ಬೆಳಗಾವಿ, (ಅ.19): ಶಿರಾ ಕ್ಷೇತ್ರಕ್ಕೂ ಬಿ.ವೈ.ವಿಜಯೇಂದ್ರಗೂ ಏನು ಸಂಬಂಧ..? ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಎಂಬುದನ್ನು ಬಿಟ್ಟರೆ ಬೇರೆ ಏನು ಸಂಬಂಧ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇಂದು (ಸೋಮವಾರ) ಬೆಳಗಾವಿಯಲ್ಲಿ ಮಾತನಾಡಿದ ಅವರು, ಕೆ.ಆರ್. ಪೇಟೆಯಲ್ಲಿ ಮಾಡಿದ ಸ್ಟ್ರ್ಯಾಟಜಿಯನ್ನು ಶಿರಾದಲ್ಲೂ ಮಾಡ್ತಾರಂತೆ. ಅದ್ಯಾವುದಪ್ಪ ನನಗೆ ಗೊತ್ತಿರದ ಸ್ಟ್ಯ್ರಾಟಜಿ..? ಅದೇನೇ ಮಾಡಿದರೂ ಶಿರಾದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ಹೇಳಿದರು.

ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾದಲ್ಲೂ ಗೆಲ್ಲಲು ವಿಜಯೇಂದ್ರ ತಂತ್ರ

ಶಿರಾ ಕ್ಷೇತ್ರದಲ್ಲಿ ಸಿಎಂ ಯಡಿಯೂರಪ್ಪ ಪುತ್ರ ವಿಜಯೇಂದ್ರ ಬೀಡು ಬಿಟ್ಟಿರುವುದಕ್ಕೆ ಕಿಡಿಕಾರಿದರು.

ಶಿರಾ ಕ್ಷೇತ್ರಕ್ಕೂ ವಿಜಯೇಂದ್ರಗೂ ಏನು ಸಂಬಂಧ? ದುಡ್ಡು ಖರ್ಚು ಮಾಡಲು ಹೋಗಿ ಅಲ್ಲಿ ಕುಳಿತಿದ್ದಾರೆ. ಕೆ.ಆರ್. ಪೇಟೆಯಲ್ಲಿ ದುಡ್ಡು ಖರ್ಚು ಮಾಡಿದರು. ಇದೀಗ ಶಿರಾದಲ್ಲಿ ಮಾಡುತ್ತಿದ್ದಾರೆ ಎಂದು ಗುಡುಗಿದರು.

ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ನಾಮಪತ್ರ ಸಲ್ಲಿಸಲು ಅ.16 ಕೊನೆಯ ದಿನವಾಗಿದೆ....