Asianet Suvarna News Asianet Suvarna News

ಸಿಎಂ ಶಿಂಧೆ ಭೇಟಿ ಬಳಿಕ ಬಾಳ್ ಠಾಕ್ರೆ ಸಮಾಧಿಗೆ ಗೋಮೂತ್ರ ಸಿಂಪಡಿಸಿದ ಉದ್ಧವ್ ಬಣ

ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಬುಧವಾರ ಶಿವಸೇನೆ ಸಂಸ್ಥಾಪಕ ಬಾಳ್‌ಠಾಕ್ರೆ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದರು. ಇದಾದ ಬಳಿಕ ಇಂದು ಬಾಳ್‌ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಬಾಳ್ ಠಾಕ್ರೆ ಸಮಾಧಿಗೆ ಗೋಮೂತ್ರ ಸಿಂಪಡಿಸಿ ಶುದ್ಧೀಕರಣಗೊಳಿಸಿದ್ದಾರೆ. 

Sindhe Uddav cold war continue, Uddhav Thackeray's Shivasena cleans Baal Thackeray Memorial with gau mutra after Cm Eknath  visit akb
Author
First Published Nov 17, 2022, 8:06 PM IST

ಪುಣೆ: ಶಿವಸೇನೆಯ ಎರಡು ಬಣಗಳ ನಡುವಿನ ಹಾವು ಮುಂಗುಸಿ ಕಿತ್ತಾಟ ಮತ್ತೆ ಮತ್ತೆ ಮಾಧ್ಯಮಗಳ ಕ್ಯಾಮರಾ ಕಣ್ಣಿಗೆ ಸಿಲುಕಿ ಸುದ್ದಿಗೆ ಗ್ರಾಸವಾಗುತ್ತಿದೆ. ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರು ಬುಧವಾರ ಶಿವಸೇನೆ ಸಂಸ್ಥಾಪಕ ಬಾಳ್‌ಠಾಕ್ರೆ ಅವರ ಸಮಾಧಿಗೆ ಭೇಟಿ ನೀಡಿ ನಮನ ಸಲ್ಲಿಸಿದ್ದರು. ಇದಾದ ಬಳಿಕ ಇಂದು ಬಾಳ್‌ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ಬಾಳ್ ಠಾಕ್ರೆ ಸಮಾಧಿಗೆ ಗೋಮೂತ್ರ ಸಿಂಪಡಿಸಿ ಶುದ್ಧೀಕರಣಗೊಳಿಸಿದ್ದಾರೆ. 

ಶಿವಸೇನೆ ಸಂಸ್ಥಾಪಕ ಬಾಳ್‌ ಠಾಕ್ರೆ ಅವರ ಪುಣ್ಯ ತಿಥಿ ಅಂಗವಾಗಿ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರು ಬಾಳ್‌ ಠಾಕ್ರೆ ಅವರ ಸಮಾಧಿ ಸ್ಥಳಕ್ಕೆ (Balasaheb Thackeray Memorial) ಭೇಟಿ ನೀಡಿ ಗೌರವ ನಮನ ಸಲ್ಲಿಸಿದ್ದರು. ಆದರೆ ಶಿವಸೇನೆಯನ್ನು ಒಡೆದು ಬಿಜೆಪಿ ಜೊತೆ ಸೇರಿ ಬಾಳ್‌ ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಬೀಳಿಸಿದ್ದಲ್ಲದೇ ನಂತರ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿ ಸಿಎಂ ಆಗಿರುವ ಏಕನಾಥ್ ಶಿಂಧೆ (Eknath Shinde) ಬಣದ ಬಗ್ಗೆ ಇತ್ತ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರ ಆಕ್ರೋಶವಿನ್ನು ತಣ್ಣಗಾದಂತಿಲ್ಲ. ಉದ್ಧವ್ ಬಣದ ಕಾರ್ಯಕರ್ತರು ಏಕನಾಥ್ ಸಿಂಧೆ ವಿರುದ್ಧ ಮನದೊಳಗೆ ಕತ್ತಿ ಮಸೆಯುತ್ತಿದ್ದಾರೆ. ಇದರ ಭಾಗವೇ ಗೋಮೂತ್ರ ಸಿಂಪಡಿಸಿ ಸಮಾಧಿ ಶುದ್ಧೀಕರಣ.

ಮಹಾರಾಷ್ಟ್ರದಲ್ಲಿ ಮತ್ತೆ ಉಂಟಾಗುತ್ತಾ ರಾಜಕೀಯ ಬಿಕ್ಕಟ್ಟು, ಹೊಸ ಬಾಂಬ್‌ ಸಿಡಿಸಿದ ಉದ್ಧವ್‌ ಠಾಕ್ರೆ!

ಸಿಎಂ ಏಕನಾಥ್ ಸಿಂಧೆ ಸಮಾಧಿಗೆ ಭೇಟಿ ನೀಡಿ ತೆರಳುತ್ತಿದ್ದಂತೆ ಇತ್ತ ಉದ್ಧವ್ ಠಾಕ್ರೆ (Uddhav Balasaheb Thackeray) ಬಣದ ಕಾರ್ಯಕರ್ತರು ಅಲ್ಲಿನ ಶಿವಾಜಿ ಪಾರ್ಕ್‌ (Shivaji Parks) ಗೆ ಆಗಮಿಸಿ ಅಲ್ಲಿ ಗೋಮೂತ್ರವನ್ನು (gau mutra) ಸಿಂಪಡಿಸಿ ಸ್ಥಳ ಶುದ್ಧಿಕರಣ ಮಾಡಿದ್ದಾರೆ. ನಂತರ ಈ ಬಗ್ಗೆ ಮಾತನಡಿದ ಬಾಳಾ ಸಾಹೇಬ್ ಬಂಚಿ ಶಿವಸೇನಾ ವಕ್ತಾರ ದೀಪಕ್ ಕೇಸರ್ಕರ್ (Deepak Kesarkar) ಮಾತನಾಡಿ, ನಾವು ಈ ಕ್ರಮವನ್ನು ಖಂಡಿಸುತ್ತೇವೆ. ಬಾಳಾ ಸಾಹೇಬ್ ಅವರು ಒಂದು ಪಕ್ಷ ಅಥವಾ ವ್ಯಕ್ತಿಗೆ ಸೀಮಿತವಾದವರಲ್ಲ. ಪ್ರತಿಯೊಬ್ಬರು ಪ್ರತಿಯೊಂದು ಪಕ್ಷವೂ ಗೌರವಿಸುವ ವ್ಯಕ್ತಿತ್ವ ಅವರದು ಎಂದು ಕೇಸರ್ಕರ್ ಹೇಳಿದರು. 

ಇತ್ತ ಬಾಳ್‌ಠಾಕ್ರೆ ಸ್ಥಾಪಿಸಿದ್ದ ಶಿವಸೇನೆಯ ಚಿಹ್ನೆ ಹಾಗೂ ಹಕ್ಕುಗಾರಿಕೆ ಬಗ್ಗೆಯೂ ಏಕನಾಥ್ ಶಿಂಧೆ ಬಣ ಹಾಗೂ ಉದ್ಧವ್ ಠಾಕ್ರೆ ಬಣದ ನಡುವೆ ಗುದ್ದಾಟವಿದೆ.  ಚುನಾವಣಾ ಆಯೋಗ ಸದ್ಯ ಶಿವಸೇನೆಯ ಚಿಹ್ನೆಯಾದ ಬಾಣ ಮತ್ತು ಬಿಲ್ಲನ್ನು ಬಳಸದಂತೆ ಎರಡೂ ಬಣಗಳಿಗೆ ಆದೇಶಿಸಿದೆ. ಒಂದೆಡೆ ಉದ್ಧವ್‌ ಠಾಕ್ರೆ ಭಾಳಾ ಸಾಹೇಬ್‌ ಠಾಕ್ರೆ ಕಟ್ಟಿದ ಶಿವಸೇನೆಗೆ ನಾನೇ ಉತ್ತರಾಧಿಕಾರಿ ಎಂದು ಹೇಳಿಕೊಂಡಿದ್ದಾರೆ. ಆದರೆ ಪಕ್ಷದ ನಾಲ್ಕನೇ ಮೂರು ಭಾಗಕ್ಕಿಂತಲೂ ಹೆಚ್ಚು ಶಾಸಕರು ಮತ್ತು ಸಂಸದರು ತಮ್ಮ ಜೊತೆಗಿದ್ದು, ನಿಜವಾದ ಶಿವ ಸೈನಿಕರು ಎಂದು ಕರೆದುಕೊಳ್ಳುತ್ತಿದ್ದಾರೆ. ಸದ್ಯ ಚೆಂಡು ಚುನಾವಣಾ ಆಯೋಗದಲ್ಲಿದ್ದು ಪಕ್ಷದ ಹೆಸರು ಮತ್ತು ಅಧಿಕೃತ ಚಿಹ್ನೆ ಯಾರ ಪರವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. 

"ಶಿಂಧೆ ಬಣಕ್ಕೆ ಒಲಿಯಲಿದೆ ಪಕ್ಷದ ಹೆಸರು, ಚಿಹ್ನೆ"; ಶಿವಸೇನೆ ಚಿಹ್ನೆ ವಿವಾದದ ಕುರಿತು Devendra Fadnavis

Follow Us:
Download App:
  • android
  • ios