ರಾಯಚೂರು(ಮಾ.29): ಅನ್ನಭಾಗ್ಯ ಯೋಜನೆಯ 7 ಕೆಜಿ ಅಕ್ಕಿ ಬದಲು 5 ಕೆಜಿಗೆ ನಿಲ್ಲಿಸಿದ್ದಾರೆ. 7 ಕೆಜಿ ಅಕ್ಕಿ ನೀಡಿದ್ರೆ ಯಡಿಯೂರಪ್ಪನ ಅಪ್ಪನ ಮನೆ ಗಂಟು ಹೋಗುತ್ತಿತ್ತಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಮಸ್ಕಿ ಉಪಚುನಾವಣೆ ಪ್ರಚಾರ ಹಿನ್ನೆಲೆ ಕಾಂಗ್ರೆಸ್ ಸಮಾವೇಶ ಉದ್ದೇಶಿಸಿ ಮಾತನಾಡಿ, ಯಡಿಯೂರಪ್ಪ ಆಪರೇಷನ್ ಕಮಲದಿಂದ ಸಿಎಂ ಆಗಿದ್ದಾರೆ. ನಾನು ಜಾರಿಗೆ ತಂದಿರುವ ಹತ್ತಾರು ಯೋಜನೆಗಳು ನಿಲ್ಲಿಸಿದ್ದಾರೆ ಎಂದಿದ್ದಾರೆ.

ಕಾಂಗ್ರೆಸ್‌ಗೆ ಮೋಸ ಮಾಡಿ ಪ್ರತಾಪ್ ಗೌಡ ಪಾಟೀಲ್ 20-25 ಕೋಟಿಗೆ ಮಾರಾಟ: ಸಿದ್ದು

ನಾವು ಅಧಿಕಾರಕ್ಕೆ ಬಂದ್ರೆ 10 ಕೆಜಿ ಅಕ್ಕಿ ನೀಡುತ್ತೇವೆ. ಯಡಿಯೂರಪ್ಪ ರೈತರ ಒಂದೇ ಒಂದು ರೂಪಾಯಿ ಸಾಲಮನ್ನಾ ಮಾಡಲಿಲ್ಲ ಎಂದು ಸಿದ್ದರಾಮಯ್ಯ ಅವರು ಆರೋಪಿಸಿದ್ದಾರೆ.