Asianet Suvarna News Asianet Suvarna News

ಮುಡಾ ಹಗರಣದಿಂದಲೇ ಸಿದ್ದು ರಾಜಕೀಯ ಅಂತ್ಯ: ಅರವಿಂದ ಬೆಲ್ಲದ

ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಏಳ್ಗೆಗೆ ಬಳಸಬೇಕಿದ್ದ ಅನುದಾನ ಮಾಯವಾಗುತ್ತಿದೆ. ಇದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರವೇ ನಿದರ್ಶನವಾಗಿದೆ. ಇದೇ ರೀತಿ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಹಣ ಕೂಡ ಲೂಟಿಯಾಗುತ್ತಿದೆ. ಕೇಂದ್ರದಲ್ಲಿ ಹತ್ತು ವರ್ಷದ ಮನಮೋಹನ ಸಿಂಗ್ ನೇತೃತ್ವದ ಸರ್ಕಾರದ ಅಧಿಕಾರವಧಿಯಲ್ಲಿ ಕಲ್ಲಿದ್ದಲು, 2ಜಿ ಸೇರಿದಂತೆ ಅನೇಕ ಹಗರಣಗಳು ನಡೆದವು. ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಯೋ ಆಗ ಹಗರಣಗಳು ನಡೆಯುತ್ತವೆ ಎಂದು ಆರೋಪಿಸಿದ ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ 

Siddaramaiah political end due to Muda scandal says bjp mla aravind bellad grg
Author
First Published Aug 9, 2024, 5:30 AM IST | Last Updated Aug 9, 2024, 9:31 AM IST

ಹುಬ್ಬಳ್ಳಿ(ಆ.09):  ಮುಡಾ ಹಗರಣದ ಮೂಲಕವೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಬದುಕು ಅಂತ್ಯವಾಗುವುದು ಖಚಿತ ಎಂದು ವಿಧಾನಸಭೆ ಪ್ರತಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಅಭಿಪ್ರಾಯಪಟ್ಟರು.

ಮುಡಾ ಹಗರಣ ವಿರೋಧಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಯ ಸಂದರ್ಭದಲ್ಲಿ ಗುರುವಾರ ಮಂಡ್ಯದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಅವರು ಮಾತನಾಡಿದರು. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಕಲ್ಯಾಣದ ಭರವಸೆ ನೀಡಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯನವರ ಸರ್ಕಾರ ಇಂದು ಆ ಸಮುದಾಯಗಳಿಗೆ ಮೋಸ ಮಾಡುತ್ತಿದೆ ಎಂದರು.

ಸಿದ್ದರಾಮಯ್ಯನವರೇ ನೀವು ಅಮಾಯಕರೇನಲ್ಲ, ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ: ಸಿ.ಟಿ.ರವಿ ಆಗ್ರಹ

ದಲಿತರ, ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಏಳ್ಗೆಗೆ ಬಳಸಬೇಕಿದ್ದ ಅನುದಾನ ಮಾಯವಾಗುತ್ತಿದೆ. ಇದಕ್ಕೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರವೇ ನಿದರ್ಶನವಾಗಿದೆ. ಇದೇ ರೀತಿ ಹಿಂದುಳಿದವರ ಮತ್ತು ಅಲ್ಪಸಂಖ್ಯಾತರ ಹಣ ಕೂಡ ಲೂಟಿಯಾಗುತ್ತಿದೆ. ಕೇಂದ್ರದಲ್ಲಿ ಹತ್ತು ವರ್ಷದ ಮನಮೋಹನ ಸಿಂಗ್ ನೇತೃತ್ವದ ಸರ್ಕಾರದ ಅಧಿಕಾರವಧಿಯಲ್ಲಿ ಕಲ್ಲಿದ್ದಲು, 2ಜಿ ಸೇರಿದಂತೆ ಅನೇಕ ಹಗರಣಗಳು ನಡೆದವು. ಯಾವಾಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಯೋ ಆಗ ಹಗರಣಗಳು ನಡೆಯುತ್ತವೆ ಎಂದು ಆರೋಪಿಸಿದರು.

ವಿಜಯೇಂದ್ರನ ಸಹವಾಸದಿಂದ ಯಡಿಯೂರಪ್ಪ ಜೈಲಿಗೋದ್ರು: ಸಚಿವ ಮಧು ಬಂಗಾರಪ್ಪ

ಇತ್ತೀಚೆಗೆ ಸಂಭವಿಸಿದ ಪಿಎಸ್‌ಐ ಪರಶುರಾಮ ಸಾವಿಗೆ ಸರ್ಕಾರವೇ ಕಾರಣ. ಈ ವರೆಗೂ ಮುಖ್ಯಮಂತ್ರಿಗಳು ಪರಶುರಾಮ ಅವರ ಕುಟುಂಬದವರಿಗೆ ಸಾಂತ್ವನ ಹೇಳುವ ಗೋಜಿಗೆ ಹೋಗಿಲ್ಲ. ಈ ಹಿಂದಿನ ಅವಧಿಯಲ್ಲಿ ಹಲವಾರು ಹಗರಣಗಳಲ್ಲಿ ತೊಡಗಿದ ಸಿದ್ದರಾಮಯ್ಯ, ಹಗರಣಗಳ ತನಿಖೆ ಮಾಡುವ ಆಶ್ವಾಸನೆ ನೀಡಿ ಮುಚ್ಚಿ ಹಾಕುತ್ತಿದ್ದಾರೆ. ಸರ್ಕಾರದಲ್ಲಿ ಹಣ ಲೂಟಿ ಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದರಿಂದ ಜನರ ನೆಮ್ಮದಿ ಹಾಳಾಗುತ್ತಿದೆ ಎಂದು ಕಿಡಿಕಾರಿದರು. ಕಳಂಕರಹಿತ ರಾಜಕಾರಣ ಎನ್ನುವ ಸಿದ್ದರಾಮಯ್ಯ ಅವರ ಮನೆಬಾಗಿಲಿಗೆ ಈಗ ಹಗರಣ ಬಂದು ನಿಂತಿದೆ. ಅದ್ದರಿಂದ ಭಂಡತನ ಬಿಟ್ಟು ರಾಜೀನಾಮೆ ನೀಡುವ ಮುಖಾಂತರ ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ವಿಪಕ್ಷ ನಾಯಕ ಆರ್. ಅಶೋಕ, ವಿಧಾನ ಪರಿಷತ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್ ನಾರಾಯಣ, ಶಾಸಕ ಎಂ.ಆರ್. ಪಾಟೀಲ್, ಭಗೀರತಿ ಮರುಳ್ಯ, ವಿಧಾನ ಪರಿಷತ್ ಸದಸ್ಯ ನವೀನಕುಮಾರ್, ಮಾಜಿ ಸಚಿವರಾದ ಮುರುಗೇಶ ನಿರಾಣಿ, ರಾಜ್ಯ ಎಸ್ ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತು ಸೇರಿದಂತೆ ಇನ್ನಿತರ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರಿದ್ದರು.

Latest Videos
Follow Us:
Download App:
  • android
  • ios