ಸಿದ್ದರಾಮಯ್ಯನ ಮಗ ವಿಕ್ಟೋರಿಯಾ ಆಸ್ಪತ್ರೆಯ ಸ್ಕ್ಯಾನಿಂಗ್ ಸೆಂಟರ್ ನಡೆಸ್ತಾರೆ!
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರ ಮಗನಿಗೆ ಸ್ಕ್ಯಾನಿಂಗ್ ಸೆಂಟರ್ ನಡೆಸಲು ವ್ಯವಸ್ಥೆ ಮಾಡಿ, ಶಾಶ್ವತವಾಗಿ ಹಣ ಬರುವಂತೆ ಮಾಡಿದ್ದಾರೆ.
ಬೆಂಗಳೂರು (ಮೇ 07): ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರ ಮಗನಿಗೆ ಸ್ಕ್ಯಾನಿಂಗ್ ಸೆಂಟರ್ ನಡೆಸಲು ವ್ಯವಸ್ಥೆ ಮಾಡಿ, ಶಾಶ್ವತವಾಗಿ ಹಣ ಬರುವಂತೆ ಮಾಡಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಕ್ಟೊರಿಯಾಯದಲ್ಲಿ ಸಿದ್ದರಾಮಯ್ಯ ಮಗ ಸ್ಕಾನಿಂಗ್ ಸೆಂಟರ್ ನಡೆಸ್ತಾರೆ. ಶಾಸಕ ಆದ ಮೇಲೆ ಅವರು ಹೊರಬಂದರು. ಆದರೆ ಸಿದ್ದರಾಮಯ್ಯ ತನ್ನ ಮಗನಿಗೆ ಖಾಯಂ ಆಗಿ ದುಡ್ಡು ಬರುವಂತೆ ಮಾಡಿದ್ದರು. ಯುಟಿ ಖಾದರ್ ಆರೋಗ್ಯ ಮಂತ್ರಿಯಾಗಿದ್ದಾಗ ವಿಕ್ಟೊರಿಯಾ ಆಸ್ಪತ್ರೆಯಲ್ಲಿ ಲ್ಯಾಬ್ ನಡೆಸೋಕೆ ಅವಕಾಶ ನೀಡಿದ್ದರು. ಹಿಂದ ಎನ್ನುವ ಹೆಸರಲ್ಲಿ ನಡೆಯತ್ತೆದೆ. ಇನ್ನು ಲ್ಯಾಬ್ ನಡೆಸಲು ಅಂದಿನ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಮಗನ ಪರವಾಗಿ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರು ಎಂದು ಆರೋಪಿಸಿದರು.
ನವಕರ್ನಾಟಕದ ಕಡೆ ಮೋದಿ ದೃಷ್ಟಿ, ಈ ಬಾರಿ ಬಿಜೆಪಿ ಗೆಲುವು ಖಚಿತ: ರಾಜೀವ್ ಚಂದ್ರಶೇಖರ್
ದೇಶದಲ್ಲಿ ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರು ಕಾಂಗ್ರೆಸ್ ಪಕ್ಷವಾಗಿದೆ. ಹೇಳಿದ ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡೋಕೆ ಹೊರಟಿದ್ದಾರೆ. ಅನ್ನಭಾಗ್ಯ ಯೋಜನೆಯಲ್ಲಿ ಭ್ರಷ್ಟಾಚಾರ ಆಗ್ತಿತ್ತು. ಕೇಂದ್ರಕ್ಕೆ ಅನುರಾಗ್ ಠಾಕೂರು ಪತ್ರ ಬರೆದಿದ್ದರು. ಅದೇ ಅಧಿಕಾರಿ ಉತ್ತರಪ್ರದೇಶಕ್ಕೆ ರಜೆ ಮೇಲೆ ಹೋದಾಗ ಕೊಲೆ ಆಯ್ತು. ಆ ಯುವ ಅಧಿಕಾರಿ ಹೇಗೆ ಸತ್ತರು? ಯಾಕೆ ಸತ್ತರು ಎನ್ನುವುದು ಗೊತ್ತಿಲ್ಲ. ಇನ್ನು ಐಎಎಸ್ ಅಧಿಕಾರಿ ಡಿ.ಕೆ. ರವಿ ಹಾಗೂ ಡಿವೈಎಸ್ ಪಿ ಗಣಪತಿ ಸಾವು ಆಯ್ತು. ಆದರೆ, ಇದನ್ನು ಸಿದ್ದರಾಮಯ್ಯ ಸರ್ಕಾರ ಮುಚ್ಚಿಹಾಕಿತು ಎಂದು ಹೇಳಿದರು.
ಸುಳ್ಳು ಆರೋಪಕ್ಕೆ ನೋಟಿಸ್ ಜಾರಿ: ಕೇಂದ್ರ ಚುನಾವಣಾ ಆಯೋಗ ಕಾಂಗ್ರೆಸ್ ಪಕ್ಷಕ್ಕೆ ನೋಟೀಸ್ ನೀಡಿದೆ. ಯಾವ ಸುಳ್ಳು ಆರೋಪ ಮಾಡಿ ಜಾಹೀರಾತು ನೀಡಿತ್ತು. ಇದಕ್ಕೆ ಬೇಕಾದ ಸಾಕ್ಷಿ ನೀಡುವಂತೆ ಕೇಂದ್ರ ಚುನಾವಣಾ ಆಯೋಗ ನೋಟೀಸ್ ನೀಡಿದೆ. ಕಾಂಗ್ರೆಸ್ ಅವರು ಯಾವ ಮುಖ ಹೊತ್ತುಕೊಂಡು ಆರೋಪ ಮಾಡ್ತಿದೆ. ಕಾಂಗ್ರೆಸ್ ಆಡಳಿತ ಇರುವ ಕಡೆ ಭ್ರಷ್ಟಾಚಾರ ಅವರು ಸಾಬೀತು ಮಾಡಿಕೊಂಡಿದ್ದಾರೆ. ಒಬ್ಬ ಚಾಯ್ ವಾಲಾ ದೇಶದ ಪ್ರಧಾನಿ ಆಗಬಹುದು ಅಂತ ಬಿಜೆಪಿ ತೋರಿಸಿದೆ. ಅವರು ಯಾವುದೇ ಶ್ರೀಮಂತ ಅಲ್ಲ. ಒಬ್ಬ ಸಾಮಾನ್ಯ ಸಿಎಂ ಆಗಿ, ಈಗ ಪ್ರಧಾನಿ ಆಗಿ ಕೆಲಸ ಮಾಡ್ತಿದ್ದಾರೆ. ಅವರು ಕ್ಷಮೆ ಯಾಚನೆ ಮಾಡಬೇಕು. ಸುಳ್ಳು ಜಾಹೀರಾತನ್ನ ಪೇಪರ್‌ನಲ್ಲಿ ಹಾಕಿರೋದಕ್ಕೆ ದೇಶದ ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.
38 ಸಾವಿರ ಕೋಟಿ ರೂ. ಹಗರಣ ಆಗಿದೆ: ಕಾಂಗ್ರೆಸ್‌ನಲ್ಲಿ ಸಾಮಾನ್ಯ ವ್ಯಕ್ತಿ ಅಭ್ಯರ್ಥಿ ಆಗಲು ಸಾಧ್ಯವಿಲ್ಲ. ಅವರು ರೇಟ್ ಫಿಕ್ಸ್ ಮಾಡಿದ್ದು, ಅವರಿಗೆ ನಾಚಿಕೆ ಆಗಬೇಕು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಲೋಕಾಯುಕ್ತ ಮುಚ್ಚಿಸಿದರು. ಎಸಿಬಿಯನ್ನ ಮರು ಸ್ಥಾಪಿಸಿದರು. ಇನ್ನು ನಿಮ್ಮ ಮೇಲಿರೋ 50 ಕೇಸ್ FIR ಆಗಿಲ್ಲ. ಇಂದು ರೀಡೋ ಪ್ರಕರಣ ಮುನ್ನೆಲೆಗೆ ಬಂದಿದೆ. ರೀಡೋ ಯಾಕೆ ಮಾಡಿದ್ರಿ ನೀವು. ಎಸ್.ಎಂ ಕೃಷ್ಣಾ ಅವರ ಒಂದು ಅಪೇಕ್ಷೆ ಇತ್ತು. ಬೆಂಗಳೂರಿನಲ್ಲಿ ಮನೆ ಇಲ್ಲದವರಿಗೆ ಸೈಟ್ ಕೊಡಬೇಕು ಅಂತ. ಆದರೆ ಅರ್ಕಾವತಿಯಲ್ಲಿದ್ದ 875 ಎಕರೆ ಡೀ ನೋಟಿಫಿಕೇಷನ್ ಮಾಡಿದ್ದೀರಿ. ಬಳಿಕ ವಾಪಸ್ ನೀಡಿ, ರೀಡೋ ಅನ್ನೋ ಹೆಸರನ್ನ ನೀಡಿದ್ದೀರಿ. 38 ಸಾವಿರ ಕೋಟಿ ಹಗರಣ ಆಗಿದೆ ಅಂತ CAG ವರದಿ ನೀಡಿದೆ.
ಸಿದ್ದರಾಮಯ್ಯನನ್ನ ಜೈಲಿಗೆ ಹಾಕಿಸ್ತೇನೆ: ಶಾಸಕ ಸಿ.ಟಿ. ರವಿ ವಾರ್ನಿಂಗ್
ಕಾಂಗ್ರೆಸ್ ಆಡಳಿತದಲ್ಲಿ 100 ರೂ. ಕೊಟ್ರೆ, 15 ರೂ. ಫಲಾನುಭವಿಗೆ ತಲುಪುತ್ತಿತ್ತು: ನಾನು ಸಿದ್ದರಾಮಯ್ಯ, ಡಿಕೆಶಿವಕುಮಾರ್, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಭ್ರಷ್ಟಾಚಾರ ಬಗ್ಗೆ ಮಾತಾಡ್ತೀರಿ. ಕೆಂಪಯ್ಯ ಆಯೋಗ ವರದಿ ನೀಡಿದೆ. ಮಿಸ್ ಆಪಪರೇಷನ್ ಆಗಿದೆ ಅಂತ. ಕಾಂಗ್ರೆಸ್ ಅವರು ಶೇ. 40 ಬಗ್ಗೆ ಮಾತಾಡ್ತಾರೆ. ನಾನು ಅವರನ್ನ ಕೇಳ್ತಿನಿ. ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗ ಭಾಷಣ ಮಾಡಿದರು. ನಾನು ದೆಹಲಿ ಇಂದ 100 ರೂ. ಕೊಟ್ರೆ, ಇಲ್ಲಿಗೆ ಬಂದಾಗ 15 ಆಗುತ್ತೆ ಅಂತ. ಅಷ್ಟು ಕಮೀಷನ್ ಹೊಡೀತಿರಿ ಅಂತ ನಾವು ಹೇಳಿದ್ದಲ್ಲ, ನಿಮ್ಮ ನಾಯಕರೆ ಹೇಳಿದ್ದು ಎಂದರು.