Asianet Suvarna News Asianet Suvarna News

ಇವರೆ ನೋಡಿ ಸಿದ್ದರಾಮಯ್ಯ ಸರ್ಕಾರದ ನೂತನ ಸಚಿವರು..!

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ ಅವರು ಉತ್ತಮ ಆಡಳಿತದಿಂದ ಗಮನ ಸೆಳೆದವರು. 2013ರಿಂದ 2018ರವರೆಗೆ ಐದು ವರ್ಷ ಸಿಎಂ ಆಗಿದ್ದ ಅವರು ಸ್ವತಃ ಹಣಕಾಸು ತಜ್ಞರು. ಹೀಗಾಗಿ ಆರ್ಥಿಕ ಇತಿಮಿತಿಯಲ್ಲಿ ರೈತರು, ಬಡವರು, ಮಹಿಳೆಯರು, ಶ್ರೀಸಾಮಾನ್ಯರು, ಅಹಿಂದ ಸಮುದಾಯ, ವಿದ್ಯಾರ್ಥಿಗಳಿಗಾಗಿ ಹತ್ತು ಹಲವು ಯೋಜನೆ ರೂಪಿಸಿ ಗಮನಸೆಳೆದಿದ್ದರು.

Siddaramaiahs Cabinet New Ministers of the Government in Karnataka grg
Author
First Published May 21, 2023, 7:01 AM IST

ಬೆಂಗಳೂರು(ಮೇ.21): ರಾಜ್ಯದ ನೂತನ ಉಪಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿರುವ ಡಿ.ಕೆ.ಶಿವಕುಮಾರ್‌ ಅವರು ಸಂಘಟನಾ ಚತುರ ಹಾಗೂ ಕಾಂಗ್ರೆಸ್ಸಿನ ಟ್ರಬಲ್‌ ಶೂಟರ್‌ ಎಂದೇ ಹೆಸರುವಾಸಿಯಾದವರು. ಪಕ್ಷಕ್ಕೆ ಸಂಕಷ್ಟಎದುರಾದಾಗಲೆಲ್ಲಾ ಮುಂದೆ ನಿಲ್ಲುವವರು. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್‌ ರಾಜ್ಯದಲ್ಲಿ ಪುಟಿದೇಳುವಂತೆ ಮಾಡಿದ ಶಿವಕುಮಾರ್‌, ಆ ಪಕ್ಷ ಗದ್ದುಗೆಗೇರಿದ್ದರ ಹಿಂದೆ ಪ್ರಮುಖ ಪಾತ್ರ ವಹಿಸಿ ಇದೀಗ ಉನ್ನತ ಹುದ್ದೆಗೇರಿದ್ದಾರೆ.

ಕೆಪಿಸಿಸಿಯಲ್ಲಿ ಡಿಕೆಶಿ ಹೈಟೆಕ್‌ ಶುಭಾರಂಭ

ನೂತನ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಎಂದರೆ, ಪಕ್ಷದ ಬಾವುಟವನ್ನು ಕೈಗೆ ಇಟ್ಟು, ಹೂಗುಚ್ಛ ಕೊಟ್ಟು ಅಭಿನಂದಿಸುವುದು. ಶುಭಾಶಯ ಹೇಳುವುದು ಇಷ್ಟಕ್ಕೆ ಸೀಮಿತವಾಗಿಬಿಡುತ್ತಿತ್ತು. ಆದರೆ ಅದನ್ನು ಉತ್ಸವದಂತೆ ಮಾಡಿ 2018 ಹಾಗೂ 2019ರ ಚುನಾವಣೆ ಸೋಲು, ಮೈತ್ರಿ ಸರ್ಕಾರ ಪತನದ ಬಳಿಕ ಕಳೆಗುಂದಿದ್ದ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದವರು ಡಿ.ಕೆ.ಶಿವಕುಮಾರ್‌. ಇದಕ್ಕೆ ಅವರು ತಂತ್ರಜ್ಞಾನದ ನೆರವು ಪಡೆದುಕೊಂಡರು. ಕೆಪಿಸಿಸಿ ಅಧ್ಯಕ್ಷರ ಪ್ರಮಾಣವಚನ 7800 ಕಡೆ ನೇರ ಪ್ರಸಾರವಾಗುವಂತೆ ಮಾಡಿದರು. ಗ್ರಾಮ ಪಂಚಾಯಿತಿ ಹಂತದವರೆಗೆ ಟಿ.ವಿ. ಪರದೆ ಅಳವಡಿಸಿ ಜೂಮ್‌ ಆ್ಯಪ್‌ ಮೂಲಕ ಕಾರ್ಯಕ್ರಮ ವೀಕ್ಷಣೆ ಮಾಡುವಂತೆ ಮಾಡಿ 10 ಲಕ್ಷ ಮಂದಿ ನೇರ, ಪರೋಕ್ಷವಾಗಿ ಕಾರ್ಯಕ್ರಮದಲ್ಲಿ ತೊಡಗಿಸುವಂತೆ ಮಾಡಿದರು. ಇದು ಏಷ್ಯಾದಲ್ಲೇ ಅತಿದೊಡ್ಡ ಆನ್‌ಲೈನ್‌ ಕಾರ್ಯಕ್ರಮ ಎಂಬ ಅಭಿದಾನಕ್ಕೆ ಭಾಜನವಾಗಿತ್ತು.

ಉತ್ತರ ಕನ್ನಡ: ನೂತನ ಕಾಂಗ್ರೆಸ್ ಸರ್ಕಾರದಲ್ಲಿ ದೇಶಪಾಂಡೆಗೆ ಯಾವ ಹುದ್ದೆ?

ಆಡಳಿತ ಚತುರ ಸಿದ್ದು 2ನೇ ಬಾರಿ ಸಿಎಂ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯ ಅವರು ಉತ್ತಮ ಆಡಳಿತದಿಂದ ಗಮನ ಸೆಳೆದವರು. 2013ರಿಂದ 2018ರವರೆಗೆ ಐದು ವರ್ಷ ಸಿಎಂ ಆಗಿದ್ದ ಅವರು ಸ್ವತಃ ಹಣಕಾಸು ತಜ್ಞರು. ಹೀಗಾಗಿ ಆರ್ಥಿಕ ಇತಿಮಿತಿಯಲ್ಲಿ ರೈತರು, ಬಡವರು, ಮಹಿಳೆಯರು, ಶ್ರೀಸಾಮಾನ್ಯರು, ಅಹಿಂದ ಸಮುದಾಯ, ವಿದ್ಯಾರ್ಥಿಗಳಿಗಾಗಿ ಹತ್ತು ಹಲವು ಯೋಜನೆ ರೂಪಿಸಿ ಗಮನಸೆಳೆದಿದ್ದರು.

ಅನುಭವಿ ಆಡಳಿತಗಾರ

ಸಿದ್ದರಾಮಯ್ಯ ಹಲವು ಸರ್ಕಾರಗಳನ್ನು ಕಂಡವರು. ಈವರೆಗೆ 9 ಬಾರಿ ಶಾಸಕ, 2 ಬಾರಿ ಡಿಸಿಎಂ ಹಾಗೂ ಒಮ್ಮೆ ಮುಖ್ಯಮಂತ್ರಿಯಾಗಿರುವ ಅವರಿಗೆ ಆಡಳಿತ ವ್ಯವಸ್ಥೆ ಹಾಗೂ ಅಧಿಕಾರಶಾಹಿಯ ಬಗ್ಗೆ ಸಂಪೂರ್ಣ ಅರಿವಿದೆ. ಅವರು ಅಧಿಕಾರಿಗಳು ಹೇಳಿದ್ದನ್ನು ಕಣ್ಣುಮುಚ್ಚಿ ಜಾರಿಗೆ ತರುವವರಲ್ಲ. ಅಧಿಕಾರಿಗಳ ಜತೆ ಚರ್ಚಿಸಿ, ವಾದಿಸಿ, ಅವರು ಹೇಳಿದ್ದರಲ್ಲಿ ತಪ್ಪಿದ್ದರೆ ಸರಿಪಡಿಸಿ, ಸರಿ ಇದ್ದರೆ ಒಪ್ಪಿಕೊಂಡು ಅನುಷ್ಠಾನಗೊಳಿಸುವುದರಲ್ಲಿ ಅವರು ಸಿದ್ಧಹಸ್ತರು. ಹೀಗಾಗಿ ಅಧಿಕಾರಶಾಹಿಗೆ ಸಿದ್ದರಾಮಯ್ಯ ಅವರನ್ನು ಏಮಾರಿಸುವುದು ಸಾಧ್ಯವಿಲ್ಲ. ಆಡಳಿತವನ್ನು ಹಿಡಿತದಲ್ಲಿಟ್ಟುಕೊಳ್ಳುತ್ತಾರೆ. ಸರಿಯಾದ ದಾರಿಯಲ್ಲಿ ಆಡಳಿತ ಯಂತ್ರ ಸಾಗಲು ಮಾರ್ಗದರ್ಶನ ಮಾಡುತ್ತಾರೆ.

ದಕ್ಷ ಮುಖ್ಯಮಂತ್ರಿ

ಯಾರನ್ನೋ ಓಲೈಸಲು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸದೆ ಮುಗುಮ್ಮಾಗಿ ಇರುವ ಸ್ವಭಾವ ಸಿದ್ದರಾಮಯ್ಯ ಅವರಿಗೆ ಇಲ್ಲ. ತಮ್ಮ ಅಭಿಪ್ರಾಯಗಳನ್ನು ಯಾರ ಮುಲಾಜಿಗೆ ಇಲ್ಲದೆ ಹೇಳುತ್ತಾರೆ. ಅದರಿಂದ ಎಷ್ಟೇ ವಿವಾದವಾದರೂ ಸಮರ್ಥಿಸಿಕೊಳ್ಳುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಲ ವಿವಾದಗಳು, ಗಲಭೆಗಳು, ಕೆಲವೊಂದು ಸಾವುಗಳು ಸಂಭವಿಸಿದಾಗ ಆ ಪರಿಸ್ಥಿತಿಯನ್ನು ಅತ್ಯಂತ ನಾಜೂಕಾಗಿ ನಿಭಾಯಿಸಿದ್ದರು.

ಕೇಳಚಂದ್ರ ಜೋಸೆಫ್‌ ಜಾರ್ಜ್‌

ಕ್ಷೇತ್ರ-ಸರ್ವಜ್ಞನಗರ
ಜಾತಿ-ಕ್ರಿಶ್ಚಿಯನ್‌
ವಿದ್ಯಾರ್ಹತೆ-ಪದವಿ ಅಪೂರ್ಣ
ಆರನೇ ಬಾರಿ ಶಾಸಕ
ಐದನೇ ಬಾರಿ ಸಚಿವ

ಐದು ದಶಕಗಳಿಗಿಂತ ಹೆಚ್ಚು ಕಾಲದಿಂದ ರಾಜಕೀಯದಲ್ಲಿರುವ ಕೆ.ಜೆ. ಜಾಜ್‌ರ್‍ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಹಿರಿಯ ಸದಸ್ಯರಲ್ಲಿ ಒಬ್ಬರು. ಹುಟ್ಟಿದ್ದು ಕೇರಳದ ತಿರುವಾಂಕೂರಿನ ಚಿಂಗವನಂ (ಈಗಿನ ಕೊಟ್ಟಾಯಂ)ನಲ್ಲಿ. ತಂದೆ ಚಾಕೋ ಜೋಸೆಫ್‌, ತಾಯಿ ಮರಿಯಮ್ಮ. 1946ರ ಆಗಸ್ಟ್‌ 24ರಂದು ಜನಿಸಿದರು.
1968ರಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದ ಜಾಜ್‌ರ್‍, 1969ರಲ್ಲಿ ಗೋಣಿಕೊಪ್ಪಲು ಪಟ್ಟಣ ಯುವ ಕಾಂಗ್ರೆಸ್‌ ಅಧ್ಯಕ್ಷರಾಗಿ ನಂತರ ಹಂತ ಹಂತವಾಗಿ ಪಕ್ಷದಲ್ಲಿ ವಿವಿಧ ಹುದ್ದೆ ನಿಭಾಯಿಸಿದರು. ಭಾರತಿನಗರ ಹಾಗೂ ಸರ್ವಜ್ಞನಗರ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಆಯ್ಕೆಯಾಗಿದ್ದಾರೆ. ಎಸ್‌. ಬಂಗಾರಪ್ಪ , ವೀರೇಂದ್ರ ಪಾಟೀಲ್‌, ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಸಾರಿಗೆ, ಆಹಾರ ಮತ್ತು ನಾಗರಿಕ ಪೂರೈಕೆ, ವಸತಿ ಮತ್ತು ನಗರಾಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ, ಕೈಗಾರಿಕೆ, ಐಟಿ ಬಿಟಿ ಹಾಗೂ ಗೃಹ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.

ರಾಮಲಿಂಗಾರೆಡ್ಡಿ

ಕ್ಷೇತ್ರ-ಬಿಟಿಎಂ ಲೇಔಟ್‌
ಜಾತಿ-ರೆಡ್ಡಿ
ವಿದ್ಯಾರ್ಹತೆ-ಪದವಿ
ಎಂಟು ಬಾರಿ ಶಾಸಕ
ಐದನೇ ಬಾರಿ ಸಚಿವ
ಸುಮಾರು ನಾಲ್ಕು ದಶಕಗಳಿಗಿಂತ ಹೆಚ್ಚು ಕಾಲದಿಂದ ರಾಜಕೀಯ ಕ್ಷೇತ್ರದಲ್ಲಿರುವ ರಾಮಲಿಂಗಾರೆಡ್ಡಿ ರಾಜಧಾನಿ ಬೆಂಗಳೂರಿನ ಪ್ರಭಾವಿ ನಾಯಕ. 1973-74ರಲ್ಲೇ ವಿದ್ಯಾರ್ಥಿ ನಾಯಕರಾಗಿ, ಬೆಂಗಳೂರು ವಿವಿ ಸೆನೆಟ್‌ ಸದಸ್ಯರಾಗಿ, ಬೆಂಗಳೂರು ಪಾಲಿಕೆ ಸದಸ್ಯರಾಗಿ ನಂತರ ಕೆಪಿಸಿಸಿ ಸದಸ್ಯರಾಗಿ, ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸತತವಾಗಿ ಎಂಟು ಬಾರಿ ಜಯನಗರ ಹಾಗೂ ಬಿಟಿಎಂ ಲೇ ಔಟ್‌ ಕ್ಷೇತ್ರದಿಂದ ಆಯ್ಕೆಯಾಗಿರುವುದು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ವೀರಪ್ಪ ಮೊಯ್ಲಿ, ಎಸ್‌.ಎಂ.ಕೃಷ್ಣ, ಎನ್‌. ಧರ್ಮಸಿಂಗ್‌ ಹಾಗೂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಆಹಾರ ಮತ್ತು ನಾಗರಿಕ ಪೂರೈಕೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಸಾರಿಗೆ ಮತ್ತು ಗೃಹ ಸಚಿವರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

ಬಿ.ಝಡ್‌. ಜಮೀರ್‌ ಅಹಮದ್‌ ಖಾನ್‌

ಕ್ಷೇತ್ರ-ಚಾಮರಾಜಪೇಟೆ
ಜಾತಿ-ಮುಸ್ಲಿಂ
ವಿದ್ಯಾರ್ಹತೆ-ಎಸ್‌ಎಸ್‌ಎಲ್‌ಸಿ
ಐದು ಬಾರಿ ಶಾಸಕ
ಎರಡನೇ ಬಾರಿ ಸಚಿವ
ಇತ್ತೀಚಿನ ವರ್ಷಗಳಲ್ಲಿ ಮುಸ್ಲಿಂ ಸಮುದಾಯದ ಪ್ರಭಾವಿ ಮುಖಂಡರಾಗಿರುವ ಜಮೀರ್‌ ಅಹಮದ್‌ ಖಾನ್‌ ಮೂಲತಃ ಸಾರಿಗೆ ಉದ್ಯಮಿ. ಎಸ್‌.ಎಂ.ಕೃಷ್ಣ ರಾಜೀನಾಮೆಯಿಂದ ತೆರವಾಗಿದ್ದ ಚಾಮರಾಜಪೇಟೆ ಕ್ಷೇತ್ರಕ್ಕೆ 2005ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದ ಜಮೀರ್‌ ಅಹಮದ್‌ ಅವರು ನಂತರ ನಡೆದ ಎಲ್ಲ ಚುನಾವಣೆಗಳಲ್ಲಿ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಕಷ್ಟದಲ್ಲಿರುವವರಿಗೆ ಯಾವುದೇ ರೀತಿ ತಾರತಮ್ಯ ಮಾಡದೇ ಸಹಾಯ ಮಾಡುವ ಗುಣ ಜಮೀರ್‌ ಅಹಮದ್‌ ಅವರದ್ದಾಗಿದೆ. ಹಿಂದೆ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಹಜ್‌ ಮತ್ತು ವಕ್ಫ್ ಖಾತೆ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಎಚ್‌.ಡಿ. ಕುಮಾರಸ್ವಾಮಿ ಅವರ ಆಪ್ತರಾಗಿದ್ದ ಜಮೀರ್‌ ಅಹಮದ್‌ ನಂತರ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ಡಾ.ಜಿ.ಪರಮೇಶ್ವರ್‌

ಕ್ಷೇತ್ರ: ಕೊರಟಗೆರೆ
ಶಿಕ್ಷಣ: ಎಂಎಸ್ಸಿ, ಪಿಎಚ್‌ಡಿ
ಜಾತಿ: ಪರಿಶಿಷ್ಟಜಾತಿ (ಬಲಗೈ)
ಎಷ್ಟುಬಾರಿ ಶಾಸಕ: 6ನೇ ಬಾರಿ (1989, 1999, 2008, 2014, 2018, 2023)
ಎಷ್ಟನೇ ಬಾರಿ ಸಚಿವ: 5ನೇ ಬಾರಿ
ಪರಿಚಯ: ತುಮಕೂರು ತಾಲೂಕು ಗೊಲ್ಲಹಳ್ಳಿಯಲ್ಲಿ ಹೆಚ್‌.ಎಂ.ಗಂಗಾಧರಯ್ಯ ಹಾಗೂ ಗಂಗಮಾಳಮ್ಮ ದಂಪತಿಗೆ 1951 ಆಗಸ್ಟ್‌ 6 ರಂದು ಜನಿಸಿದ ಪರಮೇಶ್ವರ್‌ ಅವರಿಗೀಗ 72 ವರ್ಷ ವಯಸ್ಸು. 1989ರಲ್ಲಿ ಮಧುಗಿರಿಯಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1993ರಲ್ಲಿ ವೀರಪ್ಪ ಮೊಯ್ಲಿ ಸಂಪುಟದಲ್ಲಿ ರೇಷ್ಮೆ ಸಚಿವರಾಗಿದ್ದರು. 1999ರಲ್ಲಿ ಮಧುಗಿರಿಯಿಂದ ಜಯಗಳಿಸಿ, ಎಸ್‌.ಎಂ ಕೃಷ್ಣ ಸರ್ಕಾರದಲ್ಲಿ ಉನ್ನತ ಶಿಕ್ಷಣ ಸೇರಿ ಪ್ರಮುಖ ಖಾತೆಗಳ ನಿರ್ವಹಣೆ. 2008ರಲ್ಲಿ ಕೊರಟಗೆರೆಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆ, 2010ರಿಂದ 2018ರವೆಗೂ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಣೆ. 2013ರಲ್ಲಿ ಕೊರಟಗೆರೆಯಿಂದ ಸೋತು, 2014ರಲ್ಲಿ ವಿಧಾ ನ ಪರಿಷತ್‌ಗೆ ಆಯ್ಕೆಯಾದ ಇವರು ಸಿದ್ದರಾಮಯ್ಯ ಸರ್ಕಾರದಲ್ಲಿ ಗೃಹಸಚಿವರಾಗಿ ಕಾರ್ಯನಿರ್ವಹಿಸಿದ್ದರು. 2018ರಲ್ಲಿ ಕೊರಟಗೆರೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ ಸಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ ಆಯ್ಕೆ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು. 2023ರಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಪ್ರಿಯಾಂಕ್‌ ಖರ್ಗೆ

ಹೆಸರು: ಪ್ರಿಯಾಂಕ್‌ ಎಂ. ಖರ್ಗೆ
ಕ್ಷೇತ್ರ: ಚಿತ್ತಾಪುರ (ಮೀಸಲು)
ಶಿಕ್ಷಣ: ಪಿಯುಸಿ, ಸರ್ಟಿಫೈಯ್ಡ್‌ ಪ್ರೊಫೆಷನಲ್‌ ಇನ್‌ ಕಂಪ್ಯೂಟರ್‌ ಆಟ್ಸ್‌ರ್‍ ಆಂಡ್‌ ಎನಿಮೇಷನ್‌
ಜಾತಿ: ದಲಿತ (ಪರಿಶಿಷ್ಟಜಾತಿ-ಬಲಗೈ)
ಎಷ್ಟನೇ ಬಾರಿ ಶಾಸಕ: 3ನೇ ಬಾರಿಗೆ ಶಾಸಕ (2013, 2018 ಹಾಗೂ 2023)
ಎಷ್ಟನೇ ಬಾರಿ ಸಚಿವ: 3 ನೇ ಬಾರಿಗೆ ಸಚಿವ
ಪರಿಚಯ: ನವಂಬರ್‌ 22, 1978ರಲ್ಲಿ ಜನಿಸಿದ ಪ್ರಿಯಾಂಕ್‌ ಖರ್ಗೆ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ, ರಾಧಾಬಾಯಿ ಖರ್ಗೆಯವರ ಪುತ್ರರಾಗಿದ್ದಾರೆ. 1998ರಲ್ಲಿ ಎನ್‌ಎಸ್‌ ಯುಐ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಇವರು, ಮೊದಲ ಬಾರಿ 2009ರ ಉಪ ಚುನಾವಣೆಯಲ್ಲಿ ಚಿತ್ತಾಪುರ ಎಸ್‌ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿ ಸೋತಿ ದ್ದರು. ನಂತರ 2013 ರಿಂದ ಸತತ 3 ಬಾರಿ ಚಿತ್ತಾಪುರದಿಂದಲೇ ಗೆದ್ದಿದ್ದಾರೆ. ಮೊದಲ ಬಾರಿ 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ, ಬಿಟಿ ಹಾಗೂ ಪ್ರವಾ ಸೋದ್ಯಮ ಸಚಿವರಾಗಿದ್ದರು. ಎರಡನೆಯ ಬಾರಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ 2018ರಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ ಸಲ್ಲಿಸಿರುವ ಅವರು, ಇದೀಗ 2023ರಲ್ಲಿ ರಚನೆಯಾಗಿರುವ ಬಹುಮತದ ಕಾಂಗ್ರೆಸ್‌ ಸರ್ಕಾರದಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸಂಪುಟದಲ್ಲಿ ಮೂರನೇ ಬಾರಿಗೆ ಸಚಿವರಾಗಿದ್ದಾರೆ.

ಕೆ.ಎಚ್‌.ಮುನಿಯಪ್ಪ

ಹೆಸರು: ಕೆ.ಎಚ್‌.ಮುನಿಯಪ್ಪ
ಕ್ಷೇತ್ರ: ದೇವನಹಳ್ಳಿ
ಶಿಕ್ಷಣ: ಬಿ.ಎ., ಎಲ್‌ಎಲ್‌ಬಿ
ಜಾತಿ: ಪರಿಶಿಷ್ಟಜಾತಿ (ಎಡಗೈ)
ಎಷ್ಟನೇ ಬಾರಿ ಶಾಸಕ: ಮೊದಲ ಬಾರಿ
ಎಷ್ಟನೇ ಬಾರಿ ಸಚಿವ: ಮೊದಲ ಬಾರಿ
ಪರಿಚಯ: ಮಾಚ್‌ರ್‍ 7, 1948ರಲ್ಲಿ ಕೋಲಾರದ ಕಂಬದಹಳ್ಳಿಯಲ್ಲಿ ಜನಿಸಿದ ಕಂಬದಹಳ್ಳಿ ಹನುಮಪ್ಪ ಮುನಿಯಪ್ಪ 60ರ ದಶಕದಿಂದಲೂ ರಾಜಕೀಯ ವಲಯದಲ್ಲಿ ಸಕ್ರಿಯ ರಾಗಿದ್ದಾರೆ. ವೃತ್ತಿಯಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ್ದ ಇವರು, ಕೋಲಾರ ಲೋಕಸಭಾ ಕ್ಷೇತ್ರದಿಂದ ಸತತ 7 ಬಾರಿ ( 1996, 1998, 1999, 2004, 2009, 2012, 2014)ಸಂಸದರಾಗಿದ್ದ ಅವರು, 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಪರಾಭವಗೊಂಡರು. ಬಳಿಕ ಇದೀಗ ರಾಜ್ಯ ರಾಜಕಾರಣದಲ್ಲಿ ತಮ್ಮ ಇನ್ನಿಂಗ್‌ ಆರಂಭಿಸಿ, ದೇವನಹಳ್ಳಿ ಮೀಸಲು ಕ್ಷೇತ್ರದಿಂದ ಚುನಾಯಿತರಾಗಿ ಇದೇ ಮೊದಲ ಬಾರಿಗೆ ರಾಜ್ಯ ಶಾಸನಸಭೆ ಪ್ರವೇಶಿಸಿದ್ದಾರೆ. ಕೇಂದ್ರದಲ್ಲಿ ಬಂದರು, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಖಾತೆ ರಾಜ್ಯ ಸಚಿವರಾಗಿ, ರೈಲ್ವೇ ಖಾತೆಯ ರಾಜ್ಯ ಸಚಿವರಾಗಿ, ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ರಾಜ್ಯ ಸಚಿವ (ಸ್ವತಂತ್ರ ನಿರ್ವಹಣೆ)ರಾಗಿ ಕಾರ‍್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಎಂ.ಬಿ.ಪಾಟೀಲ

ಹೆಸರು: ಮಲ್ಲನಗೌಡ ಬಸನಗೌಡ ಪಾಟೀಲ
ಕ್ಷೇತ್ರ: ಬಬಲೇಶ್ವರ
ಶಿಕ್ಷಣ: ಬಿಇ ಸಿವಿಲ್‌ ಪದವಿ
ಜಾತಿ: ಲಿಂಗಾಯತ (ಕುಡು ಒಕ್ಕಲಿಗ)
ಎಷ್ಟನೇ ಬಾರಿ ಶಾಸಕ?: ಸತತ 6ನೇ ಬಾರಿ ( 1991, 2004, 2008, 2013, 2018, 2023)
ಎಷ್ಟನೇ ಬಾರಿ ಸಚಿವ?: 3ನೇ ಬಾರಿ
ವಿಜಯಪುರದಲ್ಲಿ 7 ಅಕ್ಟೋಬರ 1964ರಂದು ಜನಿಸಿದ ಇವರು ತಮ್ಮ 27ನೇ ವಯಸ್ಸಿಗೇ ತಂದೆ ಬಿ.ಎಂ.ಪಾಟೀಲರ ಆಕಸ್ಮಿಕ ನಿಧನದ ಬೆನ್ನಲ್ಲೆ ರಾಜಕಾರಣಕ್ಕೆ ಪ್ರವೇಶಿಸಿದ ಇವರು 1991ರಲ್ಲಿ ತಿಕೋಟಾ ಕ್ಷೇತ್ರದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1998ರಲ್ಲಿ ವಿಜಯಪುರ ಲೋಕಸಭಾ ಸಂಸದರಾಗಿಯೂ ಆಯ್ಕೆಯಾಗಿ ಸೇವೆ ಸಲ್ಲಿಸಿದ್ದಾರೆ. ಬಳಿಕ 2004ರಲ್ಲಿ ತಿಕೋಟಾ ಕ್ಷೇತ್ರದಿಂದ ಶಾಸಕರಾಗಿ ಪುನರಾಯ್ಕೆ, 2008, 2013, 2018, 2023ರಲ್ಲಿ ಸತತ ನಾಲ್ಕು ಬಾರಿ ಬಬಲೇಶ್ವರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. 2013ರಲ್ಲಿ ಸಿದ್ದರಾಮಯ್ಯ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿ, 2018ರಲ್ಲಿ ಸಮ್ಮಿಶ್ರ ಸರ್ಕಾರದ ಕುಮಾರಸ್ವಾಮಿ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ‍್ಯ ನಿರ್ವಹಿಸಿದ್ದಾರೆ. 2022 ಫೆಬ್ರವರಿಯಿಂದ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಮುಂದುವರಿದು, ಇದೀಗ 2023 ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಿಂದಲೇ ಶಾಸಕರಾಗಿ ಆಯ್ಕೆಯಾಗಿದ್ದಾರೆ.

‘ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್‌' ಮೈಲಾರಲಿಂಗೇಶ್ವರ ಕಾರ್ಣಿಕ ಹೇಳಿದ್ದು ನಿಜವಾಯ್ತು!

ಸತೀಶ್‌ ಜಾರಕಿಹೊಳಿ 

ಹೆಸರು: ಸತೀಶ್‌ ಲಕ್ಷ್ಮಣರಾವ್‌ ಜಾರಕಿಹೊಳಿ
ಕ್ಷೇತ್ರ: ಯಮಕನಮರಡಿ
ಶಿಕ್ಷಣ: ಪಿಯುಸಿ
ಜಾತಿ: ವಾಲ್ಮೀಕಿ ನಾಯಕ
ಎಷ್ಟನೇ ಬಾರಿ ಶಾಸಕ: 6ನೇ ಬಾರಿ
ಎಷ್ಟನೇ ಬಾರಿ ಸಚಿವ: 4ನೇ ಬಾರಿ
ಪರಿಚಯ: 1998ರಲ್ಲಿ ವಿಧಾನ ಪರಿಷತ್‌ ಸದಸ್ಯರಾಗಿ ರಾಜಕೀಯ ಪ್ರವೇಶಿಸಿದ ಸತೀಶ ಜಾರಕಿಹೊಳಿ, ಜಿಲ್ಲೆಯಲ್ಲಿ ಇಂದಿಗೂ ಪ್ರಭಾವಿ ಉದ್ಯಮಿ ಮತ್ತು ಜಾರಕಾರಣಿಯಾಗಿ ಗುರುತಿಸಿಕೊಂಡಿದ್ದಾರೆ. ಸ್ವಂತ ಬಲ, ವರ್ಚಸ್ಸಿನಿಂದ ರಾಜಕಾರಣಕ್ಕೆ ಎಂಟ್ರಿ ಕೊಟ್ಟಸತೀಶ ಜಾರಕಿಹೊಳಿ, 2008ರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿ ಯಮಕನಮರಡಿ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಮೊದಲು ಶಾಸಕರಾಗಿ ಇಂದಿನವರೆಗೂ ಆ ಕ್ಷೇತ್ರವನ್ನೇ ಕಾಯ್ದುಕೊಂಡಿದ್ದಾರೆ. 2004-2005ರಲ್ಲಿ ಧರ್ಮಸಿಂಗ್‌ ಸಂಪುಟದಲ್ಲಿ ಜವಳಿ ಖಾತೆ, 2013ರಿಂದ 2016ರವರೆಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಅಬಕಾರಿ ಮತ್ತು ಸಣ್ಣ ಕೈಗಾರಿಕೆ ಖಾತೆ ಮತ್ತು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು. ಈಗ 2023ರಲ್ಲೂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 2021ರಿಂದ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.

Follow Us:
Download App:
  • android
  • ios