ಸಿದ್ದರಾಮಯ್ಯನವರೇ ನೀವು ಅಮಾಯಕರೇನಲ್ಲ, ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ: ಸಿ.ಟಿ.ರವಿ ಆಗ್ರಹ
ಸಿದ್ದರಾಮಯ್ಯನವರೇ ನೀವು ಅಮಾಯಕರೇನಲ್ಲ. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು.
ಮೈಸೂರು (ಆ.08): ಸಿದ್ದರಾಮಯ್ಯನವರೇ ನೀವು ಅಮಾಯಕರೇನಲ್ಲ. ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ರಾಜೀನಾಮೆ ನೀಡಿ ತನಿಖೆಗೆ ಸಹಕರಿಸಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆಗ್ರಹಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಲವತ್ತು ವರ್ಷಗಳ ಕಳಂಕ ರಹಿತ ರಾಜಕೀಯ ಎನ್ನುತ್ತೀರಲ್ಲಾ, ತಾವು ತಪ್ಪು ಮಾಡದಿದ್ದರೆ ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯನ್ನೇಕೆ ದುರ್ಬಲಗೊಳಿಸುತ್ತಿದ್ದಿರಿ. ಕೆಂಪಣ್ಣ ಆಯೋಗದ ವರದಿಯನ್ನೇಕೆ ಮುಚ್ಚಿಟ್ಟಿದ್ದೀರಿ. ಎಂಡಿಎ ಪ್ರಕರಣದಲ್ಲಿ ದಲಿತರಿಗೆ ಅನ್ಯಾಯ ಮಾಡಲಿಲ್ಲವೇ? ನೋಟಿಫಿಕೇಷನ್ ಆದ ಜಮೀನನ್ನು ಹೇಗೆ ಖರೀದಿಸಿದಿರಿ?
ಆಗ ನೀವೇ ಉಸ್ತುವಾರಿ ಸಚಿವರು ಮತ್ತು ಉಪ ಮುಖ್ಯಮಂತ್ರಿ. ಆಗ ಯಾವುದೇ ಪ್ರಭಾವ ಬೀರಲಿಲ್ಲವೇ ಎಂದು ಪ್ರಶ್ನಿಸಿದರು. ಅರ್ಕಾವತಿ ಡಿ ನೋಟಿಫಿಕೇಷನ್ ಪ್ರಕರಣದಿಂದ ಎಂಡಿಎ ಪ್ರಕರಣದವರೆಗೆ ಅನೇಕ ತಪ್ಪುಗಳಾಗಿದೆ. ಆ. 3 ರಿಂದ ಆರಂಭವಾದ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ಜನಾಂದೋಲನವಾಗಿ ರೂಪುಗೊಂಡಿದೆ. ಆಡಳಿತ ಪಕ್ಷದ ವಿರುದ್ಧವಾಗಿ ನಡೆಯುತ್ತಿರುವ ಜನ ಬೆಂಬಲ ನೋಡಿ ಮುಖ್ಯಮಂತ್ರಿಗಳು, ಸಚಿವರು, ಕಾಂಗ್ರೆಸ್ ಹೈಕಮಾಂಡ್ ಗಾಬರಿಯಾಗಿದೆ. ಗಾಬರಿ ಬಿದ್ದು ಈಗ ಬೆದರಿಕೆ ತಂತ್ರ ಅನುಸರಿಸುತ್ತಿದ್ದಾರೆ ಎಂದರು.
ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಶಿಕ್ಷಣ ಪ್ರಮುಖ ಅಸ್ತ್ರ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 197 ಕೋಟಿ ಹಣ ಅನೇಕ ಖಾತೆಗಳಿಗೆ ವರ್ಗಾವಣೆಯಾಗಿದೆ. ಇಂತಹ ಕಾಂಗ್ರೆಸ್ ಲೂಟಿ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ. ಎಂಡಿಎ ಸೇರಿದಂತೆ ವಿವಿಧ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಆರಂಭವಾಗಿದೆ. ಸಿಎಂ 40 ವರ್ಷದ ರಾಜಕೀಯ ಜೀವನವದಲ್ಲಿ ಕಳಂಕ ಇಲ್ಲ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಾನು ನಿಮ್ಮನ್ನು ಸಾರ್ವಜನಿಕವಾಗಿ ಪ್ರಶ್ನೆ ಕೇಳುತ್ತಿದ್ದೇನೆ. ಕಳಂಕ ಅಲ್ಲವೇ ಇಲ್ಲವೇ ಎಂಬುದನ್ನು ಹೇಳಬೇಕು. ಲೂಟಿ ಕಪ್ಪು ಚುಕ್ಕೆ ಅಲ್ಲವೇ ಇಂಬುದನ್ನು ಹೇಳಬೇಕು ಎಂದು ಅವರು ಸವಾಲು ಹಾಕಿದರು.
ಅಲ್ಪಸಂಖ್ಯಾತರ ಇಲಾಖೆಯಲ್ಲಿ ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿ ಒಂದೇ ಕಂಪನಿಯಲ್ಲಿ ಟೆಂಡರ್ಕೊಟ್ಟಿರುವುದು ಉಲ್ಲಂಘನೆ ಅಲ್ಲವೇ? ಎಸ್ಐ, ಪಿಎಸ್ಐ, ಡಿವೈಎಸ್ಪಿ, ತಹಸೀಲ್ದಾರ್, ಎಸಿ, ಡಿಸಿ ಹುದ್ದೆಗೆ ದರ ನಿಗದಿ. ಸಬ್ ರಿಜಿಸ್ಟ್ರಾರ್, ಅಬಕಾರಿ ಮತ್ತು ಆರ್.ಟಿ.ಒ ಹುದ್ದೆಗಳು ಬಹಿರಂಗವಾಗಿ ಹರಾಜಾಗಿದೆ. ಇದು ಆಡಳಿತದ ಕಳಂಕ ಅಲ್ಲವೇ ಎಂದು ಅವರು ಪ್ರಶ್ನಿಸಿದರು. ಬೆಂಗಳೂರು ನಗರದಲ್ಲಿ ಪ್ರತಿ ತಿಂಗಳು 500 ಕೋಟಿ ಸಂಗ್ರಹವಾಗುತ್ತಿದೆ. ಅದು ಎಲ್ಲಿ ಹೋಗುತ್ತಿದೆ? ಸಾರ್ವಜನಿಕ ಬದುಕಿನಲ್ಲಿ ಸ್ವಚ್ಛತೆ ಎಂದು ಹೇಳುವ ನೀವು ನಿಮ್ಮ ಆಡಳಿತದಲ್ಲಿ ಸ್ವಚ್ಛತೆ ಎಲ್ಲಿದೆ ತೋರಿಸಿ. ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ರಚಿಸಿದ್ದು ಯಾಕೆ? ಅರ್ಕಾವತಿ ಬಡಾವಣೆ ಪ್ರಕರಣದಲ್ಲಿ 880 ಎಕರೆಯನ್ನು ಡಿ. ನೊಟಿಫಿಕೇಷನ್ಮಾಡುದ್ದು ಯಾರು?
ರೀಡು ಪಿತಾಮಹಾ ಯಾರು ಎಂದರೆ ಸಿದ್ದರಾಮಯ್ಯ ಎಂದೇ ಹೇಳಬೇಕು. ಪ್ರತಿ ಎಕರೆಗೆ 2 ಕೋಟಿ ಪಡೆದಿದ್ದು ಯಾರು ಎಂದು ಅವರು ಪ್ರಶ್ನೆಗಳ ಸುರಿಮಳೆಗರೆದರು. ಕೆಂಪಣ್ಣ ಆಯೋಗ ಅಕ್ರಮ ಎಸಗಿರುವುದು ನಿಜ ಎಂದು ಹೇಳಿದೆ. ವರದಿ ಬಹಿರಂಗಪಡಿಸಿದರೆ ತಮ್ಮ ಬುಡಕ್ಕೆ ಬರುತ್ತದೆ ಎಂದು ಬಹಿರಂಗಪಡಿಸಲಿಲ್ಲ. ನೀವು ಮಿಸ್ಟರ್ಕ್ಲೀನ್ ಅಲ್ಲ, ಮಿಸ್ಟರ್ ಕರಪ್ಷನ್. ನೀವು ಭ್ರಷ್ಟಾಚಾರದ ಪೋಷಕರು ಮಾತ್ರವಲ್ಲ, ಫಲಾನುಭವಿಯೂ ಆಗಿದ್ದೀರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದನದಲ್ಲಿ ಉತ್ತರ ಕೊಡುವುದು ಬಿಟ್ಟು ಫಲಾಯನ ಮಾಡಿದ್ದೀರಿ. ನೀವು ಸಮರ್ಥಿಸಿಕೊಳ್ಳಲು ಬೇರೆ ಕಡೆ ಬೊಟ್ಟು ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.
ಅಬ್ರಾಹಂ ಎಂಬವರು ದೂರು ಕೊಟ್ಟ ಕೂಡಲೇ ನೀವು ಬಿಜೆಪಿ ಹೆಸರು ಹೇಳುತ್ತಿದ್ದೀರಿ. ಮೊದಲು ನಿಮ್ಮ ಮೇಲಿನ ಆರೋಪಕ್ಕೆ ಉತ್ತರ ಕೊಡಿ. 1997ರಲ್ಲಿ ಸರ್ವೇ ನಂ. 163, 164ರಲ್ಲಿ ಡಿ ನೋಟಿಫಿಕೇಷನ್ ಆದಾಗ ನೀವೆ ಉಸ್ತುವಾರಿ ಸಚಿವರು, ನೀವೇ ಉಪ ಮುಖ್ಯಮಂತ್ರಿ. ಆಗ ಪ್ರಭಾವ ಬೀರಿದ್ದು ಯಾರು? ಸಿದ್ದರಾಮಯ್ಯ ಅಮಾಯಕರೇ ಎಂದು ಅವರು ಪ್ರಶ್ನಿಸಿದರು. ಬಡಾವಣೆ ಆಗಿರುವುದನ್ನು ಡಿ ನೋಟಿಫೇಕೇಷನ್ಮಾಡಿದ್ದು ಮೊದಲ ತಪ್ಪು, ಖರೀದಿಸಿದ್ದು ಎರಡನೇ ತಪ್ಪು. ದಲಿತ ಸಮುದಾಯಕ್ಕೆ ವಂಚಿಸಿದ್ದು, ಮೂರನೇ ತಪ್ಪು ಅಲ್ಲವೇ? ನಮ್ಮ ಸರ್ಕಾರ ಇದ್ದಾಗಿನ ಸಚಿವರು ಪಾಲುದಾರರಾದ್ದರಿಂದಲೇ ಅವರು ಕಾಂಗ್ರೆಸ್ ಸೇರಿದರು.
62 ಕೋಟಿ ಪರಿಹಾರ ಕೇಳುವ ನೈತಿಕತೆ ಇದ್ದರೆ ಮೈಸೂರಿನ ಇತರೆ ರೈತರಿಗೂ ನೀವು ಅಷ್ಟೇ ಪರಿಹಾರ ಕೊಡಬೇಕಾಗುತ್ತದೆ. ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದೀರಿ. ತಪ್ಪು ಅಭಿಪ್ರಾಯ ಬರುವಂತೆ ಹೇಳಿಕೆ ನೀಡುತ್ತಿದ್ದೀರಿ ಎಂದು ಅವರು ಟೀಕಿಸಿದರು. ಚುನಾವಣಾ ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದೀರಿ. ಕಾನೂನು ತಜ್ಞರು ಎಂದು ಹೇಳಿಕೊಳ್ಳವ ನಿಮಗೆ ಸಕ್ಷನ್ಆರ್.ಪಿ 125ಎ ಪ್ರಕಾರ ಶಿಕ್ಷಾರ್ಹ ಅಪರಾಧ. ೬ ತಿಂಗಳ ಜೈಲು ಶಿಕ್ಷೆ ಆಗುತ್ತದೆ ಎಂಬುದು ಗೊತ್ತಿಲ್ಲವೇ. ನೀವು ತನಿಖೆ ನಡೆಸಲು ದೇಸಾಯಿ ಆಯೋಗ ರಚಿಸಿದ್ದೀರಿ. ಅದನ್ನು ಬಿಟ್ಟು ನೈತಿಕವಾಗಿ ರಾಜೀನಾಮೆ ಕೊಟ್ಟು ತನಿಖೆ ಸಹಕರಿಸಿ. ಬಸವನ ಗೌಡ ದದ್ದಲ್, ಮಾಜಿ ಸಚಿವ ನಾಗೇಂದ್ರೆಗೆ ಕ್ಲೀನ್ ಚಿಟ್ಕೊಟ್ಟಿದ್ದಿರಿ. ಆ ಮೇಲೆ ಏನಾಯಿತು. ಆದ್ದರಿಂದ ಈ ಪ್ರಕರಣವನ್ನೂ ಕೂಡಲೇ ಸಿಬಿಐ ಕೊಡಬೇಕು.
ಸಿಎಂ ಸಿದ್ದರಾಮಯ್ಯನವರ ಮೇಲೆ ಗೂಬೆ ಕೂರಿಸುವ ವ್ಯವಸ್ಥಿತ ಸಂಚು: ಮಾಜಿ ಸಂಸದ ವಿ.ಎಸ್.ಉಗ್ರಪ್ಪ
ಇಲ್ಲವೇ ಸುಪ್ರಿಂ ಕೋರ್ಟ್ನ್ಯಾಯಾಧೀಶರಿಗೆ ಕೊಡಬೇಕು. ಆ ಮೂಲಕ ಕರ್ನಾಟಕ ಕ್ಲೀನ್ಆಗಬೇಕು. ಕ್ಲೀನ್ಆಗಿ ಅಧಿಕಾರದಿಂದ ಇಳಿಯುತ್ತೀರೋ ಅಥವಾ ಕಳಂಕದೊಡನೆ ಇಳಿಯುತ್ತೀರೋ ಎಂದು ಅವರು ಪ್ರಶ್ನಿಸಿದರು. ಹೋರಾಟದಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ಅವರು ಜಾತಿ ಮತ್ತು ಪಕ್ಷದ ಹೆಸರಿನಲ್ಲಿ ರಕ್ಷಣೆ ಪಡೆಯುತ್ತಿದ್ದಾರೆ. ಅದು ತಪ್ಪು. ಅದನ್ನು ಬಿಟ್ಟು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಸಾ.ರಾ. ಮಹೇಶ್, ಶಾಸಕ ಟಿ.ಎಸ್. ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ವಕ್ತಾರ ಎಂ.ಜಿ. ಮಹೇಶ್, ನಗರ ವಕ್ತಾರ ಕೇಬಲ್ ಮಹೇಶ್ ಇದ್ದರು.