ಬೆಂಗಳೂರು, (ಮೇ.31): ಮಾಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಲಾಕ್‌ಡೌನ್‌ ಅನ್ನು ಜೂನ್ 30ರ ವರಗೆ ವಿಸ್ತರಿಸಿದ್ದು, ಬಹುತೇಕ ಎಲ್ಲಾ ಸಡಿಲಿಕೆ ಮಾಡಲಾಗಿದೆ. 

ಆದ್ರೆ ಶಾಲೆ-ಕಾಲೇಜು ಪ್ರಾರಂಭ ಜೂನ 18ರ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆನ್‌ಲೈನ್ ಶಿಕ್ಷಣಕ್ಕೆ ಮುಂದಾಗಿದೆ. ಆದ್ರೆ, ಇದಕ್ಕೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದಾರೆ.

ಆನ್‌ಲೈನ್‌ ಶಿಕ್ಷಣದಿಂದಿರುವ ಅಪಾಯಗಳೇನು?

ಸಿದ್ದರಾಮಯ್ಯ ಅಭಿಪ್ರಾಯ
ಪದವಿ ಮತ್ತು ವೃತ್ತಿಪರ ಶಿಕ್ಷಣವನ್ನು ಆನ್‌ಲೈನ್ ತರಗತಿಗಳ ಮೂಲಕ ನೀಡುವ ಪ್ರಧಾನಮಂತ್ರಿ ಅವರ ಪ್ರಸ್ತಾವ, ದೇಶದ ಸಾಮಾಜಿಕ ವಾಸ್ತವದ ಅರಿವಿಲ್ಲದವರ ಕುರುಡುತನದ ಆಲೋಚನೆ! ಇದರಿಂದ ಸಮಾಜದ ದೊಡ್ಡ ವರ್ಗ ಶಿಕ್ಷಣದಿಂದ ವಂಚಿತವಾಗಲಿದೆ.

ಭಾರತದ ಅಸ್ತಿತ್ವ ಇರುವುದು ಹಳ್ಳಿಗಳಲ್ಲಿ. ಅಲ್ಲೆಲ್ಲ ಕಂಪ್ಯೂಟರ್-ಲ್ಯಾಪ್ ಟಾಪ್ -ಸ್ಮಾರ್ಟ್ ಪೋನ್‌ಗಳೆಲ್ಲಿಂದ ಬರಬೇಕು? ಪೋನ್ ಇದ್ದರೂ ನೆಟ್‌ವರ್ಕ್ ಎಲ್ಲಿದೆ? ಆನ್ ಲೈನ್ ಶಿಕ್ಷಣದಲ್ಲಿ ಹಳ್ಳಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದು ಹೇಗೆ? ದೇಶ ಆಳುವ ನಾಯಕರಿಗೆ ಈ ಪ್ರಾಥಮಿಕ ಜ್ಞಾನ ಬೇಡವೇ?

ಹೀಗೆ ಪ್ರಶ್ನೆಗಳ ಪ್ರಶ್ನೆಗಳ ಮೂಲಕ ಆನ್‌ಲೈನ್‌ ಶಿಕ್ಷಣ ವಿರೋಧ ವ್ಯಕ್ತಪಡಿಸಿದ್ದಾರೆ.