ಮಂತ್ರಿ ಆಗಲು ಸೋಮಣ್ಣ ಅನ್‌ಫಿಟ್‌, ನಾಲಾಯಕ್‌: ಸಿದ್ದರಾಮಯ್ಯ ವಾಗ್ದಾಳಿ

  • ಮಂತ್ರಿ ಆಗಲು ಸೋಮಣ್ಣ ಅನ್‌ಫಿಟ್‌, ನಾಲಾಯಕ್‌: ಸಿದ್ದು ವಾಗ್ದಾಳಿ
  • ಹಕ್ಕುಪತ್ರ ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಗೆ ಕಪಾಳ ಮೋಕ್ಷಕ್ಕೆ ಅಧಿಕಾರ ಕೊಟ್ಟಿದ್ದು ಯಾರು, ಆಕ್ರೋಶ
Somanna unfit to become minister Nalayak  Siddaramaiah rav

ದಾವಣಗೆರೆ (ಅ.24) : ಒಬ್ಬ ಮಂತ್ರಿಯಾಗಿ ಸಮಸ್ಯೆ ಹೇಳಿಕೊಂಡು ಬಂದ ಹೆಣ್ಣು ಮಗಳ ಮೇಲೆ, ಹಿಂದುಳಿದವರ ಮೇಲೆ, ದಲಿತರ ಮೇಲೆ ಕೈ ಮಾಡೋಕಾ ನಿಮಗೆ ಅಧಿಕಾರ ಕೊಟ್ಟಿರುವುದು? ಸಚಿವನಾಗೋಕೆ ನಾಲಾಯಕ್‌ ಎಂದು ಮಹಿಳೆಗೆ ಕಪಾಳ ಮೋಕ್ಷ ಮಾಡಿದ ವಸತಿ ಸಚಿವ ವಿ.ಸೋಮಣ್ಣ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ಧಾಳಿ ನಡೆಸಿದ ರು. ನಗರದ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮಣ್ಣನಂತಹವರೆಲ್ಲಾ ಮಂತ್ರಿ ಮಂಡಲದಲ್ಲಿ ಇರಬಾರದು. ತಾಳ್ಮೆ, ಸಹನೆ ಇಲ್ಲಾಂದ್ರೆ ಸಮಸ್ಯೆ ಪರಿಹರಿಸುವುದಕ್ಕೆ ಆಗುವುದಿಲ್ಲ. ಜನರ ಅಹವಾಲು, ಸಮಸ್ಯೆ ಆಲಿಸಲು ನಿಮ್ಮಿಂದ ಆಗುವುದಿಲ್ಲವೆಂದರೆ ರಾಜೀನಾಮೆ ಕೊಟ್ಟು, ಮನೆಗೆ ಹೋಗಬೇಕು ಎಂದರು.

ಸಮಸ್ಯೆ ಹೇಳಿಕೊಳ್ಳಲು ಬಂದ ಮಹಿಳೆಗೆ ಸಚಿವ ವಿ. ಸೋಮಣ್ಣ ಕಪಾಳಮೋಕ್ಷ

ಪಾಪ ಹಕ್ಕುಪತ್ರ ಕೇಳಲೆಂದು ಬಂದ ಮಹಿಳೆಗೆ ಕಪಾಳ ಮೋಕ್ಷ ಮಾಡಿದ್ದು ಬಿಜೆಪಿಯವ ಸಂಸ್ಕೃತಿಯನ್ನು ತೋರಿಸುತ್ತದೆ. ವಿ. ಸೋಮಣ್ಣ ಸಚಿವನಾಗುವುದಕ್ಕೆ ಅನ್‌ಫಿಟ್‌. ನೊಂದ ಮಹಿಳೆ ಏನು ಕೇಳುತ್ತಾಳೆ? ಮೊದಲು ಆಲಿಸಬೇಕಲ್ಲವೇ? ಜನರು ಕಷ್ಟಸುಖ ಹೇಳುತ್ತಾರೆ, ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಾರೆ, ಕೆಲ ಸಂದರ್ಭದಲ್ಲಿ ಕಠಿಣ ಪದ ಬಳಸಬಹುದು. ಜನರ ಸಮಸ್ಯೆ ಪರಿಹರಿಸಬೇಡಿ ಅಂತಾ ನಿಮ್ಮನ್ನು ಯಾರು ಹಿಡಿದಿದ್ದಾರೆ? ಅಧಿಕಾರ ನಿಮ್ಮ ಕೈಯಲ್ಲೇ ಇದೆ. ಜನರಿಗೆ ಒಳ್ಳೆಯದು ಮಾಡಬೇಕಲ್ಲವೇ ಎಂದು ಅವರು ಪ್ರಶ್ನಿಸಿದರು.

ತಾಳ್ಮೆ ಇಲ್ಲದೇ ಹೋದರೆ, ಸಹನೆ ಇಲ್ಲದಿದ್ದರೆ, ಜನರ ಸಮಸ್ಯೆ ಪರಿಹರಿಸಲು ನಿಮ್ಮಿಂದ ಆಗದಿದ್ದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ನನ್ನ ಪ್ರಕಾರ ಸೋಮಣ್ಣ ಸಚಿವ ಸ್ಥಾನಕ್ಕೆ ಅರ್ಹ ವ್ಯಕ್ತಿಯೇ ಅಲ್ಲ. ಸೋಮಣ್ಣನಿಗಾಗಲೀ, ಬಿಜೆಪಿಯವರಿಗಾಗಲೀ ಎಲ್ಲಿದೆ ಸಂಸ್ಕೃತಿ? ಮಾನವೀಯತೆಯೇ ಇಲ್ಲ. ಮನುಷ್ಯನಿಗೆ ಮೂಲಭೂತವಾಗಿ ಮಾನವೀಯತೆ ಇರಬೇಕು. ಇನ್ನೊಬ್ಬರನ್ನು ಪ್ರೀತಿಸಬೇಕು, ಗೌರವಿಸಬೇಕು. ಅದೇ ಇಲ್ಲದಿದ್ದರೆ, ಅಂತಹವರಿಗೆ ಸಂಸ್ಕೃತಿಯಾದರೂ ಎಲ್ಲಿಂದ ಬರುತ್ತದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ 20 ದಿನಕ್ಕೂ ಹೆಚ್ಚು ಕಾಲ ಭಾರತ್‌ ಜೋಡೋ ಯಾತ್ರೆ ನಡೆದಿದೆ. ನಮ್ಮ ನಿರೀಕ್ಷೆಗೂ ಮೀರಿ ಯಾತ್ರೆಯಲ್ಲಿ ಜನ ಸೇರಿದ್ದರು. ಭಾರತ್‌ ಜೋಡೋ ಯಾತ್ರೆಗೆ ಸಿಕ್ಕ ಬೆಂಬಲ ನಿರೀಕ್ಷೆಗೂ ಮೀರಿ ಇತ್ತು. ಬಿಜೆಪಿ ಸರ್ಕಾರವು ಜನರಿಗೆ ಬೇಡವಾಗಿದೆ. ಹಾಗಾಗಿ ಜನರೇ ಸ್ವಯಂ ಪ್ರೇರಿತರಾಗಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು ಎಂದು ಸಿದ್ದರಾ ಮಯ್ಯ ತಿಳಿಸಿದರು.

ಮಾಜಿ ಸಚಿವರಾದ ಎಂ.ಬಿ.ಪಾಟೀಲ್‌, ಎಸ್‌.ಎಸ್‌. ಮಲ್ಲಿಕಾರ್ಜುನ ಇತರರು ಇದ್ದರು. ನಂತರ ಇಲ್ಲಿನ ಜೆ.ಎಚ್‌.ಪಟೇಲ್‌ ಬಡಾವಣೆಯಲ್ಲಿ ಕೆಪಿಸಿಸಿ ಮುಖಂಡ, ಕುರುಬ ಸಮಾಜದ ಹಿರಿಯ ಮುಖಂಡರಾಗಿದ್ದ ತಮ್ಮ ಕಟ್ಟಾಅನುಯಾಯಿ ಪಿ. ರಾಜಕುಮಾರ ನಿಧನರಾದ ಹಿನ್ನೆಲೆಯಲ್ಲಿ ಮೃತರ ಮನೆಗೆ ತೆರಳಿ, ಅಂತಿಮ ದರ್ಶನವನ್ನು ಸಿದ್ದರಾಮಯ್ಯ, ಎಂ.ಬಿ.ಪಾಟೀಲ್‌, ಎಸ್ಸೆಸ್‌ ಮಲ್ಲಿಕಾರ್ಜುನ ಇತರರು ಪಡೆದರು.

2006ರಿಂದ ಈವರೆಗಿನ ಎಲ್ಲದರ ತನಿಖೆಗೆ ಒತ್ತಾಯ

ಮೂರು ವರ್ಷ ಬಾಯಲ್ಲಿ ಕಡುಬು ಸಿಕ್ಕಿಕೊಂಡಿತ್ತಾ:ಸಿದ್ದರಾಮಯ್ಯ ವಾಗ್ದಾಳಿ

ದಾವಣಗೆರೆ: ಮೂರು ವರ್ಷದಿಂದ ಬಿಜೆಪಿಯವರ ಬಾಯಲ್ಲಿ ಕಡುಬು ಸಿಕ್ಕೊಂಡಿತ್ತಾ? ಹಿಂದಿನ ಸರ್ಕಾರವಷ್ಟೇ ಅಲ್ಲ, 2006ರಿಂದ ಈವರೆಗೆ ಯಾರ ಯಾರ ಕಾಲದಲ್ಲಿ ಏನಾಗಿದೆಯೆಂಬ ಬಗ್ಗೆ ತನಿಖೆ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಒತ್ತಾಯಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರ ವು 2006ರಿಂದ ಈವರೆಗೆ ಭ್ರಷ್ಟಾಚಾರ, ಈಗಿನ ಶೇ.40 ಕಮೀಷನ್‌ ಬಗ್ಗೆಯೂ ತನಿಖೆ ಮಾಡಿಸಬೇಕು ಎಂದರು.

ಯಾರ ಹಗರಣದ ಬಗ್ಗೆ ಸರ್ಕಾರ ತನಿಖೆ ಮಾಡುತ್ತದೆ? ಹಿಂದಿನ ಸರ್ಕಾರದ ತನಿಖೆ ಮಾಡಲು ತಕರಾರು ಇಲ್ಲ. ಜೊತೆಗೆ ಕಳೆದ 3 ವರ್ಷದಿಂದ ಆಗಿದ್ದನ್ನೂ ತನಿಖೆ ಮಾಡಬೇ ಕು. ನಾವು ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ ಮೇಲೆ ಜ್ಞಾನೋದಯವಾಯಿತಾ? ತನಿಖೆ ಮಾಡಬೇಡಿ ಅಂತಾ ನಿಮ್ಮನ್ನು ಯಾರು ತಡೆದಿದ್ದಾರೆ? ಅಧಿಕಾರ ಯಾರ ಕೈಯಲ್ಲಿದೆ ಯಪ್ಪಾ? ನೀವು ವಿಪಕ್ಷದಲ್ಲಿದ್ದಾಗ ಯಾಕೆ ಪ್ರಸ್ತಾಪ ಮಾಡಲಿಲ್ಲ? ನಾನು ತನಿಖೆಗೆ ಕೇಳುವುದಲ್ಲ. ನೀವೇ ತನಿಖೆ ಮಾಡಬೇಕಲ್ಲವೇ ಎಂದು ಸಿಎಂ ಬೊಮ್ಮಾಯಿಗೆ ಅವರು ಪ್ರಶ್ನಿಸಿದರು.

ಸಚಿವ ಸೋಮಣ್ಣ ಕ್ರಿಯಾಶೀಲ ಜನಪ್ರತಿನಿಧಿ: ಸಿಎಂ ಬೊಮ್ಮಾಯಿ

ಐದು ವರ್ಷಗಳ ಕಾಲ ವಿಪಕ್ಷದಲ್ಲಿದ್ದಿರಲ್ಲ ಆಗ ಪ್ರಶ್ನಿಸಬೇಕಿತ್ತಲ್ಲವೇ? 8 ವರ್ಷ ಸುಮ್ಮನಿದ್ದು, ಈಗ ಹಿಂದಿನ ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರದ ತನಿಖೆ ಮಾಡುತ್ತೇವೆಂದರೆ ಏನರ್ಥ? ಸಿದ್ದರಾಮಯ್ಯನ ಕಾಲದ್ದೂ ತನಿಖೆ ಮಾಡಲಿ. ಬಸವರಾಜ ಬೊಮ್ಮಾಯಿ ಅವದಿಯದ್ದೂ ತನಿಖೆ ಆಗಲಿ. 2006ರಿಂದ ಈವರೆಗಿನ ಎಲ್ಲದರ ಬಗ್ಗೆಯೂ ತನಿಖೆ ನಡೆ ಸಲಿ. ನಿಮ್ಮ ಸರ್ಕಾರದ ಶೇ.40 ಕಮೀಷನ್‌ ಬಗ್ಗೆಯೂ ತನಿಖೆ ಆಗಲಿ. ಸಿಐಡಿಯಿಂದ ತನಿಖೆ ಮಾಡಿದರೆ, ಎಡಿಜಿಪಿ ವಿರುದ್ಧ ತನಿಖೆ ಮಾಡಲು ಸಾಧ್ಯವೇ? ಬದಲಾಗಿ ತನಿಖೆಗಾಗಿ ಒಂದು ಆಯೋಗ ರಚಿಸಲಿ. ಹಿಂದೆ ವಿಪಕ್ಷದಲ್ಲಿದ್ದಾಗ ಏನು ಮಾಡಿದ್ದೀರಿ ಅಂತಾನೂ ತನಿಖೆ ಆಗಲಿ ಎಂದು ಅವರು ಹೇಳಿದರು.

Latest Videos
Follow Us:
Download App:
  • android
  • ios