Asianet Suvarna News Asianet Suvarna News

ದಾಂಪತ್ಯ ಸರಿ ಹೋಗ್ತಿಲ್ಲಾಂತ ಎರಡನೇ ಹೆಂಡ್ತಿಯನ್ನು ಕೊಲೆಗೈದ ಮೂರನೇ ಗಂಡ

ಈಕೆಗೆ ಮೂರನೇ ಗಂಡ, ಆತನಿಗೆ ಎರಡನೇ ಹೆಂಡ್ತಿ. ಇಬ್ಬರೂ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಪ್ರೀತಿಸಿ ಮದುವೆಯಾಗಿದ್ದರು. ಆದರೆ, ದಾಂಪತ್ಯದಲ್ಲಿ ಕಲಹ ಉಂಟಾಗಿ ಗಂಡನೇ ಹೆಂಡ್ತಿಯನ್ನು ಕೊಲೆ ಮಾಡಿದ್ದಾನೆ.

Vijayanagar district Hadagali health department husband murdered his wife sat
Author
First Published Nov 25, 2023, 2:33 PM IST

ವಿಜಯನಗರ (ನ.25): ಇಬ್ಬರೂ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುವ ನೌಕರರಾಗಿದ್ದಾರೆ. ದಾಂಪತ್ಯದಲ್ಲಿ ಕಲಹ ಉಂಟಾಗಿದ್ದರಿಂದ ಮನೆಯಲ್ಲಿಯೇ ಹೆಂಡತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಆರೋಪಿ ಗಂಡ ಪೊಲೀಸರ ಮುಂದೆ ಹಾಜರಾಗಿದ್ದಾನೆ. 

ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕು ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಪತಿ -ಪತ್ನಿ ಇಬ್ಬರೂ ಕೆಲಸ ಮಾಡುತ್ತಿದ್ದಾರೆ. ಆದರೆ, ಇಬ್ಬರಿಗೂ ಈ ಮೊದಲೇ ಮದುವೆ ಆಗಿದ್ದರೂ ಕುಟುಂಬಕ್ಕೆ ಹೆಚ್ಚು ಸಮಯ ಕೊಡಲಾಗದಿದ್ದರೊಂದ  ಆದರೆ, ಇಬ್ಬರೂ ಬೇರೆ ಬೇರೆ ಗ್ರಾಮಗಳ ಆರೋಗ್ಯ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರಿಗೂ ಅನುಕೂಲ ಆಗುವಂತೆ ಇಟಗಿ ಗ್ರಾಮದಲ್ಲಿ ವಾಸವಾಗಿದ್ದರು. ಆದರೆ, ಇಬ್ಬರ ನಡುವೆ ದಾಂಪತ್ಯದಲ್ಲಿ ಎಲ್ಲವೂ ಸರಿಯಿರಲಿಲ್ಲ. ಕಳೆದ ಕೆಲವು ದಿನಗಳಿಂದ ದಾಂಪತ್ಯಲ್ಲಿ ಕಲಹ ಆರಂಭವಾಗಿದ್ದು, ಈಗ ಗಂಡನೇ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟು, ಹೆಂಡ್ತಿಯ ಕತ್ತು ಸೀಳಿ ಕೊಲೆ ಮಾಡಿದ ಗಂಡ!

ಕೊಲೆ ಘಟನೆ ಹೂವಿನ ಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದ ಮಹಿಳೆ ಡಿಂಪಲ್ (36) ಚಾಮರಾಜನಗರ ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಮಾದಾಪುರ ಗ್ರಾಮದವಳಾಗಿದ್ದಳು. ಕೆಲಸದ ನಿಮಿತ್ತ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿಗೆ ಆಗಮಿಸಿದ್ದರು. ಆದರೆ, ಇಲ್ಲಿಗೆ ಆಗಮಿಸುವ ಮೊದಲೇ ಆಕೆಗೆ ಮದುವೆ ಆಗಿದ್ದರೂ ಕೆಲಸದ ಸ್ಥಳ ದೂರವಾದ್ದರಿಂದ ಗಂಡನನ್ನು ಬಿಟ್ಟು ಬಂದಿದ್ದರು. ಇನ್ನು ಕೆಲಸದಲ್ಲಿ ಪರಿಚಯವಾದ ಸ್ಥಳೀಯ ಕೋಗಳಿ ತಾಂಡದ ಶ್ರೀಕಾಂತ ಎನ್ನುವ ವ್ಯಕ್ತಿಯೊಂದಿಗೆ ಪ್ರೇಮಾಂಕುರವಾಗಿ ಇಬ್ಬರೂ ಮದುವೆ ಮಾಡಿಕೊಂಡಿದ್ದರು.

ಕೊಲೆಯಾದ ಮಹಿಳೆ ಡಿಂಪಲ್ ಹಡಗಲಿ ತಾಲೂಕಿನ ಉಲವತ್ತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇನ್ನು ಕೊಲೆ ಮಾಡಿದ ವ್ಯಕ್ತಿ ಕೋಗಳಿ ತಾಂಡಾದ ನಿವಾಸಿಯಾಗಿದ್ದು, ನೆಲ್ಲುಕುದುರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಮುದಾಯ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದನು. ಆದರೆ, ಡಿಂಪಲ್‌ಗೆ ಇದು ಮೂರನೇಯ ಮದುವೆಯಾಗಿತ್ತು. ಜೊತೆಗೆ, ಈಕೆಯನ್ನು ಮದುವೆಯಾಗಿದ್ದ ಶ್ರೀಕಾಂತನಿಗೂ ಇದು ಎರಡನೇ ಮದುವೆಯಾಗಿತ್ತು. ಪರಸ್ಪರ ಅನ್ನೋನ್ಯವಾಗಿದ್ದ ದಂಪತಿಗಳು ಏಕಾಏಕಿಯಾಗಿ ಜಗಳ ಆರಂಭವಾಗಿದ್ದು, ಗಂಡನೇ ಹೆಂಡತಿಯ ಕೊಲೆ ಮಾಡಿ ಇಟಗಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾನೆ.ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇಟ್ಟಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.

ಕಾವೇರಿ ನೀರಿಗಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಮಂಡ್ಯ ರೈತರು

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟು, ಹೆಂಡ್ತಿಯ ಕತ್ತು ಸೀಳಿ ಕೊಲೆ ಮಾಡಿದ ಗಂಡ!: ಸೋಷಿಯಲ್‌ ಮೀಡಿಯಾ ಇಲ್ದೆ ಜೀವನಾನೇ ಇಲ್ಲ ಅನ್ನೋ ಕಾಲ ಇದು. ದಿನ ಬೆಳಗಾದ್ರೆ ವಾಟ್ಸಾಪ್‌, ಫೇಸ್‌ಬುಕ್‌ ಸ್ಕ್ರಾಲ್‌ ಮಾಡೋದ್ರಿಂದ ತೊಡಗಿ ರಾತ್ರಿ ರೀಲ್ಸ್‌ ನೋಡ್ತಾ ಮಲಗೋವಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳು ಅನಿವಾರ್ಯವಾಗಿಬಿಟ್ಟಿವೆ. ಅಷ್ಟೇ ಸಾಲ್ದು ಅಂತ ರೀಲ್ಸ್‌, ಶಾರ್ಟ್ಸ್‌ಗಳು ಜನರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರಲು ಪ್ರೇರೇಪಿಸುತ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮೊದಲಾದ ಕಡೆ ವೈರಲ್ ಆಗೋ ರೀಲ್ಸ್‌ಗಳು ವೈರಲ್ ಆಗೋದರ ಜೊತೆಗೆ ನೇಮು-ಫೇಮು ತಂದು ಕೊಡೋ ಕಾರಣ ಕೇವಲ ಯುವಕ-ಯುವತಿಯರು ಮಾತ್ರವಲ್ಲ ಎಲ್ಲಾ ವಯಸ್ಸಿನ ಜನರೂ ಸಹ ಇಂಥಾ ವೀಡಿಯೋಗಳನ್ನು ಮಾಡ್ತಿದ್ದಾರೆ. ಟ್ರೆಂಡ್ ಆಗೋ ಸಾಂಗ್‌ಗೆ ಸೊಂಟ ಬಳುಕಿಸಿ ವೀವ್ಸ್‌, ಲೈಕ್ಸ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಾರೆ.

ಮದುವೆಯಾದ ಕಪಲ್ಸ್ ಸಹ ರೀಲ್ಸ್ ಮಾಡಿ ವೈರಲ್ ಆಗ್ತಿದ್ದಾರೆ. ಆದ್ರೆ ಕೋಲ್ಕತ್ತಾದಲ್ಲಿ ಮಾತ್ರ ಪತ್ನಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟುಗೊಂಡ ಪತಿ ಆಕೆಯ ಕತ್ತುಸೀಳಿ ಕೊಲೆ ಮಾಡಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಸೀಳಿ ಕೊಂದಿರೋ ಘಟನೆ ಕೋಲ್ಕತ್ತಾದ ಜೋಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿನಾರಾಯಣಪುರದಲ್ಲಿ ನಡೆದಿದೆ. 

Follow Us:
Download App:
  • android
  • ios