'ಮೋದಿ ಪ್ರಧಾನಿಯಾದ ಮೇಲೆ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಪರ್ವ'

*  ಹಾವೇರಿ ಜಿಲ್ಲೆಯು ಲಸಿಕೆ ನೀಡುವಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ
*  ದೇಶದ ಪ್ರತೀ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಯೋಜನೆ
*  ಕೇಂದ್ರದ ಹಲವಾರು ಯೋಜನೆಗಳ ಲಾಭ ಜನರಿಗೆ ಲಭ್ಯವಾಗಿದೆ

Siddharaj Kalakoti Talks Over PM Narendra Modi grg

ರಾಣಿಬೆನ್ನೂರು(ಜೂ.10): ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಭಾರತೀಯ ಜನತಾ ಪಕ್ಷದ ಸರ್ಕಾರವು ದೇಶದಲ್ಲಿ ಹಿಂದೆಂದೂ ಕಾಣದಂತಹ ಅಭಿವೃದ್ಧಿ ಪರ್ವಕ್ಕೆ ಚಾಲನೆ ನೀಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಗರ ಹಾಗೂ ಗ್ರಾಮೀಣ ಮಂಡಲಗಳ ವತಿಯಿಂದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 8 ವರ್ಷಗಳಾದ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಹಿಂದೆ ಅಧಿಕಾರದ ನಡೆಸಿದ ಕಾಂಗ್ರೆಸ್‌ ಪಕ್ಷದ ಆಡಳಿತವನ್ನು ಬಿಜೆಪಿ ಪಕ್ಷದ ಆಡಳಿತದೊಂದಿಗೆ ತುಲನೆ ಮಾಡಿ ನೋಡಬಹುದು. ಕಳೆದ ಐದು ವರ್ಷಗ​ಳಲ್ಲಿ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಫಲವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮಾ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೃಷಿ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣ ಬಜೆಟ್‌ ಘೋಷಣೆ ಮಾಡಿ ಭತ್ತ ಸೇರಿದಂತೆ ಪ್ರಮುಖ ಬೆಳೆಗಳಿಗೆ ಗರಿಷ್ಠ ಬೆಂಬಲ ಬೆಲೆ ನೀಡಲಾಗಿದೆ.

ಕೃಷಿ ಸಿಂಚಾಯಿ ಯೋಜನೆಯಡಿ ಫಸಲ ಭೀಮಾ ಯೋಜನೆ, ಬೆಳೆ ಹಾನಿ, ಕಿಸಾನ ಸಮ್ಮಾನ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕಳೆದ ಮೂರು ವರ್ಷಗಳಲ್ಲಿ ಪ್ರತಿ ಮನೆಗೂ ನಲ್ಲಿ ನೀರು ಯೋಜನೆಯಡಿ ದೇಶಾದ್ಯಂತ 6.2 ಕೋಟಿ ಮನೆಗಳಿಗೆ ಕೊಳವೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಪ್ರಪಂಚದಲ್ಲಿಯೇ ಕೋವಿಡ್‌ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲಾಗಿದೆ. ಹಾವೇರಿ ಜಿಲ್ಲೆಯು ಲಸಿಕೆ ನೀಡುವಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ದೇಶದ ಪ್ರತೀ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಕೃಷಿ ಸಮ್ಮಾನ ಯೋಜನೆಯಡಿ ಜಿಲ್ಲೆಯ 1,97,426 ರೈತರಿಗೆ .346.64 ಕೋಟಿಗಳ ಆರ್ಥಿಕ ನೆರವು ಒದಗಿಸಲಾಗಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಜಿಲ್ಲೆಯ 65607 ಹೆಕ್ಟೇರ್‌ ಭೂಮಿಗೆ .136.55 ಕೋಟಿ ವೆಚ್ಚದಲ್ಲಿ 65769 ಫಲಾನುಭವಿಗಳಿಗೆ ನೀರಾವರಿ ಸೌಲಭ್ಯ ಹಾಗೂ 31712 ರೈತರಿಗೆ ತಾಡಪತ್ರಿಗಳನ್ನು ವಿತರಿಸಲಾಗಿದೆ. ಇಂತಹ ಹಲವಾರು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಜತೆಯಲ್ಲಿ ಕೇಂದ್ರದಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಿರುವ ಹೆಗ್ಗಳಿಕೆ ಮೋದಿ ಅವರಿಗೆ ಸಲ್ಲುತ್ತದೆ ಎಂದರು.

Haveri: ಸಬ್ ಕಾ ಸಾತ್ ಸಬ್ ಕಾ ನಾಶ್ ಮಾಡಿದ್ದಾರೆ ನರೇಂದ್ರ ಮೋದಿ: ಸಿದ್ದರಾಮಯ್ಯ

ಶಾಸಕ ಅರುಣಕುಮಾರ ಪೂಜಾರ ಮಾತನಾಡಿ, ಸ್ಥಳೀಯ ವಿಧಾನಸಭಾ ಕ್ಷೇತ್ರವ್ಯಾಪ್ತಿ ಸೇರಿದಂತೆ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಫಲ ಲಭಿಸಿದೆ. ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ರಾಣಿಬೆನ್ನೂರು ನಗರ ವ್ಯಾಪ್ತಿಯಲ್ಲಿ 1834 ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಶೌಚಾಲಯ ನಿರ್ಮಾಣಕ್ಕೆ .9.54 ಕೋಟಿ ವ್ಯಯಿಸಲಾಗಿದೆ. ಘನ ಮತ್ತು ದ್ರವ ತ್ಯಾಜ್ಯ ವಸ್ತುಗಳ ವಿಲೇವಾರಿಗೆ .18.77 ಕೋಟಿ ಹಾಗೂ ಸಮುದಾಯ ಶೌಚಾಲಯಗಳಿಗಾಗಿ .1.8 ಕೋಟಿ ಬಿಡುಗಡೆ ಮಾಡಲಾಗಿದೆ.

ನಗರ ಪ್ರದೇಶದಲ್ಲಿ ಶೌಚಾಲಯ ನಿರ್ಮಾಣಕ್ಕೆ, ತ್ಯಾಜ್ಯ ವಸ್ತು ವಿಲೇವಾರಿಗೆ, ಶಿಕ್ಷಣ ಮತ್ತು ಜನ ಜಾಗೃತಿಗಾಗಿ .20.71 ಕೋಟಿ ಬಿಡುಗಡೆ ಮಾಡಿದ್ದು ಆ ಪೈಕಿ ಈಗಾಗಲೇ .18.46 ಕೋಟಿ ವ್ಯಯಿಸಲಾಗಿದೆ. ತಾಲೂಕಿನಲ್ಲಿ 2014ರಿಂದ ಇಲ್ಲಿಯ ವರೆಗೆ 21 ನೂತನ ಬ್ಯಾಂಕ್‌ಗಳ ಶಾಖೆಗಳನ್ನು ಪ್ರಾರಂಭಿಸಲಾಗಿದೆ. ತಾಲೂಕಿನಲ್ಲಿ 86315 ಪ್ರಧಾನ ಮಂತ್ರಿ ಕಿಸಾನ್‌ ಕಾರ್ಡ್‌ ವಿತರಿಸಲಾಗಿದೆ. ಅಮೃತ ಸಿಟಿ ಯೋಜನೆಯಡಿ ನಗರದಲ್ಲಿ .118.32 ಕೋಟಿ ವೆಚ್ಚದಲ್ಲಿ ನಿರಂತರ ನೀರು ಪೂರೈಕೆ ಯೋಜನೆ ಬಹುತೇಕ ಪೂರ್ಣಗೊಂಡು ಕಾರ್ಯರೂಪಕ್ಕೆ ಬಂದಿದೆ. ಒಟ್ಟಾರೆ ಕೇಂದ್ರದ ಹಲವಾರು ಯೋಜನೆಗಳ ಲಾಭ ತಾಲೂಕಿನ ಜನರಿಗೆ ಲಭ್ಯವಾಗಿದೆ ಎಂದರು.

ನೇಕಾರ ಪ್ರಕೋಷ್ಠ ರಾಜ್ಯ ಸಂಚಾಲಕ ಡಾ. ಬಿ.ಎಸ್‌. ಕೇಲಗಾರ, ಪಕ್ಷದ ದಾವಣಗೆರಿ ಜಿಲ್ಲಾ ಉಸ್ತುವಾರಿ ಕೆ. ಶಿವಲಿಂಗಪ್ಪ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕೇಲಗಾರ, ನಗರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ನರಸಗೊಂಡರ, ಮಾಜಿ ಅಧ್ಯಕ್ಷ ಚೋಳಪ್ಪ ಕಸವಾಳ, ಅನಿಲ ಸಿದ್ದಾಳಿ, ಪ್ರಕಾಶ ಪೂಜಾರ, ಮಲ್ಲಿಕಾರ್ಜುನ ಅಂಗಡಿ, ನಾಗರಾಜ ಪವಾರ, ಶಶಿಧರ ಹೊಸಳ್ಳಿ, ಜಗದೀಶ ತೆಂಬದ, ಅನಿಲ ಸಿದ್ದಾಳಿ, ಸಿದ್ಧು ಚಿಕ್ಕಬಿದರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು. 

Latest Videos
Follow Us:
Download App:
  • android
  • ios