ಬೆಂಗಳೂರು, (ಸೆ.14): ಡ್ರಗ್ಸ್​ ಕೇಸ್​ನಲ್ಲಿ ತಲೆಮರೆಸಿಕೊಂಡಿರುವ ಶೇಖ್ ಶಾಸಕ ಜಮೀರ್​ ಅಹ್ಮದ್​ ಖಾನ್ ಆಪ್ತ ಡ್ರಗ್ಸ್ ಪೆಡ್ಲರ್ ಶೇಖ್​ ಫಾಝಿಲ್. ಈತನ ಜತೆಗೆ ಜಮೀರ್​ ಮತ್ತು ಸಿದ್ದರಾಮಯ್ಯ ಒಟ್ಟಾಗಿ ಕಾಣಿಸಿಕೊಂಡಿರುವ ಫೋಟೋವನ್ನು ಸಚಿವ ಸಿ.ಟಿ.ರವಿ ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಪ್ರದರ್ಶಿಸಿದರು.

ಬಳಿಕ ಮಾತನಾಡಿದ ಸಿಟಿ ರವಿ, ಈ ಫೋಟೋ ಏನನ್ನು ಹೇಳುತ್ತೆ?' ಎಂದು ಪ್ರಶ್ನಿಸಿದರು. ಅಲ್ಲದೆ 'ಈ ಫೋಟೋ ಜನ್ಮಜನ್ಮಾಂತರದ ಸಂಬಂಧ ಎನ್ನುತ್ತಿದೆ ಎಂದು ಕಿಚಾಯಿಸಿದರು.

ಜಮೀರ್ ಆಪ್ತನ ಐಷಾರಾಮಿ ಜೀವನಕ್ಕೆ ಸಿಸಿಬಿಯೆ 'ಶೇಖ್'; ಜಮೀರ್‌ಗೂ ನಡುಕ ಶುರು! 

'ಈ ಫೋಟೋದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಇದ್ದಾರೆ. ಇದು ಬಹಳ ಆತ್ಮೀಯ ಸಂಬಂಧ ಎಂದು ಈ ಮುಖಭಾವ ಹೇಳುತ್ತೆ. ಇದು ಯಾವುದೋ ಕುಟುಂಬದ ಕಾರ್ಯಕ್ರಮ. ಇದು ಅಪರಿಚಿತರ ಜತೆ ತೆಗೆಸಿಕೊಂಡ ಫೋಟೋ ಅಂತೂ ಅಲ್ಲ' ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.

'ಅಲ್ಪಸಂಖ್ಯಾತರ ಗುರಾಣಿ ಹಿಡಿದು ತಪ್ಪಿಸಿಕೊಳ್ಳೋದು ಬೇಡ. ಷಡ್ಯಂತ್ರದ ಗುರಾಣಿ ಹಿಡಿಯೋದೂ ಬೇಡ. ಕಳ್ಳನ ಹೆಂಡತಿ ಯಾವತ್ತಿದ್ದರೂ ಒಂದು ದಿನ… (ಡ್ಯಾಷ್) ಆಗಲೇಬೇಕು' ಎಂದು ಜಮೀರ್ ವಿರುದ್ಧ ಸಿ.ಟಿ. ರವಿ ಕಿಡಿಕಾರಿದರು.