Asianet Suvarna News Asianet Suvarna News

ಸೋಮಣ್ಣ ಸೇರಿ ಯಾರೇ ನನ್ನ ವಿರುದ್ಧ ಸ್ಪರ್ಧಿಸಿದರೂ ಸ್ವಾಗತ: ಸಿದ್ದರಾಮಯ್ಯ

‘ವರುಣದಲ್ಲಿ ಸೋಮಣ್ಣ ಮಾತ್ರವಲ್ಲ ನನ್ನ ವಿರುದ್ಧ ಯಾರೇ ಬಂದು ಸ್ಪರ್ಧಿಸಿದರೂ ಸ್ವಾಗತ. ಅವರ ಹೈಕಮಾಂಡ್‌ ಹೇಳಿದ ತಕ್ಷಣ ನಾನು ಸೋಲಲ್ಲ. ಆ ಬಗ್ಗೆ ಜನರು ನಿರ್ಧಾರ ಮಾಡುತ್ತಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. 
 

Anyone including V Somanna is welcome to compete against me Says Siddaramaiah gvd
Author
First Published Apr 13, 2023, 4:40 AM IST | Last Updated Apr 13, 2023, 4:40 AM IST

ಬೆಂಗಳೂರು (ಏ.13): ‘ವರುಣದಲ್ಲಿ ಸೋಮಣ್ಣ ಮಾತ್ರವಲ್ಲ ನನ್ನ ವಿರುದ್ಧ ಯಾರೇ ಬಂದು ಸ್ಪರ್ಧಿಸಿದರೂ ಸ್ವಾಗತ. ಅವರ ಹೈಕಮಾಂಡ್‌ ಹೇಳಿದ ತಕ್ಷಣ ನಾನು ಸೋಲಲ್ಲ. ಆ ಬಗ್ಗೆ ಜನರು ನಿರ್ಧಾರ ಮಾಡುತ್ತಾರೆ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ವರುಣ ಕ್ಷೇತ್ರದಲ್ಲಿ ವಿ.ಸೋಮಣ್ಣ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ‘ಮಾಡ್ಲಪ್ಪ ಮಾಡ್ಲಿ, ನೀನೂ ಸ್ಪರ್ಧೆ ಮಾಡು. ನನ್ನ ವಿರುದ್ಧ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು. ನಾನು ಅವರನ್ನು ವೆಲ್‌ಕಮ್‌ ಮಾಡುತ್ತೇನೆ. 

ಅವರ ಸ್ಪರ್ಧೆಯ ಹಿಂದಿನ ಉದ್ದೇಶ ಏನು ಎಂಬುದು ಗೊತ್ತಿಲ್ಲ. ನಾನು ಆ ಬಗ್ಗೆ ಮಾತನಾಡುವುದಿಲ್ಲ’ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಉತ್ತರಿಸಿದರು. ಬಿಜೆಪಿ ಹೈಕಮಾಂಡ್‌ ನಿಮ್ಮನ್ನು ಸೋಲಿಸಲು ಸೋಮಣ್ಣ ಅವರನ್ನು ಎರಡು ಕಡೆ ಕಣಕ್ಕಿಳಿಸಿದೆಯೇ ಎಂಬ ಪ್ರಶ್ನೆಗೆ, ‘ಹೋ..ಹೋ.. ಅವರ ಹೈಕಮಾಂಡ್‌ ಹೇಳಿದ ತಕ್ಷಣ ನಾನು ಸೋತು ಬಿಡಲ್ಲ. ಆ ಬಗ್ಗೆ ಜನರು ನಿರ್ಧಾರ ಮಾಡುತ್ತಾರೆ. ಇನ್ನು ಅವರು ಎರಡು ಕಡೆ ಸ್ಪರ್ಧೆ ಮಾಡಿದ್ದಾರೆ ಎಂದರೆ ಒಂದು ಕಡೆ ಮಾಡಬೇಡ ವಾಪಸು ತೆಗೆದುಕೋ ಎನ್ನಲೇ?’ ಎಂದು ಪ್ರಶ್ನಿಸಿದರು.

ಬಿಜೆಪಿಗೆ ರಾಜೀನಾಮೆ ನೀಡಲು ಸೊಗಡು ಶಿವಣ್ಣ ತೀರ್ಮಾನ: ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ

ಸಿದ್ದು ನಿವಾಸಕ್ಕೆ ಟಿಕೆಟ್‌ ಆಕಾಂಕ್ಷಿಗಳ ದೌಡು: ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಗಳು, ಟಿಕೆಟ್‌ ಕೈತಪ್ಪುವ ಆತಂಕದಲ್ಲಿರುವ ಹಾಲಿ ಶಾಸಕರು ಹಾಗೂ ಟಿಕೆಟ್‌ ಪಡೆದರೂ ಕ್ಷೇತ್ರದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಅಭ್ಯರ್ಥಿಗಳು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬುಧವಾರ ಪರೇಡ್‌ ನಡೆಸಿದರು. ಮೊದಲ ಎರಡು ಪಟ್ಟಿಗಳಲ್ಲೂ ಟಿಕೆಟ್‌ ಘೋಷಣೆಯಾಗದ ಹರಿಹರ ಶಾಸಕ ರಾಮಪ್ಪ ಅವರು ಬುಧವಾರವೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ಲಾಬಿ ಮಾಡಿದ್ದಾರೆ. 

ಸದ್ಯದಲ್ಲೇ ಮೂರನೇ ಪಟ್ಟಿ ಬಿಡುಗಡೆಯಾಗಲಿದ್ದು, ನನಗೆ ಟಿಕೆಟ್‌ ಸಿಕ್ಕುವಂತೆ ಮಾಡಿ ಎಂದು ದುಂಬಾಲು ಬಿದ್ದಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈಗಾಗಲೇ ಸಿದ್ದರಾಮಯ್ಯ ಅವರ ಬದಲಿಗೆ ಬಾದಾಮಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಭೀಮಸೇನ ಚಿಮ್ಮನಕಟ್ಟಿಅವರೂ ಬುಧವಾರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಇದಕ್ಕೂ ಮೊದಲು ಬಾದಾಮಿಯಿಂದ ಆಗಮಿಸಿದ ನೂರಾರು ಮಂದಿ ಕಾರ್ಯಕರ್ತರು ಶತಾಯಗತಾಯ ಸಿದ್ದರಾಮಯ್ಯ ಅವರೇ ಬಾದಾಮಿಯಿಂದ ಸ್ಪರ್ಧಿಸಬೇಕು ಎಂದು ಪಟ್ಟು ಹಿಡಿದಿದ್ದರು. ಹೀಗಾಗಿ ಭೀಮಸೇನ ಚಿಮ್ಮನಕಟ್ಟಿಅವರು ಸಿದ್ದರಾಮಯ್ಯ ನಿವಾಸಕ್ಕೆ ಆಗಮಿಸಿ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಲು ಯತ್ನಿಸಿದರು. 

ಮಹದೇಶ್ವರನ ಆಶೀರ್ವಾದದಿಂದ ಚಾಮರಾಜನಗರ ಮಾದರಿ ಜಿಲ್ಲೆಯಾಗಿಸುವಾಸೆ: ಸಚಿವ ಸೋಮಣ್ಣ

ಅಸಮಾಧಾನಿತ ಕಾರ್ಯಕರ್ತರು, ಮುಖಂಡರನ್ನು ನೀವೇ ಸಮಾಧಾನಪಡಿಸಬೇಕು. ಒಮ್ಮೆ ಕ್ಷೇತ್ರಕ್ಕೆ ಬಂದು ಅಧಿಕೃತವಾಗಿ ನಿಮ್ಮಿಂದಲೇ ನನ್ನನ್ನು ಅಭ್ಯರ್ಥಿ ಎಂದು ಘೋಷಿಸಿ ನನ್ನ ಪರ ಕೆಲಸ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಬೇಕು ಎಂದು ಮನವಿ ಮಾಡಿದರು ಎಂದು ಮೂಲಗಳು ತಿಳಿಸಿವೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios