Asianet Suvarna News Asianet Suvarna News

ಯಾರದ್ದೋ ದುಡ್ಡು.. ಸಿದ್ದರಾಮಯ್ಯನ ಜಾತ್ರೆ : ಸಿಎಂ ಬೊಮ್ಮಾಯಿ ಟೀಕೆ

ಕಾಂಗ್ರೆಸ್ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರದಾನಿ ಮೋದಿ ನೀಡಿದ್ದು, ಅದನ್ನು ತುಂಬಿದ ಚೀಲ ಸಿದ್ದುದು. ಯಾರದ್ದೋ ದುಡ್ಡು... ಸಿದ್ದರಾಮಯ್ಯನ ಜಾತ್ರೆ ನಡೆಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು.

Someone money Siddaramaiah fair CM Bommai Criticism
Author
First Published Nov 27, 2022, 7:27 PM IST

ಚಿಕ್ಕಮಗಳೂರು (ನ.27) :  ಕಾಂಗ್ರೆಸ್ ಅವಧಿಯಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರದಾನಿ ಮೋದಿ ನೀಡಿದ್ದು, ಅದನ್ನು ತುಂಬಿದ ಚೀಲ ಸಿದ್ದುದು. ಯಾರದ್ದೋ ದುಡ್ಡು... ಸಿದ್ದರಾಮಯ್ಯನ ಜಾತ್ರೆ ನಡೆಸಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ಅವರು ಇಂದು ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ  ಬಿಜೆಪಿಯಿಂದ ಏರ್ಪಡಿಸಿದ್ದ  ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.

ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಹ ನಾಡು ಶೃಂಗೇರಿ. ನಾನು ದೇವರ ನಾಡಿಗೆ ಬಂದಿದ್ದೇವೆ. ಜನಸಂಕಲ್ಪ ಯಾತ್ರೆಗೆ ಜನ ಬೆಂಬಲ ಸಿಗುತ್ತಿದೆ. ಮೋದಿ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಆಡಳಿತ ನಡೆಸ್ತಿದೆ. ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲದಿಂದ ವಿಜಯ ಸಂಕಲ್ಪ ಯಾತ್ರೆಯಾಗಿ ಯಶಸ್ವಿಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಸರ್ಕಾರ ನಮ್ಮದು. ಒಂದೇ ವರ್ಷದಲ್ಲಿ 8000 ವಿವೇಕ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ನಾರಾಯಣ ಗುರು ಅವರ ಹೆಸರಿನಲ್ಲಿವಸತಿ ಶಾಲೆ, ಎಸ್ ಸಿ ಎಸ್ ಟಿ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ,50 ಕನಕದಾಸ ಹಾಸ್ಟೆಲ್ ನಿರ್ಮಿಸುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.

BJP Janasankalpa Yatre: ಜೀವರಾಜ್, ಪರವಾಗಿಲ್ವಪ್ಪಾ.. 2023ಕ್ಕೆ ದಾಟುತ್ತೀಯ: ಸಿಎಂ ಬೊಮ್ಮಾಯಿ ಮೆಚ್ಚುಗೆ

ನೀರು ಕೊಡದವರು, ಬದುಕು ಕೊಡುತ್ತಾರಾ? : ಕಳೆದ 75 ವರ್ಷದಲ್ಲಿ ಕಾಂಗ್ರೆಸ್ ನವರು ಕೇವಲ 25 ಲಕ್ಷ ಮನೆಗಳಿಗೆ ನೀರು ನೀಡಿದ್ದರು.  ಕುಡಿಯುವನೀರು ಕೊಡಲಾಗದವರು ನಮ್ಮನ್ನು ಆಳಿದ್ದರು. ನೀರು ಕೊಡದವರು ಬದುಕು ಕಟ್ಟಿಕೊಡಲು ಸಾಧ್ಯವಿಲ್ಲ. ಜನ ಪರ ಕೆಲಸ ಮಾಡುವುದು ನಮ್ಮ ಜವಾಬ್ದಾರಿ. ಸಿದ್ದರಾಮಯ್ಯ ಅವರು 5 ವರ್ಷ ಸಿಎಂ ಆಗಿದ್ದರೂ ಏನೂ ಕೆಲಸ ಮಾಡಲಿಲ್ಲ. ಲೋಕಾಯುಕ್ತ ಮುಚ್ಚಿ ಎಸಿಬಿ ಮಾಡಿದ್ದರು. ಎಸಿಬಿಯಲ್ಲಿ ಹಲವು ಕೇಸ್ ಮುಚ್ಚಿಹಾಕಿದ್ದಾರೆ. 50 ಕೇಸ್ ಗಳಿಗೆ ಬಿ-ರಿಪೋರ್ಟ್ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.

ಇದೆಲ್ಲವೂ ಕಾಂಗ್ರೆಸ್ ಆಡಳಿತದ ವೈಖರಿ. ಚಿಕ್ಕಮಗಳೂರಿನಲ್ಲಿ‌ ಮೆಡಿಕಲ್ ಕಾಲೇಜ್ ಅನ್ನು ಕಾಂಗ್ರೆಸ್ ನವರು ಯಾಕೆ ಮಾಡಲಿಲ್ಲ. ಭ್ರಷ್ಟ ಕಾಂಗ್ರೆಸ್ ನ್ನು ಬೇರು ಸಮೇತ ಕಿತ್ತು ಹಾಕಲು ಶೃಂಗೇರಿ ಶಾರದಾಂಬೆಯ ಪುಣ್ಯ ಸ್ಥಳದಿಂದ ಸಂಕಲ್ಪ ಮಾಡೋಣ. ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡಲು ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರುವ ಸಂಕಲ್ಪ ಮಾಡಬೇಕೆಂದು ಜನರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಕರೆ ನೀಡಿದರು.

ಅನ್ನಭಾಗ್ಯ ಅಕ್ಕಿ ಮೋದಿದ್ದು, ಚೀಲ-ಫೋಟೋ ಸಿದ್ರಾಮಣ್ಣಾನದ್ದು! ಯಾರದ್ದೋ ದುಡ್ಡು ಸಿದ್ರಾಮಣ್ಣನ ಜಾತ್ರೆ!

30 ಲಕ್ಷ ಮನೆಗಳಿಗೆ ನೀರು ಪೂರೈಕೆ: ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯದಲ್ಲಿ 6,000 ರಾಷ್ಟ್ರೀಯ ಹೆದ್ದಾರಿ  ರಸ್ತೆ, ಬಂದರುಗಳ ನಿರ್ಮಾಣ, ಜಲಜೀವನ ಮಿಷನ್ ಯೋಜನೆಗಳು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದೆ. ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿಯಾದ ಕುಡಿಯುವ ನೀರಿನ ಯೋಜನೆಯನ್ನು ಕೇವಲ ಒಂದೇ ವರ್ಷದಲ್ಲಿ 30 ಲಕ್ಷ ಮನೆಗಳಿಗೆ ಪೂರೈಸಲಾಗಿದೆ. ಕೋವಿಡ್ ಅನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸಮರ್ಥವಾಗಿ ನಿರ್ವಹಿಸಲಾಯಿತು. ಔಷಧಿ, ಆರೋಗ್ಯ ಮೂಲಸೌಕರ್ಯಗಳನ್ನು ನೀಡಲಾಯಿತು. ಪ್ರವಾಹದಲ್ಲಿಯೂ  5 ಲಕ್ಷ ಪರಿಹಾರಗಳನ್ನು ನೀಡಲಾಯಿತು. ಬೆಳೆಹಾನಿ ಪರಿಹಾರವನ್ನು ದುಪ್ಪಟ್ಟುಗೊಳಿಸಿ ರೈತರಿಗೆ ನೀಡಲಾಗುತ್ತಿದೆ. ರೈತರಿಗೆ 5 ಹೆಚ್ ಪಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ರೈತಮಕ್ಕಳಿಗೆ ವಿದ್ಯಾನಿಧಿ, 6 ಲಕ್ಷ ರೈತ ಕೂಲಿಕಾರ್ಮಿಕರಿಗೆ ವಿದ್ಯಾನಿಧಿ  ನೀಡುತ್ತಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಸಚಿವರಾದ ಭೈರತಿ ಬಸವರಾಜ್, ಗೋವಿಂದ ಕಾರಜೋಳ, ಮಾಜಿ ಸಚಿವ ಡಿ.ಎನ್. ಜೀವರಾಜ್ ಹಾಗೂ ಚಿಕ್ಕಮಗಳೂರು ಜಿಲ್ಲೆ ಶಾಸಕರು ಸೇರಿ ಹಲವರು ಉಪಸ್ಥಿತರಿದ್ದರು.

Follow Us:
Download App:
  • android
  • ios