ರಾಜ್ಯದಲ್ಲಿ ಬರಗಾಲಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ: ಬಿಎಸ್‌ವೈ ವಾಗ್ದಾಳಿ
ಮಳೆ ಇಲ್ಲದೆ ರಾಜ್ಯದಲ್ಲಿ ಭೀಕರ ಬರ ಆವರಿಸಿ ರೈತರು, ಸಾಮಾನ್ಯ ಜನ ಬದುಕು ಸಾಗಿಸುವುದೇ ದುಸ್ಥರವಾಗಿ ಉಸಿರುಗಟ್ಟುವ ವಾತಾವರಣ ನಿರ್ಮಾಣಗೊಂಡಿದೆ.

ರಾಯಚೂರು/ಲಿಂಗಸುಗೂರು (ಅ.16): ಮಳೆ ಇಲ್ಲದೆ ರಾಜ್ಯದಲ್ಲಿ ಭೀಕರ ಬರ ಆವರಿಸಿ ರೈತರು, ಸಾಮಾನ್ಯ ಜನ ಬದುಕು ಸಾಗಿಸುವುದೇ ದುಸ್ಥರವಾಗಿ ಉಸಿರುಗಟ್ಟುವ ವಾತಾವರಣ ನಿರ್ಮಾಣಗೊಂಡಿದೆ. ರಾಜ್ಯ ಸರ್ಕಾರ ಬರ ಪರಿಹಾರದ ಯೋಜನೆಗಳನ್ನು ರೂಪಿಸದೆ ಆಡಳಿತ ಕೈಚೆಲ್ಲಿ ಕುಳಿತಿದೆ ಎಂದು ಮಾಜಿ ಮುಖ್ಯಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಲಿಂಗಸುಗೂರಿನಲ್ಲಿ ಆಯೋಜಿಸಿರುವ ರಂಬಾಪುರಿ ಜಗದ್ಗುರುಗಳ ದಸರಾ ದರ್ಬಾರ್ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾನುವಾರ ಆಗಮಿಸಿದಾಗ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬರದಿಂದ ರೈತರ ಬೆಳೆಗಳು ನಷ್ಟಕ್ಕೀಡಾಗಿವೆ. ರೈತರಿಗೆ ಪರಿಹಾರ ನೀಡುತ್ತಿಲ್ಲ. ಬರಗಾಲದಂಥ ಭೀಕರ ಸ್ಥಿತಿಯಲ್ಲಿ ಜನರ ನೆರವಿಗೆ ಧಾವಿಸಬೇಕಿರುವ ರಾಜ್ಯ ಸರ್ಕಾರ ಕೇಂದ್ರದತ್ತ ಬೆರಳು ತೋರಿಸುತ್ತಿದೆ ಎಂದು ಆರೋಪಿಸಿದರು.
ಜೋಶಿ ಹೇಳಿಕೆ ಸರಿಯಾಗಿದೆ: ಐಟಿ ದಾಳಿ ವೇಳೆ ದೊರೆತ ಕೋಟ್ಯಂತರ ಹಣ ಚುನಾವಣೆಗಾಗಿ ತೆಗೆದಿಟ್ಟ ಅಕ್ರಮ ಹಣ ಎಂಬ ದಟ್ಟ ಆರೋಪಗಳು ಇವೆ. ಈ ಹಣದ ಕುರಿತು ಸಮಗ್ರ ತನಿಖೆಯಾಗಬೇಕು. ಚುನಾವಣೆಗಾಗಿ 1,000 ಕೋಟಿ ಹಣ ಸಂಗ್ರಹದ ಕುರಿತು ಕೇಂದ್ರ ಸಚಿವ ಜೋಶಿಯವರ ಹೇಳಿಕೆ ರಾಜ್ಯ ಸರ್ಕಾರ ಹಣ ಸಂಗ್ರಹದ ಕುರಿತು ಹೇಳಿದ್ದು ಸರಿಯಾಗಿದೆ ಎಂದು ತಿಳಿಸಿದರು. ಗ್ಯಾರಂಟಿ ಯೋಜನೆ ಜಾರಿಗಾಗಿ ರಾಜ್ಯದ ಖಜಾನೆ ಖಾಲಿಯಾಗಿದೆ. ಪರಿಣಾಮ ರಸ್ತೆ, ನೀರಾವರಿ, ಸೇರಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣವಿಲ್ಲದಂತಾಗಿದೆ. ಸರ್ಕಾರ ದಿವಾಳಿಯಾಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ರಾಜ್ಯ ಸರ್ಕಾರ ಬರಗಾಲದ ಸ್ಥಿತಿಯಲ್ಲೂ ಜನರ ಬದುಕು ಸುಧಾರಿಸಲು ಯಾವುದೇ ಕಾರ್ಯಕ್ರಮ ಕೈಗೊಂಡಿಲ್ಲ ಎಂದು ಛೇಡಿಸಿದರು.
ಚೀನಾದ ಫೋಟೋಗಳನ್ನ ಶೇರ್ ಮಾಡಿದ Dr Bro: ನಕಲಿಗಳ ಮಧ್ಯೆ ನೀವು ಕನ್ನಡದ ಅಸಲಿ ಚಿನ್ನ ಎಂದ ಫ್ಯಾನ್ಸ್!
ಗುತ್ತಿಗೆದಾರರಿಗೆ ಕಾಮಗಾರಿ ಮಾಡಿದ ಹಣ ಪಾವತಿ ಮಾಡಿಲ್ಲ. ಇದರಿಂದ ಸರ್ಕಾರದ ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಅಲ್ಲದೆ, ಹಣ ನೀಡದಿದ್ದರೆ ಕೆಲಸ ನಿಲ್ಲಿಸುವುದಾಗಿ ಹೇಳುತ್ತಿದ್ದಾರೆ. ಆದರೂ ಸರ್ಕಾರ ಮೌನ ವಹಿಸಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಗುತ್ತಿಗೆದಾರರು, ಕಲಾವಿದರೂ ಸೇರಿ ಒಂದೊಂದೇ ಹಗರಗಣಗಳು ಹೊರ ಬರುತ್ತಿವೆ. ಇದಕ್ಕೆ ಕಲಾವಿದರಿಂದ ಕಮಿಷನ್ ಪಡೆಯಲು ಮುಂದಾಗಿರುವುದು ರಾಜ್ಯ ಆಡಳಿತ ಅತ್ಯಂತ ಕೀಳುಮಟ್ಟಕ್ಕೆ ಇಳಿದಿದೆ ಎನ್ನುವುದಕ್ಕೆ ಸಾಕ್ಷಿ. ಇಂಥ ಗಂಭೀರ ಹಗರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತುಟಿಬಿಚ್ಚದಿರುವುದು ದುರ್ದೈವ ಎಂದು ಹೇಳಿದರು.
BBK 10 Breaking: ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಮೊದಲ ಸ್ಪರ್ಧಿ ಸ್ನೇಕ್ ಶ್ಯಾಮ್!
ರಾಜ್ಯದಲ್ಲಿ ವಿದ್ಯುತ್ ಕಣ್ಣು ಮುಚ್ಚಾಲೆ ನಡೆದಿದೆ. ರಾಜ್ಯ ಸರ್ಕಾರ ಜನರ ಹಿತ ಮರೆತಿದೆ. ಬೇರೆಡೆಯಿಂದ ವಿದ್ಯುತ್ ಖರೀದಿಸಿ ಸಮಸ್ಯೆ ಸರಿದೂಗಿಸಬೇಕು. ಆದರೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ನಮ್ಮ ಅವಧಿಯಲ್ಲಿ ಹೆಚ್ಚುವರಿ ವಿದ್ಯುತ್ ಖರೀದಿಸಿ ಲೋಡ್‌ಶೆಡ್ಡಿಂಗ್ ಆಗದಂತೆ ಜನರಿಗೆ ವಿದ್ಯುತ್ ಪೂರೈಸಿದ್ದೇವೆ. ಕೂಡಲೇ ಸರ್ಕಾರ ವಿದ್ಯುತ್ ಸೇರಿ ರೈತರ ಸಮಸ್ಯೆಗಳಿಗೆ ತಕ್ಷಣ ಸ್ಪಂಧಿಸಬೇಕೆಂದು ಆಗ್ರಹಿಸಿದರು. ಜಾತಿ ಗಣತಿ ವರದಿ ಬಿಡುಗಡೆಗೆ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿ, ನಮ್ಮದೇನೂ ತಕರಾರು ಇಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಸಂಚರಿಸಿ ಪ್ರಚಾರ ಮಾಡುವೆ. 25ಕ್ಕೂ ಅಧಿಕ ಸ್ಥಾನ ಗೆಲ್ಲುವ ಗುರಿ ಇದೆ. ಶೀಘ್ರ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ಆಗುತ್ತದೆ ಎಂದರು.