Asianet Suvarna News Asianet Suvarna News

Karnataka By election: ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ರೂ ಸಾವಿರ ಮತ ಗಳಿಸಲಿಲ್ಲ JDS

  • ದಳಪತಿಗಳ ಲೆಕ್ಕಾಚಾರ ವರ್ಕೌಟ್ ಆಗಲಿಲ್ಲ
  • ಮುಸ್ಲಿಂ ಮತ ಗೆಲ್ಲೋಕೆ ಮುಸ್ಲಿಂ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಿದ್ರೂ ಸಾವಿರ ಮತವನ್ನೂ ಗೆಲ್ಲಲಿಲ್ಲ ಜೆಡಿಎಸ್(JDS)
Sindagi Hanagal Byelection Reasons for JDS defeat in assembly constituency dpl
Author
Bangalore, First Published Nov 2, 2021, 5:13 PM IST

ಹಾವೇರಿ(ನ.02): 18ನೇ ಸುತ್ತಿನ ಮತ ಎಣಿಕೆ  ಬಳಿಕದ ಬಲಾಬಲದ ನಂತರ 7325-ಮತಗಳಿಂದ ಕಾಂಗ್ರೆಸ್(Congress) ಮುನ್ನಡೆ ಸಾಧಿಸಿದೆ. ಬಿಜೆಪಿ: 75999 ಮತಗಳನ್ನು ಗಳಿಸಿದರೆ, ಕಾಂಗ್ರೆಸ್: 83324 ಹಾಗೂ ಜೆಡಿಎಸ್ 866 ಮತ ಗಳಿಸಿದೆ. ಏನೇನೋ ಕಸರತ್ತು ಮಾಡಿದರೂ ಜೆಡಿಎಸ್ ಸಾವಿರ ಮತ ಪಡೆಯುವುದಕ್ಕೂ ಸಾಧ್ಯವಾಗಿಲ್ಲ.

ಬಹಳಷ್ಟು ಪ್ರಯತ್ನ, ಪ್ರಚಾರ ಮಾಡಿಯೂ ಮತ ಪಡೆಯೋಕೆ ಜೆಡಿಎಸ್(JDS) ವಿಫಲವಾಗಿದ್ದು ಹೇಗೆ ಎಂಬುವುದು ಮಾತ್ರ ಮಿಲಿಯನ್ ಡಾಲರ್ ಪ್ರಶ್ನೆ. ಗೌಡರು, ಮಕ್ಕಳು ಹಾಗೂ ಮೊಮ್ಮಕ್ಕಳು ಕ್ಷೇತ್ರದಲ್ಲಿ ಮೊಕ್ಕಾಂ ಹೂಡಿ ಭರ್ಜರಿ ಪ್ರಚಾರ ಮಾಡಿದ್ದರು. ಆದರೆ ಸಾವಿರ ಮತವೂ ಬರದಿರುವುದು ಅಚ್ಚರಿಗೆ ಕಾರಣವಾಗಿದೆ.

ತಲೆಕೆಳಗಾದ ದಳಪತಿಗಳ ಲೆಕ್ಕಾಚಾರ:

ಉಪಚುನಾವಣೆಯಲ್ಲಿ(Election) ಮುಸ್ಲಿಂ ಅಸ್ತ್ರ ಪ್ರಯೋಗಿಸಿದ್ದ ದಳಪತಿಗಳು ಮತಗಳನ್ನು ಸೆಳೆಯುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದರು. ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟು ಅದೇ ಸಮುದಾಯದ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಿದ್ದರು. ಸಿಂದಗಿ ಹಾಗೂ ಹಾನಗಲ್ ಎರಡೂ ಕ್ಷೇತ್ರಗಳೆರಡಲ್ಲೂ ಮುಸ್ಲಿಂ ಅಭ್ಯರ್ಥಿಗಳನ್ನ ಕಣಕ್ಕಿಳಿಸಿದ್ದ ದಳಪತಿಗಳು ಹಾಗಿದ್ದರೂ ಮತಗಳನ್ನು ಪಡೆಯೋಕೆ ವಿಫಲರಾಗಿದ್ದಾರೆ.

ಸಿಂದಗಿಯಲ್ಲಿ ನಾಜಿಯಾ ಅಂಗಡಿ ಹಾಗೂ ಹಾನಗಲ್ ನಲ್ಲಿ ನಿಯಾಜ್ ಶೇಖ್ ಗೆ ಟಿಕೆಟ್ ನೀಡಲಾಗಿತ್ತು. ಆದರೆ, ಎರಡೂ ಕ್ಷೇತ್ರಗಳಲ್ಲಿ ಮುಸ್ಲಿಂ ಸಮುದಾಯ ಜೆಡಿಎಸ್ ಬೆನ್ನಿಗೆ ನಿಂತಿಲ್ಲ. ಜೆಡಿಎಸ್ ಪಕ್ಷ ಮುಸ್ಲಿಂ ಸಮುದಾಯದ ಪರವಾಗಿದೆ ಎಂದು ಒತ್ತಿ ಹೇಳಿದರೂ ನಿರೀಕ್ಷಿತ ಫಲ ದೊರೆತಿಲ್ಲ.

Karnataka By election: ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ BJP ಗೆಲುವಿಗೆ ಕಾರಣವಾಗಿದ್ದೇನು ?

ಮುಂದಿನ ಸಾರ್ವತ್ರಿಕ ಚುನಾವಣೆಗೆ ಕನಿಷ್ಠ 20ಕ್ಕೂ ಹೆಚ್ಚು ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಭರವಸೆ ನೀಡಲಾಗಿದ್ದು 
ದಳಪತಿಗಳಿಂದ ಭರವಸೆ ಬಂದರೂ ಮುಸ್ಲಿಂ ಸಮುದಾಯ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಸವಕಲ್ಯಾಣ ಉಪಚುನಾವಣೆಯಲ್ಲಿ ಬರೋಬ್ಬರಿ 11 ಸಾವಿರ ಮತಗಳನ್ನ ಪಡೆದಿದ್ದ ಮುಸ್ಲಿಂ ಅಭ್ಯರ್ಥಿ ಆದರೆ, ಈ ಬಾರಿಯ ಉಪಚುನಾವಣೆಯಲ್ಲಿ ಈ ಲೆಕ್ಕಾಚಾರ ವರ್ಕೌಟ್ ಆಗಿಲ್ಲ.

ಮುಸ್ಲಿಂ ಅಭ್ಯರ್ಥಿಗಳನ್ನ ಹಾಕಿದರೂ ನಿರೀಕ್ಷೆಯಂತೆ ಮತಗಳು ಸಿಕ್ಕಿಲ್ಲ. ಅಭ್ಯರ್ಥಿಗಳು ಕನಿಷ್ಠ ಠೇವಣಿಯನ್ನೂ ಗಳಿಸಲಾಗದೆ ಮುಖಭಂಗ ಅನುಭವಿಸಿದ್ದಾರೆ. ಸಿಂದಗಿಯಲ್ಲಿ ಬರೋಬ್ಬರಿ 30 ಸಾವಿರ ಮುಸ್ಲಿಂ ಮತಗಳಿದ್ದರೂ ಜೆಡಿಎಸ್ ಅಭ್ಯರ್ಥಿ ಪಡೆದಿರುವುದು ಕೇವಲ 4353 ಮತಗಳು. ಹಾನಗಲ್‌ನಲ್ಲಿ ಸಾವಿರ ಮತಗಳನ್ನೂ ಪಡೆಯಲಾಗದೆ ಅಭ್ಯರ್ಥಿ ನಿಯಾಜ್ ಶೇಖ್ ಭಾರೀ ಮುಜುಗರ ಎದುರಿಸಿದ್ದಾರೆ.

ಈ ಕ್ಷೇತ್ರದಲ್ಲೂ ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮತಗಳಿದ್ದರೂ ಜೆಡಿಎಸ್ ಬೆನ್ನಿಗೆ ಜನರು ನಿಂತಿಲ್ಲ. ಈ ಮೂಲಕ ದಳಪತಿಗಳ ಲೆಕ್ಕಾಚಾರ ಉಲ್ಟಾ ಹೊಡೆದಿದೆ.

Karnataka By Election: ಹಾನಗಲ್‌ನಲ್ಲಿ BJP ಸೋಲಿಗೆ ಕಾರಣವಾಗಿದ್ದೇನು ?

ಅಲ್ಪಸಂಖ್ಯಾತ ಮತಗಳು ವರ್ಗಾವಣೆ ಆಗೋದನ್ನು ತಡೆಯಲು ಜಮೀರ್ ಅಹಮದ್ ಎಂಟ್ರಿಯಾಗಿದ್ದು 4 ದಿನ - 30 ಸ್ಥಳಗಳಲ್ಲಿ ಸಿಂದಗಿ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಮುಸ್ಲಿಂ ಕಾಲೋನಿಗಳಲ್ಲಿ‌ ಜಮೀರ್ ತಡರಾತ್ರಿ ಪ್ರಚಾರ ಮಾಡಿದ್ದು 
ಹಾನಗಲ್ ಕ್ಷೇತ್ರದಲ್ಲಿ ಎರಡು ದಿನ‌ ಪ್ರಚಾರ ಮಾಡಿದ್ದರು.

ಸಿಂದಗಿ (Sindagi) ಮತ್ತು ಹಾನಗಲ್‌ ಉಪಚುನಾವಣೆ (Hanagal By Election) ಮತದಾನ ಶನಿವಾರ ನಡೆದಿತ್ತು. ಮತದಾರ ತನ್ನ ನಿರ್ಣಯವನ್ನು ಮತಯಂತ್ರಗಳಲ್ಲಿ ಭದ್ರಪಡಿಸಿದ ನಂತರ ಗೆಲುವಿನ ಕುರಿತ ಕುತೂಹಲ ಹೆಚ್ಚಾಗಿತ್ತು. ಅ.30ರಂದು ನಡೆದ ಉಪಚುನಾವಣೆಯ ಫಲಿತಾಂಶ (By Election Result) ನ.2ರಂದು ಪ್ರಕಟವಾಗಿದೆ.

ಸಿಂದಗಿ (Sindagi) ಉಪ ಚುನಾವಣೆ (By election) ಮತದಾನ ಪ್ರಕ್ರಿಯೆ ಶನಿವಾರ ತಡರಾತ್ರಿ ಪೂರ್ಣಗೊಂಡಿತ್ತು. ಮತಯಂತ್ರಗಳನ್ನು ಬಿಗಿ ಭದ್ರತೆಯೊಂದಿಗೆ ವಿಜಯಪುರ (Vijayapura) ನಗರದಲ್ಲಿರುವ ಸೈನಿಕ ಶಾಲೆಯ ಒಡೆಯರ್‌ ಹೌಸ್‌ನ ಸ್ಟ್ರಾಂಗ್‌ ರೂಂನಲ್ಲಿ (Strong Room) ಇಡಲಾಗಿತ್ತು. ಅದೇರೀತಿ ಹಾನಗಲ್‌ ಕ್ಷೇತ್ರದ ಮತಯಂತ್ರಗಳು ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ (Govt Engineering College) ಇರಿಸಲಾಗಿತ್ತು. ಎರಡೂ ಕಡೆಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿತ್ತು.

Follow Us:
Download App:
  • android
  • ios