Asianet Suvarna News Asianet Suvarna News

ಯಾವುದೇ ಕಾರಣಕ್ಕೂ ಕೋಲಾರದಿಂದ ಸಿದ್ದು ಸ್ಪರ್ಧಿಸಲ್ಲ: ಬಿಎಸ್‌ವೈ ಹೊಸ ಬಾಂಬ್!

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿಕೊಂಡಿದ್ದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತ್ರ ಅಂಥ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.

siddaramaiah did not contest from Kolar for any reason says bsy at belagavi rav
Author
First Published Jan 24, 2023, 1:42 AM IST

ಬೆಳಗಾವಿ (ಜ.24) : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿಕೊಂಡಿದ್ದರೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಾತ್ರ ಅಂಥ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರದಿಂದ ಸ್ಪರ್ಧಿಸಲ್ಲ, ಅವರು ಮೈಸೂರಿಗೆ ಹೋಗಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭವಿಷ್ಯ ಹೇಳುತ್ತಿಲ್ಲ. ನನ್ನ ಪ್ರಕಾರ ಸಿದ್ದರಾಮಯ್ಯ((Siddaramaiah) ಕೋಲಾರದಿಂದ ಸ್ಪರ್ಧಿಸುವುದಿಲ್ಲ. ಅವರು ಮೈಸೂರಿಗೆ ಹೋಗಲು ಪ್ರಯತ್ನಿಸುತ್ತಿದ್ದಾರೆ. ಆದರೂ ಅವರು ರಾಜಕೀಯ ನಾಟಕ ಮಾಡುತ್ತಿದ್ದಾರೆ. ಒಮ್ಮೆ ಎಲ್ಲಿ ನಿಲ್ಲುತ್ತಾರೆಂದು ಖಚಿತವಾದ ಬಳಿಕ ನಾವು ನಮ್ಮ ಮುಂದಿನ ತಂತ್ರಗಾರಿಕೆ ಮಾಡಬೇಕು, ಅದನ್ನು ಮಾಡುತ್ತೇವೆ. ಸಿದ್ದರಾಮಯ್ಯ ಎರಡು ಕಡೆಯಾದರೂ ಸ್ಪರ್ಧೆ ಮಾಡಲಿ, ಮೂರು ಕಡೆಯಾದರೂ ಸ್ಪರ್ಧೆ ಮಾಡಲಿ, ಅವರು ಸೋತು ಮನೆಗೆ ಹೋಗುವುದಂತು ನಿಶ್ಚಿತ ಎಂದರು.

Assembly election: ಸಿದ್ದು ಆಯ್ತು, ಈಗ ಶ್ರೀರಾಮುಲು ಕ್ಷೇತ್ರ ಚರ್ಚೆ: ಬೆಳಗಾವಿಯಲ್ಲಿ ಮಸೀದಿ ಪಾಲಿಟಿಕ್ಸ್

ಬಿಜೆಪಿಯಲ್ಲಿ ಮಾಸ್‌ ಲೀಡರ್‌ ಇಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇದೇ ವೇಳೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ ಪಕ್ಷದಲ್ಲಿ ಯಾರು ಮಾಸ್‌ ಲೀಡರ್‌ ಇದ್ದಾರೆ. ನಮಗಾದರೂ ಪ್ರಧಾನಿ ಮೋದಿ ಎಂಬ ಒಬ್ಬ ಮಹಾನ್‌ ನಾಯಕ ಇದ್ದಾರೆ. ಅವರೇನು ರಾಹುಲ… ಗಾಂಧಿ ಹಿಡಿದುಕೊಂಡು ಓಡಾಡುತ್ತಾರಾ? ಅವರಿಗೆ ಯಾರಿದ್ದಾರೆ? ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ರಾಷ್ಟ್ರಮಟ್ಟದಲ್ಲಿ ಹಾಗೂ ಎಲ್ಲ ರಾಜ್ಯಗಳನ್ನು ಏಕೆ ಅಧಿಕಾರ ಕಳೆದುಕೊಂಡಿದೆ? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈ ರೀತಿ ಹೇಳಿಕೆಗಳಿಂದ ಅವರು ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ನೂರಕ್ಕೆ ನೂರು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳಿದರು. 

ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ: ಹಳೆ ಮೈಸೂರು ಭಾಗದಲ್ಲಿ ಯಾವ ಪಕ್ಷಕ್ಕೆ ನಷ್ಟ?

Follow Us:
Download App:
  • android
  • ios