ಬೆಂಗಳೂರು, (ಮಾ.28): ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ರಮೇಶ್‌ ಜಾರಕಿಹೊಳಿಗೆ ಎಸ್‌ಐಟಿ ನೋಟಿಸ್ ಜಾರಿ ಮಾಡಿದೆ.

ಇಂದು (ಭಾನುವಾರ) ಎಸ್‌ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿಗೆ ನೋಟಿಸ್ ಜಾರಿ ಮಾಡಿದ್ದು, ನಾಳೆ ಅಂದ್ರೆ ಮಾ.29 ಬೆಳಿಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

'ಎಸ್‌ಐಟಿ ಮುಂದಲ್ಲ, ನಾಳೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುತ್ತಾಳೆ ಸೀಡಿ ಲೇಡಿ..

 ವಿಚಾರಣೆಗಾಗಿ ಬೆಂಗಳೂರಿನ ಆಡುಗೋಡಿ ಟೆಕ್ನಿಕಲ್‌ ವಿಂಗ್‌ʼಗೆ ಹಾಜರಾಗಲು ತಿಳಿಸಿದ್ದಾರೆ. ಅಂದ್ಹಾಗೆ, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. 

ರಮೇಶ್ ಜಾರಕಿಹೊಳಿ ಮೇಲೆ ಸೆಕ್ಷನ್ 376 ದಾಖಲಾಗಿದ್ದು, ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ಮಾಡಬೇಕೆಂಬ ಆಗ್ರಹಗಳು ಕೇಳಿಬರುತ್ತಿವೆ. ಇದರ ಮಧ್ಯೆ ಎಸ್‌ಐಟಿ ನೋಟಿಸ್ ನೀಡಿರುವುದು ಭಾರೀ ಸಂಚಲನ ಮೂಡಿಸಿದೆ.

ಮತ್ತೊಂದೆಡೆ ನಾಳೆ (ಮಾ.29) 1ನೇ ಎಸಿಎಂಎಂ ಕೋರ್ಟಿಗೆ  ಯುವತಿ ಹಾಜರಾಗಲಿದ್ದು, ನ್ಯಾಯಾಧೀಶರ ಮುಂದೆ ಯುವತಿ  ಹೇಳಿಕೆ ನೀಡುತ್ತಾಳೆ ಎಂದು ಸಿ.ಟಿ. ಲೇಡಿ ಪರ ವಕೀಲ ಜಗದೀಶ್ ಮಾಹಿತಿ ಕೊಟ್ಟಿದ್ದಾರೆ