ಬೀದ​ರ್(ಅ.27): ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ‘ಭಾವಿ ಮುಖ್ಯಮಂತ್ರಿ’ ಚರ್ಚೆಯನ್ನು ‘ಮಾಜಿ ಮುಖ್ಯಮಂತ್ರಿ’ ಸಿದ್ದರಾಮಯ್ಯ ಬಹು ಗಂಭೀರವಾಗಿಯೇ ಪರಿಗಣಿಸಿದಂತಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಬೆಂಗಲಿಗರನ್ನು ಮಾತಿನಲ್ಲೇ ಚೂಟಿದ್ದಾರೆ.

ಬಸವಕಲ್ಯಾಣದಲ್ಲಿ ದಿ. ಶಾಸಕ ಬಿ.ನಾರಾಯಣರಾವ್ ಅವರ ಸಮಾಧಿ ಸ್ಥಳದಲ್ಲಿ ಭಾನುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾಲ್ಗೊಂಡು ಮಾತನಾಡುವ ವೇಳೆ ಸಿದ್ದರಾಮಯ್ಯ ಅವರ ಪಂಚೆ ಜಾರುತ್ತಿತ್ತು. ಈ ಸಂದರ್ಭದಲ್ಲಿ ಅವರು ಜಾರುತಿರುವ ಪಂಚೆಯನ್ನು ಸರಿಪಡಿಸಿಕೊಂಡು ಕಟ್ಟಿಕೊಂಡಿದ್ದಾರೆ.

'ಸಿದ್ದರಾಮಯ್ಯ ಧಮ್‌, ಆಡಳಿತ ಎರಡನ್ನೂ ನೋಡಿದ್ದೇನೆ'

ಆ ಸಂದರ್ಭದಲ್ಲಿ ಪಂಚೆ ಕಳಚುತ್ತಿರುವುದು ಒಳ್ಳೆಯ ಸಂಕೇತವೇ ಆಗಿದೆ ಸರ್. ಮುಂದೆ ನೀವು ಮತ್ತೆ ಮುಖ್ಯಮಂತ್ರಿಗಳಾಗಬಹುದು ಎಂದ ಸ್ಥಳೀಯ ಮುಖಂಡರು ಹೇಳಿದ್ದಾರೆ. ಆಗ ನಗುತ್ತಲೇ ಉತ್ತರಿಸಿದ ಸಿದ್ದರಾಮಯ್ಯ, ಏ ಹಾಗೆಲ್ಲ ಹೇಳಬೇಡ್ರಪ್ಪಾ, ಇದನ್ನು ಕೇಳಿಸಿಕೊಳ್ಳುವವರಿಗೆ ನೋವಾಗುತ್ತೆ ಎಂದಿದ್ದಾರೆ. ಅಷ್ಟೇ ಅಲ್ಲ ಮುಂದುವರೆದು, ಅದೆಲ್ಲ ಮುಂದೆ ಸಮಯ ಬಂದಾಗ ಜನ ಏನ್ತೀರ್ಮಾನ ಮಾಡ್ತಾರೆ ಅಂತಾ ನೋಡೋಣ ಎಂದು ಹೇಳಿದ್ದಾರೆ.