸಿದ ನಂತರ ಸಂಪುಟ ವಿಸ್ತ​ರಣೆ ಬಗ್ಗೆ ಸಭೆ ನಡೆಸಿ ಚರ್ಚೆ ನಡೆ​ಸ​ಲಾ​ಗು​ವುದು ಎಂದು ಅವರು ಹೇಳಿ​ದ​ರು.

ವಾಸ್ತ​ವ​ವಾಗಿ ಉಪ ಚುನಾ​ವಣೆ ಫಲಿ​ತಾಂಶ ಪ್ರಕ​ಟ​ಗೊಂಡ ಬೆನ್ನಲ್ಲೇ ಸಂಪುಟ ವಿಸ್ತ​ರಣೆ ಮಾಡು​ವು​ದಾಗಿ ರಾಜ್ಯ ನಾಯ​ಕರು ಹೇಳಿ​ದ್ದರು. ಆದರೆ, ಫಲಿ​ತಾಂಶಗೊಂಡ ನಂತರ ಸಂಪುಟ ವಿಸ್ತ​ರಣೆ ವಿಚಾ​ರ​ದಲ್ಲಿ ನಾಯ​ಕ​ರಲ್ಲಿ ಉತ್ಸಾಹ ಕಡಿ​ಮೆ​ಯಾ​ಗಿದೆ. ನವೆಂಬರ್‌ ಎರ​ಡನೇ ವಾರ​ದಲ್ಲಿ ಸಂಪುಟ ವಿಸ್ತ​ರಣೆ ಖಚಿತ ಎನ್ನ​ಲಾ​ಗಿತ್ತು. ಆದರೆ, ಹೈಕ​ಮಾಂಡ್‌ನ ನಾಯ​ಕರು ಬ್ಯುಸಿ ಇರುವ ಕಾರಣ ಈ ವಿಚಾ​ರದ ಬಗ್ಗೆ ಚರ್ಚೆ ಸಾಧ್ಯ​ವಾ​ಗಿಲ್ಲ ಎಂದು ಹೇಳ​ಲಾ​ಗು​ತ್ತಿದೆ.

ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಅವರು ನಗ​ರಕ್ಕೆ ಭೇಟಿ ನೀಡಿದ್ದ ಸಂದ​ರ್ಭ​ದಲ್ಲಿ ಸಂಪುಟ ವಿಸ್ತ​ರ​ಣೆ ಈ ಮಾಸ​ದಲ್ಲಿ ಖಚಿತ ಎಂದೇ ಹೇಳಿ​ದ್ದರು. ಕಾಂಗ್ರೆ​ಸ್‌​ನಿಂದ ಐದು ಹಾಗೂ ಜೆಡಿ​ಎ​ಸ್‌​ನಿಂದ ಒಬ್ಬರು ಸಚಿ​ವ​ರನ್ನು ಸಂಪು​ಟಕ್ಕೆ ಸೇರ್ಪಡೆ ಮಾಡ​ಲಾ​ಗು​ತ್ತದೆ ಎಂದೇ ಹೇಳ​ಲಾ​ಗಿತ್ತು. ಆದರೆ, ಇದಾದ ನಂತರ ಯಾವುದೇ ಪ್ರಕ್ರಿಯೆ ನಡೆ​ದಿಲ್ಲ.

ರಾಹುಲ್‌ ಭೇಟಿ ಮಾಡ​ಲಿ​ರುವ ಪರಂ:  ಈ ನಡುವೆ, ಉಪ ಮುಖ್ಯ​ಮಂತ್ರಿ ಡಾ.ಜಿ. ಪರ​ಮೇ​ಶ್ವರ್‌ ಅವರು ಬುಧ​ವಾರ ಸಂಜೆ ದೆಹ​ಲಿಗೆ ತೆರ​ಳಿದ್ದು, ಗುರು​ವಾರ ಅವರು ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ಅವ​ರನ್ನು ಭೇಟಿ​ಯಾ​ಗ​ಲಿ​ದ್ದಾರೆ.

ಆದರೆ, ಈ ಭೇಟಿಯ ಉದ್ದೇಶ ಸಂಪುಟ ವಿಸ್ತ​ರ​ಣೆ ಕುರಿತು ಅಲ್ಲ ಎಂದು ಮೂಲ​ಗಳು ಸ್ಪಷ್ಟ​ಪ​ಡಿ​ಸಿವೆ. ಲೋಕ​ಸಭೆ ಚುನಾ​ವ​ಣೆ ಹಿನ್ನೆ​ಲೆ​ಯಲ್ಲಿ ಸಂಪ​ನ್ಮೂಲ ಕ್ರೋಢೀಕ​ರಣ ಕುರಿತು ಹಾಗೂ ಲೋಕ​ಸಭೆ ಚುನಾ​ವ​ಣೆಗೆ ಸಿದ್ಧತೆ ಕುರಿತು ಅವರು ಹೈಕ​ಮಾಂಡ್‌​ನೊಂದಿಗೆ ಚರ್ಚಿ​ಸುವ ಸಾಧ್ಯ​ತೆ​ಯಿದೆ ಎಂದು ಮೂಲ​ಗಳು ಹೇಳಿವೆ.

Follow Us:
Download App:
  • android
  • ios