ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ: ಸಚಿವ ವಿ.ಸೋಮಣ್ಣ

ನನಗೆ ಇದು ಬಯಸದೇ ಬಂದ ಭಾಗ್ಯ ಅಂಥಲ್ಲಾ, ಹೈಕಮಾಂಡ್‌ ನನ್ನ ಮೇಲೆ ವಿಶ್ವಾಸ ಇಟ್ಟು ಈ ಕೆಲಸ ಕೊಟ್ಟಿದೆ, ನಾನೋರ್ವ ಜಾತ್ಯತೀತ ನಾಯಕ, ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು.
 

Siddaramaiah has fielded me with the intention of defeating him Says Minister V Somanna gvd

ಚಾಮರಾಜನಗರ (ಏ.14): ನನಗೆ ಇದು ಬಯಸದೇ ಬಂದ ಭಾಗ್ಯ ಅಂಥಲ್ಲಾ, ಹೈಕಮಾಂಡ್‌ ನನ್ನ ಮೇಲೆ ವಿಶ್ವಾಸ ಇಟ್ಟು ಈ ಕೆಲಸ ಕೊಟ್ಟಿದೆ, ನಾನೋರ್ವ ಜಾತ್ಯತೀತ ನಾಯಕ, ಸಿದ್ದರಾಮಯ್ಯ ಸೋಲಿಸುವ ಉದ್ದೇಶದಿಂದ ನನ್ನನ್ನು ಕಣಕ್ಕಿಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಿಳಿಸಿದರು. ಟಿಕೆಟ್‌ ಘೋಷಣೆಯಾದ ಬಳಿಕ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿದ ವಿ.ಸೋಮಣ್ಣ ಬಿಜೆಪಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಅವರು ಮಾತನಾಡಿ, ಗೋವಿಂದರಾಜನಗರದಲ್ಲಿ ಸೋಲ್ತಿನಿ ಅಂತಾ ಸೋಮಣ್ಣ ಇಲ್ಲಿಗೆ ಬಂದಿದ್ದಾರೆ ಅಂತೆಲ್ಲಾ ಕೆಲವರು ಹೇಳ್ತಾರೆ, ಆದರೆ, ಆ ಕೆಲಸನಾ ಮಾಡಲ್ಲ, ಬೆಂಗಳೂರಲ್ಲಿ 5-6 ಕ್ಷೇತ್ರ ಗೆಲ್ಲಿಸುವ ಸಾಮರ್ಥ್ಯ ನನಗಿದೆ ಎಂದರು.

ವರುಣದಲ್ಲಿ ನನ್ನನ್ನು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ, ಥಕಥೈ ಅಂತ ಕುಣಿತೀದಾರೆ, ಚಾಮರಾಜನಗರಕ್ಕೆ ಏನಾಗಿದೆ ಪುಟ್‌ಬಾಲ್‌, ವಾಲಿಬಾಲ್‌, ಗೋಲಿ ಎಲ್ಲಾ ಆಡ್ತೀದಿರಾ ಎಂದು ಬಂಡಾಯ ಸಾರಿದವರಿಗೆ ನಯವಾಗಿ ಚೇಡಿಸಿದರು. ಜಿಲ್ಲೆ ಘೋಷಣೆಯಾಗಿದ್ದಾಗಿನಿಂದ ಈಗಲೂ ಚಾಮರಾಜನಗರ ಹಾಗೇ ಇದೆ, ಇದರ ಸಮಗ್ರ ಅಭಿವೃದ್ಧಿಯನ್ನು ಸೋಮಣ್ಣ ಮಾಡ್ತಾನೆ, 13 ರ ಬಳಿಕ ನಿಮ್ಮ ಸೇವಕನಾಗಿರುತ್ತೇನೆ, ಮೋದಿ ಕಾರ್ಯಕ್ರಮದಲ್ಲಿ ನಂಬಿಕೆ ಇದ್ದರೇ ನನ್ನನ್ನು ಬೆಂಬಲಿಸಿ, ಜನರ ಬಳಿ ತೆರಳಿ ಮತಯಾಚಿಸಿ ಎಂದು ಮನವಿ ಮಾಡಿದರು.

ಸೋಮಣ್ಣ ಸೇರಿ ಯಾರೇ ನನ್ನ ವಿರುದ್ಧ ಸ್ಪರ್ಧಿಸಿದರೂ ಸ್ವಾಗತ: ಸಿದ್ದರಾಮಯ್ಯ

ನಾಯಿ-ನರಿ ಮಾತಿಗೆಲ್ಲಾ ಪ್ರತಿಕ್ರಿಯಿಸಲ್ಲ: ನಾಯಿ-ನರಿ ಮಾತಿಗೆಲ್ಲಾ ನಾನು ಪ್ರತಿಕ್ರಿಯೆ ಕೊಡಲ್ಲ ಎನ್ನುವ ಮೂಲಕ ರುದ್ರೇಶ್‌ ವಿರುದ್ಧ ಸಚಿವ ಸೋಮಣ್ಣ ಕಿಡಿಕಾರಿದರು.ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ವಿರುದ್ಧ ನನ್ನ ಮೇಲ್ಪಟ್ಟವರು ಮಾತನಾಡಿದರೇ ನಾನು ಮಾತನಾಡುತ್ತೇನೆ, ಅದು ಬಿಟ್ಟು ನಾಯಿ-ನರಿಗೆಲ್ಲಾ ಪ್ರತಿಕ್ರಿಯಿಸಲ್ಲ. ಆ ಥರದವರ ಬಗ್ಗೆ ನೀವು ಕೂಡ ಪ್ರಶ್ನೆ ಕೇಳಬೇಡಿ ಎಂದು ಗರಂ ಆದರು. ಬಂಡಾಯದ ವಿಚಾರ ಬಗ್ಗೆ ಸಚಿವ ಸೋಮಣ್ಣ ಪ್ರತಿಕ್ರಿಯಿಸಿ ಅದು ಪಕ್ಷದ ಆಂತರಿಕ ವಿಚಾರ, ಪಾರ್ಟಿ ನಾಯಕರು ಎಲ್ಲವನ್ನೂ ಸೆಟರೆಟ್‌ ಮಾಡುತ್ತಾರೆ, 17ರಂದು ವರುಣದಲ್ಲಿ 19 ರಂದು ಚಾಮರಾಜನಗರದಲ್ಲಿ ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು. ನಮ್ಮ ವರಿಷ್ಟರ ಸೂಚನೆ ಮೇರೆಗೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದೇನೆ, ಜನರು ಬದಲಾವಣೆ ಬಯಸಿದ್ದಾರೆ, ಎರಡೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಲ್ಲಿದೆ. ಚುನಾವಣೆಯಲ್ಲಿ ಸೋಮಣ್ಣನೇ ಸ್ಟಾರ್‌ ಪ್ರಚಾರಕ, ಕಾರ್ಯಕರ್ತರೇ ಸ್ಟಾರ್‌ ಪ್ರಚಾರಕರು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದರು.

ನಾಗಶ್ರೀ ನಿವಾಸಕ್ಕೆ ಸೋಮಣ್ಣ ಭೇಟಿ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿತರಾಗಿ ಟಿಕೆಟ್‌ ದೊರಕದೇ ಅಸಮಾಧಾನಗೊಂಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಶ್ರೀ ಪ್ರತಾಪ್‌ ಅವರ ನಿವಾಸಕ್ಕೆ ಸಚಿವ ವಿ. ಸೋಮಣ್ಣ ಭೇಟಿ ನೀಡಿದರು. ಮೊದಲು ಮಾತನಾಡಿದ ಮೈಸೂರು ವಿಭಾಗದ ಚುನಾವಣಾ ಪ್ರಭಾರಿ ಮೈ.ವಿ. ರವಿಶಂಕರ್‌, ಈ ಸನ್ನಿವೇಶದಲ್ಲಿ ನಿಮಗೆ ನೋವಾಗಿದೆ ಎಂಬುದು ತಿಳಿದಿದೆ. ಪಕ್ಷ ಮುಂದಿನ ದಿನಗಳಲ್ಲಿ ಅವಕಾಶ ನೀಡಲಿದೆ. ಬೇಸರ ಮಾಡಿಕೊಳ್ಳದೇ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿ ಎಂದು ಮನವೊಲಿಸಲು ಯತ್ನಿಸಿದರು. ಟಿಕೆಟ್‌ ಆಕಾಂಕ್ಷಿಯಾಗಿದ್ದ ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ ಸಹ ಮಾತನಾಡಿ, ಪಕ್ಷದ ಆದೇಶಕ್ಕೆ ನಾವೆಲ್ಲ ಬದ್ಧ. ಸೋಮಣ್ಣ ಗೆಲುವಿಗೆ ಶ್ರಮಿಸೋಣ ಎಂದರು.

ಮಹದೇಶ್ವರನ ಆಶೀರ್ವಾದದಿಂದ ಚಾಮರಾಜನಗರ ಮಾದರಿ ಜಿಲ್ಲೆಯಾಗಿಸುವಾಸೆ: ಸಚಿವ ಸೋಮಣ್ಣ

ಸಚಿವ ಸೋಮಣ್ಣ ನಾಗಶ್ರೀ ಅವರ ಆಪ್ತರಾದ ಎಚ್‌.ಎಸ್‌. ಬಸವರಾಜು ಉದ್ದೇಶಿಸಿ ಮಾತನಾಡಿ, ಟಿಕೆಟ್‌ ಪಡೆಯಲು ಅದೃಷ್ಟ, ಹಣೆಬರಹ ಇರಬೇಕು. ನಾನು, ನೂರಾರು ಜನರನ್ನು ಬೆಳೆಸಿದ್ದೇನೆ. ಅಮಿತ್‌ ಶಾ ಅಂಥವರು ನನ್ನ ಮನೆಗೆ ಬಂದು 2 ಗಂಟೆ ಇರುತ್ತಾರೆ. 7 ಬಾರಿ ಎಂಎಲ್‌ಎ, 1 ಬಾರಿ ಎಂಎಲ್‌ಸಿ ಆಗಿದ್ದೆ. ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಸರ್ಕಾರಿ ಮೆಡಿಕಲ್‌ ಕಾಲೇಜು, ಕೈಗಾರಿಕಾ ಪ್ರದೇಶ, 21 ಕೆರೆಗಳಿಗೆ ನೀರು ತಂದೆ. 19ರಂದು ನಾಮಪತ್ರ ಸಲ್ಲಿಸುತ್ತೇನೆ. ಜನರ ಬಳಿ ಹೋಗೋಣ. ನನಗೆ ಅವಕಾಶ ಕೊಡಿ ಎಂದು ಕೇಳುತ್ತೇನೆ. ನನಗೇನೂ ಆಗಬೇಕಾಗಿಲ್ಲ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios