ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಕೊಲೆಗಳಾಗುತ್ತಿರುವ ವಿಚಾರಕ್ಕೆ  ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.  ಈ ಬಗ್ಗೆ ಕರ್ನಾಟಕ ಬಿಜೆಪಿ  ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದೆ.

ಬೆಂಗಳೂರು, (ಜುಲೈ..29): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಮೊನ್ನೇ ನಡೆದ ಪ್ರವೀಣ್ ನೆಟ್ಟಾರ್ ಹತ್ಯೆ ಹಾಗೂ ಸುರತ್ಕಲ್‌ನಲ್ಲಿ ಫಾಜಿಲ್ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಬಿಜೆಪಿ ಸರಣಿ ಟ್ವೀಟ್ ಮಾಡಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ ಇಂದಿನ ಸ್ಥಿತಿಗೆ ನೇರ ಕಾರಣಕರ್ತರು. ಜೈಲಿನಲ್ಲಿ ಇರಬೇಕಿದ್ದ ರಕ್ತ ಬೀಜಾಸುರರನ್ನು ಬೀದಿಗೆ ಬಿಟ್ಟಿದ್ದು ನೀವೇ ಅಲ್ಲವೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಇದೇನಾ ನೀವು ಹಿಂದೂ ಧರ್ಮ ಕಾಪಾಡೋದು?: ಬಿಜೆಪಿ ಸರ್ಕಾರದ ವಿರುದ್ಧ ಎಚ್‌ಡಿಕೆ ಗರಂ

ರಾಜ್ಯದಲ್ಲಿ ಪಿಎಫ್ಐ ಸಂಘಟನೆಯ ಕಬಂಧ ಬಾಹು ವಿಸ್ತರಿಸಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವೇ ನೇರ ಕಾರಣ. ಪ್ರವೀಣ್ ನೆಟ್ಟಾರು ಹತ್ಯೆಗೆ ಒಂದು ಟ್ವೀಟ್‌ ಮಾಡಿ ಸುಮ್ಮನಾಗಿದ್ದ ಸಿದ್ದರಾಮಯ್ಯ, ಫಾಜಿಲ್‌ ಹತ್ಯೆಯಾಗುತ್ತಿದ್ದಂತೆ ಮೈಕೊಡವಿ ನಿಂತಿದ್ದಾರೆ. ನೀವೆಷ್ಟು ಪಕ್ಷಪಾತಿ ಎನ್ನುವುದು ರಾಜ್ಯದ ಜನತೆಗೆ ತಿಳಿದಿದೆ. ಅಮಾಯಕರ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ನೀಚ ಮನಸ್ಥಿತಿ ಎಂದು ನಿಮ್ಮಿಂದ ತೊಲಗುವುದು? ಎಂದು ಕಿಡಿಕಾರಿದೆ.

Scroll to load tweet…

 ಸಿದ್ದರಾಮಯ್ಯ ಸರ್ಕಾರದಲ್ಲಿ 20 ಕ್ಕೂ ಅಧಿಕ ಅಮಾಯಕ ಹಿಂದೂಗಳ ಹತ್ಯೆಯಾಗಿತ್ತು. ಆಗೆಲ್ಲ ಇಲ್ಲದ ಕನಿಕರ, ಹೃದಯಗಳು, ಚುನಾವಣಾ ಸಮಯ ಹತ್ತಿರ ಬಂದಂತೆ ಹೊಡೆದುಕೊಳ್ಳುತ್ತಿದೆ. ನಿಮ್ಮ ರಾಜಕೀಯ ಲಾಭಕ್ಕಾಗಿ, ಸೂತಕದ ಮನೆಯಲ್ಲಿ ಬೇಳೆ ಬೇಯಿಸಿಕೊಳ್ಳುವವರನ್ನು ಜನತೆ ಎಂದೂ ಕ್ಷಮಿಸಲಾರರು. ದನಗಳ್ಳ ಕಬೀರ್ ಹತ್ಯೆಗೆ ಸಿದ್ದರಾಮಯ್ಯ ಸರ್ಕಾರ 10 ಲಕ್ಷ ಪರಿಹಾರ ಘೋಷಿಸಿತ್ತು. ಆದರೆ ಹಿಂದೂ ಕಾರ್ಯಕರ್ತರ ಹತ್ಯೆಗೆ ಪರಿಹಾರ ಬಿಡಿ, ಅವರ ಮನೆಗೆ ಭೇಟಿ ನೀಡುವ ಕನಿಷ್ಠ ಸೌಜನ್ಯವನ್ನೂ ಕೂಡಾ ಕಾಂಗ್ರೆಸ್ ಪ್ರದರ್ಶಿಸಿಸಲಿಲ್ಲ ಎಂದು ಬಿಜೆಒಇ ಟ್ವೀಟ್ ಮೂಲಕ ತಿವಿದಿದೆ.

Scroll to load tweet…