Asianet Suvarna News Asianet Suvarna News

Karnataka CM Announcement : ಸಿದ್ದರಾಮಯ್ಯ ಮನೆ ಮುಂದೆ ಸಂಭ್ರಮ, ಡಿಕೆಶಿ ಮನೆ ಮುಂದೆ ನೀರವ ಮೌನ!

ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯದಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ತವರು ಜಿಲ್ಲೆ ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಕೂಡ ಅಭಿಮಾನಿಗಳು ಸಂಭ್ರಮಿಸಿದ್ದಾರೆ.

Siddaramaiah fans celebration all over Karnataka  before Karnataka CM Announcement gow
Author
First Published May 17, 2023, 1:41 PM IST

ಬೆಂಗಳೂರು (ಮೇ.17): ಸಿದ್ದರಾಮಯ್ಯ ಅವರು ರಾಜ್ಯ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿ ಬೆನ್ನಲ್ಲೇ  ಸಿದ್ದರಾಮಯ್ಯ ನಿವಾಸದ ಮುಂದೆ ಅಭಿಮಾನಿಗಳು ಸಂಭ್ರಾಮಾಚರಣೆಯಲ್ಲಿ ತೊಡಗಿದ್ದಾರೆ. ಇತ್ತ  ಡಿ.ಕೆ ಶಿವಕುಮಾರ್ ನಿವಾಸ ಖಾಲಿ ಹೊಡೆಯುತ್ತಿದೆ. ಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್ ನಿವಾಸದಲ್ಲಿ ಯಾವ ಅಭಿಮಾನಿಯೂ ಇಲ್ಲದೆ ಬಣಗುಟ್ಟುತ್ತಿದೆ. ಇನ್ನೂ ರಾಜ್ಯದ ಮುಖ್ಯಮಂತ್ರಿ ಯಾರೆಂದು ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ ಆಗಲಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ರಾಜ್ಯದಾದ್ಯಂತ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ತವರು ಜಿಲ್ಲೆ ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಕೂಡ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯ ಭಾವಚಿತ್ರ ಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಫ್ಲೆಕ್ಸ್‌ನಲ್ಲಿ ಸಿದ್ದರಾಮಯ್ಯ ಜೊತೆಗೆ ಮೊಮ್ಮಗ ಧವನ್ ರಾಕೇಶ್ ಸಿದ್ದರಾಮಯ್ಯ ಭಾವಚಿತ್ರದಲ್ಲಿ ಕೂಡ ಮುಂದಿನ‌ ವಾರಸುದಾರ ಎಂದು ಅಭಿಮಾನಿಗಳು ಬರೆದಿದ್ದಾರೆ.

ಪ್ರತಿಭಟಿಸದಂತೆ ಡಿಕೆಶಿ ಬ್ರದರ್ಸ್ ಆಗ್ರಹ: ಸಿಎಂ ಸ್ಥಾನಕ್ಕೆ ಸಿದ್ದು ಹೆಸರು ಘೋಷಣೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತವರು ಜಿಲ್ಲೆಯಲ್ಲಿ ಹೈ ಅಲರ್ಟ್.  ಜಿಲ್ಲೆಯ ಪೊಲೀಸರಿಗೆ ಅಲರ್ಟ್ ಆಗಿರಲು ಸೂಚಿಸಿರೋ ಉನ್ನತ ಅಧಿಕಾರಿಗಳು. ಜಿಲ್ಲೆಗೆ ಹೆಚ್ಚುವರಿ ಪೊಲೀಸ್ ತುಕಡಿ ನಿಯೋಜನೆ. ಡಿಕೆಶಿಗೆ ಸಿಎಂ ಸ್ಥಾನ ತಪ್ಪಿರುವ ಹಿನ್ನೆಲೆ ಗಲಾಟೆ, ಪ್ರತಿಭಟನೆ ಸಾಧ್ಯತೆ. ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಯುವ ಸಾಧ್ಯತೆ ಹಿನ್ನೆಲೆ‌ಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅಲರ್ಟ್ ಆಗ್ತಿರೋ ಪೊಲೀಸರು. ಆದರೆ ಯಾವುದೇ ಪ್ರತಿಭಟನೆ ನಡೆಸದಂತೆ ಬೆಂಬಲಿಗರಿಗೆ ಡಿಕೆ ಬ್ರದರ್ಸ್ ಸೂಚನೆ.
ಪಕ್ಷಕ್ಕೆ ಮುಜಗರ ಆಗದಂತೆ ನಡೆದುಕೊಳ್ಳಿ ಎಂದು ಮನವಿ. ಫೋನ್ ಮೂಲಕ ಕ್ಷೇತ್ರದ ಮುಖಂಡರಿಗೆ ಸೂಚನೆ.

Karnataka CM Announcement: ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ, ಅಧಿಕೃತ ಘೋಷಣೆಯೊಂದೇ ಬಾಕಿ?

ಇನ್ನು ಸಿದ್ದರಾಮಯ್ಯ ಅವರ ಬೆಂಗಳೂರಿನ ಮನೆ ಮುಂದೆ ಅಭಿಮಾನಿಗಳು ಹೆಚ್ಚುತ್ತಿರುವ  ಹಿನ್ನೆಲೆ ಮನೆ ಮುಂದೆ ಪೊಲೀಸರ ನಿಯೋಜನೆ ಮಾಡಲಾಗಿದೆ. ರಸ್ತೆಯಯುದ್ದಕ್ಕೂ ಪ್ಲೆಕ್ಸ್ ಗಳನ್ನು  ಅಳವಡಿಕೆ ಮಾಡಲಾಗಿದೆ. ಸ್ಥಳಕ್ಕೆ ಹೈಗ್ರೌಂಡ್ಸ್ ಇನ್ಸಪೆಕ್ಟ್ ಶಿವಸ್ವಾಮಿ ಆಗಮಿಸಿ ಪರಿಶೀಲನೆ ನಡೆಸಿದ್ದು, ಅಭಿಮಾನಿಗಳು ಹೆಚ್ಚುತ್ತಿದ್ದಂತೆ  ದಾರಿಯುದ್ದಕ್ಕೂ ಬ್ಯಾರಿಕೇಡ್ ಗಳನ್ನು ಅಳವಡಿಕೆ ಮಾಡಲಾಗಿದೆ. ಬ್ಯಾರಿ ಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದೆ. ನಗರದ ಗಾಂಧಿ ಭವನ ರಸ್ತೆಯನ್ನು ಪೊಲೀಸರು  ಪೂರ್ತಿ ಬಂದ್ ಮಾಡಿದ್ದಾರೆ. ಗಾಂಧಿ ಭವನ ರಸ್ತೆಯಲ್ಲಿ ಫ್ಲೆಕ್ಸ್ ಗಳು ರಾರಾಜಿಸುತ್ತಿದೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಸಿದ್ದರಾಮಯ್ಯರಿಗೆ ಶುಭಾಶಯ ಎಂಬ ಬ್ಯಾನರ್‌ಗಳನ್ನು ಅಭಿಮಾನಿಗಳು ಅಳವಡಿಕೆ ಮಾಡಿದ್ದಾರೆ.

Karnataka CM Announcement: ಸಿದ್ದರಾಮಯ್ಯ ಸಿಎಂ, ಡಿಕೆಶಿ ಡಿಸಿಎಂ ಹೈಕಮಾಂಡ್ ಸಂಧಾನ ಸೂತ್ರವೇನು?

ಸಿದ್ದು ಕುಣಿತ ನೆನೆದು ಗೆಳೆಯರ ಸ್ಟೆಪ್:
ಸಿದ್ದರಾಮಯ್ಯ ಅವರು ತವರು ಊರು ಸಿದ್ದರಾಮನ ಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದ್ದು, ಗ್ರಾಮದ ಹೃದಯ ಭಾಗದಲ್ಲಿ ಸಿದ್ದರಾಮಯ್ಯ ಬೃಹತ್ ಕಟೌಟ್ ನಿರ್ಮಾಣ ಮಾಡಲಾಗಿದೆ. ಪಟಾಕಿ ಸಿಡಿಸಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯಗೆ ವರುಣ ತಾಯಿ ಕ್ಷೇತ್ರ ಇದ್ದಂಗೆ. ಹಾಗಾಗಿ ಇಲ್ಲಿಂದ ಆಯ್ಕೆಯಾಗಿ ಅಧಿಕಾರ ಹಿಡಿದಿದ್ದಾರೆ. ಕಳೆದ ಬಾರಿ 5 ವರ್ಷ ಸಿಎಂ ಆಗಿ ಉತ್ತಮ ಆಡಳಿತ ಕೊಟ್ಟಿದ್ದಾರೆ. ಬಹುತೇಕ ಭರವಸೆಯನ್ನು ಈಡೇರಿಸಿದ್ದಾರೆ. ಈ ಬಾರಿ ಕೇವಲ ಐದು ಗ್ಯಾರಂಟಿ ಕೊಟ್ಟಿರೋದು. ಅವುಗಳನ್ನು ಈಡೇರಿಸಿಯೇ ತೀರುತ್ತಾರೆ ಎಂದ ಗ್ರಾಮಸ್ಥರು ಭರವಸೆ ವ್ಯಕ್ತಪಡಿಸಿದ್ದಾರೆ. ಗೆಳೆಯ ಸಿದ್ದರಾಮಯ್ಯ ಅವರ ಪೂಜಾ ಕುಣಿತ ವನ್ನು ಕರ್ಗೇಗೌಡ ಹಾಗೂ ಇತರರು  ನೆನೆದಿದ್ದಾರೆ. ಊರ ಹಬ್ಬಕ್ಕೆ ಬಂದರೆ ಸಿದ್ದರಾಮಯ್ಯ ಕುಣಿಯುತ್ತಾರೆ. ಸಿಎಂ ಆಗಿ ಈ ಬಾರಿ ಬಂದಾಗಲು ಕುಣಿಯುತ್ತಾರೆ. ಅವರ ಜೊತೆ ಕುಣಿಯು ಕಾತರರಾಗಿದ್ದೇವೆ ಎಂದು ಸಿದ್ದು ಕುಣಿತ ನೆನೆದು ಗೆಳೆಯರು ಸ್ಟೆಪ್ ಹಾಕಿದ್ದಾರೆ.

Follow Us:
Download App:
  • android
  • ios