ರಾಯಚೂರು(ಮಾ.29): ದೇಶದಲ್ಲಿಯೇ ಅತೀ ಹೆಚ್ಚು ಸುಳ್ಳು ಹೇಳುವರು ಇದ್ರೆ ಅವರೇ ಮೋದಿ ಮತ್ತು ಬಿಎಸ್ ವೈ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮಸ್ಕಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪಶುಭಾಗ್ಯ, ಸಾದಿ ಭಾಗ್ಯ ನಿಲ್ಲಿಸಿದ್ದಾರೆ. ಪ್ರತಾಪ್ ಗೌಡ ಅಂತಹ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ದೇಶದಲ್ಲಿ ಬಡವರು ಬದುಕದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಎಲ್ಲಾ ವಸ್ತುಗಳ ದರ ಗಗನಕ್ಕೆ ಏರಿಕೆ ಆಗಿದೆ. ಪೆಟ್ರೋಲ್, ಡಿಸೇಲ್ ದರ ಏರಿಕೆಯಾಗಿದೆ. ಗ್ಯಾಸ್ ದರ 450 ರೂ. ಇದ್ದ ಸಿಲಿಂಡರ್ ದರ 950 ರೂ. ಆಗಿದೆ. ಪ್ರಧಾನಿಯವರೇ ಅಚ್ಛಾ ದಿನ್ ಇದೇನಾ? ಎಂದು ಪ್ರಶ್ನಿಸಿದ್ದಾರೆ.

ಅನ್ನಭಾಗ್ಯದಲ್ಲಿ 7 ಕೆಜಿ ಅಕ್ಕಿ ಕೊಡ್ತಿದ್ರೆ ಬಿಎಸ್‌ವೈ ಅಪ್ಪನ ಮನೆ ಗಂಟು ಹೋಗ್ತಿತ್ತಾ ಎಂದ ಸಿದ್ದರಾಮಯ್ಯ

ನಿರುದ್ಯೋಗಿಗಳು ಕೆಲಸ ಕೇಳಿದ್ರೆ ಪಕೋಡಾ ಮಾರಲು ಹೋಗಲು ಹೇಳುತ್ತಾರೆ. ದೇಶದಲ್ಲಿ ರೈತ ವಿರೋಧಿ ಕಾನೂನುಗಳು ಮೋದಿ ತಂದಿದ್ದಾರೆ. ಮೋದಿ ರೈತ ವಿರೋಧಿ ಪ್ರಧಾನ ಮಂತ್ರಿ ಆಗಿದ್ದಾರೆ. ದೇಶದ ಜನರು ಉಳಿಯಲು ಬಿಜೆಪಿ ತೊಲಗಲೇ ಬೇಕು ಎಂದಿದ್ದಾರೆ.

ಮಸ್ಕಿ ಉಪಚುನಾವಣೆ ಉಸ್ತುವಾರಿ ವಿಜಯೇಂದ್ರ ಅಂದ್ರೆ ದುಡ್ಡು. ದುಡ್ಡಿಗೆ ಓಟು ಮಾರಾಟ ಮಾಡುತ್ತೀರಾ? ನಮ್ಮ ಅಭ್ಯರ್ಥಿ ಬಳಿ ದುಡ್ಡು ಇಲ್ಲ. ಬಸನಗೌಡ ತುರ್ವಿಹಾಳ ಗೆದ್ದರೇ ಸ್ವಾಭಿಮಾನದ ವಿಜಯ ಎಂದಿದ್ದಾರೆ ಸಿದ್ದರಾಮಯ್ಯ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ಕಾಂಗ್ರೆಸ್. ಬಿಜೆಪಿ ದುಡ್ಡಿನ ಮದದಿಂದ ಚುನಾವಣೆ ಮಾಡಲು ಹೊರಟಿದೆ. ಬಿಜೆಪಿಗೆ ತಕ್ಕ ಪಾಠ ಕಲಿಸಿ ಎಂದು ಹೇಳಿದ್ದಾರೆ.