ಡ್ರಗ್ಸ್ ಕೇಸಿನ ಆರೋಪಿ ಜೊತೆಗಿರೋ ಫೋಟೋಗೆ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಿದ್ದು
ಡ್ರಗ್ಸ್ ಕೇಸ್ನಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಶೇಖ್ ಫಾಝಿಲ್ ಜೊತೆಗಿನ ಫೋಟೋ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ಬಾಗಲಕೋಟೆ, (ಸೆ.14): ಡ್ರಗ್ಸ್ ಕೇಸ್ನಲ್ಲಿ ಸ್ಯಾಂಡಲ್ವುಡ್ನ ನಟಿಯರಿಬ್ಬರು ಸೇರಿ ಅವರ ಆಪ್ತರನ್ನು ಸಿಸಿಬಿ ಬಂಧಿಸುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಡ್ರಗ್ಸ್ ಮಾಫಿಯಾದಲ್ಲಿ ರಾಜಕಾರಣಿಗಳ ನಂಟಿನ ಬಗ್ಗೆಯೂ ಗುಮಾನಿ ಇದ್ದು, ಡ್ರಗ್ಸ್ ಪೆಡ್ಲರ್ಗಳ ಜತೆಗೆ ಪ್ರಮುಖ ನಾಯಕರು ಇರುವ ಫೋಟೋಗಳು ಒಂದೊಂದೇ ವೈರಲ್ ಆಗುತ್ತಿವೆ.
ಅದರಂತೆ ಡ್ರಗ್ಸ್ ಕೇಸ್ನಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಶೇಖ್ ಫಾಝಿಲ್ ಜತೆಗೆ ಶಾಸಕ ಜಮೀರ್ ಅಹ್ಮದ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇರುವ ಫೋಟೋ ವೈರಲ್ ಆಗಿದೆ. ಜಮೀರ್ ಆಪ್ತ ಶೇಖ್ ಫಾಝಿಲ್. ಆದ್ರೆ ಸಿದ್ದರಾಮಯ್ಯಗೂ ಆರೋಪಿಗೂ ಏನು ಸಂಬಂಧ ಎಂದು ಭಾರೀ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
'ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ'
ಇಂದು (ಸೋಮವಾರ) ಬಾದಾಮಿ ಕ್ಷೇತ್ರದ ಗೋವನಕೊಪ್ಪ ಗ್ರಾಮಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಶೇಖ್ ಫಾಝಿಲ್ ಯಾರೂ ಅಂತಾನೆ ನನ್ಗೆ ಗೊತ್ತಿಲ್ಲ. ಐ ಡೋಂಟ್ ನೋ ಹೂ ಹಿ ಇಜ್ ಎಂದರು.
ಅವನ್ಯಾರೋ ಫಾಝಿಲ್ ನನಗೆ ಗೊತ್ತಿಲ್ಲ. ಜಮೀರ್ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಅನ್ನೋದ್ದಕ್ಕೆ ಎವಿಡೆನ್ಸ್ ಬೇಕು. ಸಾಕ್ಷಿ ಇದ್ರೆ ಪೊಲೀಸರು ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಖಾರವಾಗಿಯೇ ಪ್ರತಿಕ್ರಿಯಿಸಿದರು.
ಬಿ.ವೈ. ವಿಜಯೇಂದ್ರ ಜತೆ ಕೆ.ಆರ್. ಪೇಟೆಯಲ್ಲಿ ನಟಿ ರಾಗಿಣಿ ಕ್ಯಾಂಪೇನ್ ಮಾಡಿದ್ದರು. ಅಷ್ಟಕ್ಕೆ ವಿಜಯೇಂದ್ರ ಕೂಡ ಡ್ರಗ್ಸ್ ಜಾಲದಲ್ಲಿ ಇದ್ದಾರೆ ಎಂದು ಹೇಳೋಕೆ ಆಗುತ್ತಾ? ಎಂದು ರಪ್ರಶ್ನಿಸಿದ ಸಿದ್ದರಾಮಯ್ಯ, ಫಾಝಿಲ್ ಬಗ್ಗೆ ಸಾಕ್ಷಿ ಇದ್ರೆ ಕ್ರಮಕೈಗೊಳ್ಳಿ ಎಂದು ತಿಳಿಸಿದರು.
ಯಾರೋ ಬಂದು ಫೋಟೋ ತಗೋತಾರೆ.. ಏನ್ ಮಾಡೋಕಾಗುತ್ತೆ? ಕಳ್ಳರು ಬಂದು ನಮ್ಮ ಜತೆ ಫೋಟೋ ತಗೋಬಹುದು. ನಮಗೇನು ಗೊತ್ತಾಗುತ್ತೆ? ಯಾರ ಜತೆ ಫೋಟೋ ಇದೆ ಅನ್ನೋದು ಮುಖ್ಯವಲ್ಲ. ಡ್ರಗ್ಸ್ ಜಾಲದಲ್ಲಿ ಇದ್ದಾರಾ? ಅನ್ನೋದು ಮುಖ್ಯ ಎಂದು ಹೇಳಿದರು.