ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಕೆಡವಿದ್ದು ಬಿಎಸ್‌ವೈ: ಅನ್ನ ಹಳಸಿತ್ತು; ನಾಯಿ ಕಾದಿತ್ತು ಎಂದ ಸಿದ್ದರಾಮಯ್ಯ
ನಾವು ರಾಜ್ಯದ ಜನತೆಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಕೊಟ್ಟ ಭರವಸೆಗಿಂತ ಹೆಚ್ಚುವರಿಯಾಗಿ 30 ಯೋಜನೆ ಜಾರಿಗೆ ತಂದಿದ್ದೇವೆ. ಬಿಜೆಪಿಗರು 600 ಭರವಸೆ ನೀಡಿತ್ತು. ಅದರಲ್ಲಿ 50 ಭರವಸೆ ಮಾತ್ರ ಈಡೇರಿಸಿದೆ. ಬಿಜೆಪಿ 550 ಭರವಸೆ ಕೈ ಬಿಟ್ಟಿದೆ.ಇದರ ಬಗ್ಗೆ ಬಿಜೆಪಿಗರು ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ವರದಿ:- ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ
ಹಣ ಖರ್ಚು ಮಾಡಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದಿಂದ ಒಳ್ಳೆ ಆಡಳಿತ ಸಿಗೋದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಬಾಗಲಕೋಟೆ ಜಿಲ್ಲೆಯ ಜಮಖಂಡಿ(Jamakhandi)ಯಲ್ಲಿಂದು ನಡೆದ ಪ್ರಜಾಧ್ವನಿ ಯಾತ್ರೆ(Prajadhwani yatre) ಸಮಾವೇಶದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡಿ ರಚನೆಯಾಗಿದ್ದು ಬಿಜೆಪಿ ಸರ್ಕಾರ. ಇಂತಹ ಸರಕಾರದಿಂದ ಒಳ್ಳೆ ಆಡಳಿತ ಕೊಡಲಿಕ್ಕೆ ಹೇಗೆ ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದರು.
ಶಿಗ್ಗಾವಿ ಜನರು ದೈವಭಕ್ತರು, ಸಜ್ಜನರು: ಸಿಎಂ ಬಸವರಾಜ ಬೊಮ್ಮಾಯಿ
ಅನ್ನ ಹಳಸಿತ್ತು; ನಾಯಿ ಕಾದಿತ್ತು!
ಮೈತ್ರಿ ಸರ್ಕಾರದ ಬಗ್ಗೆ ಪ್ರಸ್ತಾಪಿಸಿದ ಸಿದ್ದರಾಮಯ್ಯನವರು, ಹಿಂದಿನ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್‌ನವರು ಸರಿಯಾಗಿ ಆಡಳಿತ ಮಾಡಲಿಲ್ಲ. ಬಿಜೆಪಿಯವರು ಬಿಳಿಸೋಕೆ ಕಾಯ್ತಿದ್ರು. ಯಡಿಯೂರಪ್ಪ(BS Yadiyurappa) ಸರ್ಕಾರ ಬಿಳಿಸೋಕೆ ದುಡ್ಡು ಇಟ್ಟುಕೊಂಡು ಕುಳಿತಿದ್ದರು. ಆಗ 17 ಜನ ಶಾಸಕರನ್ನು ಬಿಜೆಪಿ ಖರೀದಿ ಮಾಡಿ ಸರಕಾರ ರಚಿಸಿತು. ಅನ್ನ ಹಳಸಿತ್ತು; ನಾಯಿ ಕಾದಿತ್ತು ಎಂದರು.
ಅನ್ನ ಹಳಸಿತ್ತು; ನಾಯಿ ಕಾದಿತ್ತು ಎನ್ನುವ ಪರಿಸ್ಥಿತಿ ವೇಳೆ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕುವರೇ ವರ್ಷ ಆಯಿತು. ಯಾವುದೇ ಗ್ರಾಮಕ್ಕೂ ಒಂದು ಆಶ್ರಯ ಮನೆ ನೀಡಿಲ್ಲ. ವಸತಿ ಸಚಿವ ಸೋಮಣ್ಣ(V Somanna) ನಾವು ಮಂಜೂರು ಮಾಡಿದ ಮನೆಗಳಿಗೆ ನಾವು ಕೊಟ್ಟಿದ್ದೇವೆ ಎನ್ನುತ್ತಿದ್ದಾರೆ. ನಾವು ಕೊಟ್ಟ ಮನೆಗಳಿಗೂ ಸರಿಯಾದ ಅನುದಾನ ನೀಡಲಿಲ್ಲ ಎಂದರು.
ನಾವು ರಾಜ್ಯದ ಜನತೆಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ. ಕೊಟ್ಟ ಭರವಸೆಗಿಂತ ಹೆಚ್ಚುವರಿಯಾಗಿ 30 ಯೋಜನೆ ಜಾರಿಗೆ ತಂದಿದ್ದೇವೆ. ಬಿಜೆಪಿಗರು 600 ಭರವಸೆ ನೀಡಿತ್ತು. ಅದರಲ್ಲಿ 50 ಭರವಸೆ ಮಾತ್ರ ಈಡೇರಿಸಿದೆ. ಬಿಜೆಪಿ 550 ಭರವಸೆ ಕೈ ಬಿಟ್ಟಿದೆ.ಇದರ ಬಗ್ಗೆ ಬಿಜೆಪಿಗರು ಚರ್ಚೆಗೆ ಬರಲಿ ಎಂದು ಆಹ್ವಾನಿಸಿದರು.
ಸಿಎಂ ಬೊಮ್ಮಾಯಿಗೆ ಸಿದ್ದರಾಮಯ್ಯ ಸವಾಲ್:
ಮುಖ್ಯಮಂತ್ರಿ ಬೊಮ್ಮಾಯಿ(CM Basavaraj bommai) ಬಾಯಿ ಬಿಟ್ರೆ ಧಮ್ಮಇದ್ರೆ ಅಂತಾರೆ, ನಮಗೆ ಇಲ್ಲಪ್ಪ, ನಿಮಗೆ ಇದೇಯಲ್ಲಾ,ಕೊಟ್ಟ ಭರವಸೆ ಈಡೇರಿಸಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಹೇಳಿದ ಬಿಜೆಪಿಗರು ಸಾಲ ಮನ್ನಾ ಮಾಡಲಿಲ್ಲ.ಬಿಜೆಪಿ ಅಧಿಕಾರಕ್ಕೆ ಬಂದ್ರೆ 10 ಗಂಟೆ ತ್ರೀ ಫೀಸ್ ಕರೆಂಟ್ ಕೊಡ್ತುತ್ತೇವೆ ಎಂದು ಹೇಳಿದ್ದರು. ಕೊಟ್ಟಿದ್ದಾರಾ? ಬಿಜೆಪಿಗರು ಬರೀ ಸುಳ್ಳು ಹೇಳೋದು ಎಂದು ದೂರಿದರು.
ಸುಳ್ಳು ಬಿಜೆಪಿಗರ ಮನೆ ದೇವರು. ಶೇಡಂನಲ್ಲಿ ಮೋದಿ ಹಕ್ಕು ಪತ್ರ ಕೊಡಲು ಬಂದಿದ್ದರು. ಅದನ್ನು ತಯಾರಿ ಮಾಡಿದವರು ನಾವು. ಕಾಂಗ್ರೆಸ್ ಸರ್ಕಾರ ಮಾಡಿದ ಕೆಲಸಗಳನ್ನ ಬಿಜೆಪಿ ಉದ್ಘಾಟನೆ ಮಾಡುತ್ತಿದೆ. ಆ ಯೋಜನೆಗಳನ್ನು ನಾವು ಮಾಡ್ತಿದ್ದೇವೆ ಅಂತಿದ್ದಾರೆ. ಬರೀ ಸುಳ್ಳು,ಬರೀ ಹಸಿ ಸುಳ್ಳು ಹೇಳ್ತಾರೆ. ಮೋದಿ(Narendra Modi) ಅಚ್ಚೇ ದಿನ್ ಆಯೇಗೆ ಅಂತಾ ಹೇಳಿದ್ರು, ಬಂತಾ ಒಳ್ಳೆ ದಿನಾ ಎಂದ ಸಿದ್ದರಾಮಯ್ಯ ಪ್ರಶ್ನಿಸಿದರು.
ಸುಳ್ಳಿನ ಸುಳಿಯಲ್ಲಿ ಸಿದ್ದರಾಮಯ್ಯ: ಸಿಎಂ ಬೊಮ್ಮಾಯಿ ಲೇವಡಿ
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಎಂ.ಬಿ.ಪಾಟೀಲ, ಎಚ್.ವೈ.ಮೇಟಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಮತ್ತಿತರರು ಉಪಸ್ಥಿತರಿದ್ದರು