ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸೋದು ಬಹುತೇಕ ಅನುಮಾನ ಎನ್ನುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಈ ಹಿಂದೆ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲು ಕೋಲಾರದಲ್ಲಿ ಫೆ.13ರಂದು ಉದ್ಘಾಟನೆಗೊಂಡಿದ್ದ ವಾರ್‌ರೂಂ ಗತಿ ಏನು ಎಂಬ ಪ್ರಶ್ನೆ ತೀವ್ರ ಕುತೂಹಲ ಮೂಡಿಸಿದೆ.

ಕೋಲಾರ (ಮಾ.20) : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಲ್ಲಿ ಸ್ಪರ್ಧಿಸೋದು ಬಹುತೇಕ ಅನುಮಾನ ಎನ್ನುವಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ಈ ಹಿಂದೆ ಸಿದ್ದರಾಮಯ್ಯ ಪರ ಪ್ರಚಾರ ನಡೆಸಲು ಕೋಲಾರದಲ್ಲಿ ಫೆ.13ರಂದು ಉದ್ಘಾಟನೆಗೊಂಡಿದ್ದ ವಾರ್‌ರೂಂ ಗತಿ ಏನು ಎಂಬ ಪ್ರಶ್ನೆ ತೀವ್ರ ಕುತೂಹಲ ಮೂಡಿಸಿದೆ.

ಸಿದ್ದರಾಮಯ್ಯ(Siddaramaiah) ಅವರು ಕೋಲಾರ(Kolar)ದಿಂದ ಸ್ಪರ್ಧಿಸುವುದಾಗಿ ಹೇಳಿದ್ದ ಹಿನ್ನೆಲೆಯಲ್ಲಿ ಕೋಲಾರದ ಟೇಕಲ್‌ ರಸ್ತೆಯಲ್ಲಿರುವ ಹೊಸ ಕಟ್ಟಡದಲ್ಲಿ ಚುನಾವಣಾ ವಾರ್‌ ರೂಮ್‌(Election war room)ವೊಂದನ್ನು ಸಜ್ಜುಗೊಳಿಸಲಾಗಿತ್ತು. ಸ್ವತಃ ಸಿದ್ದರಾಮಯ್ಯ ಅವರೇ ಈ ವಾರ್‌ರೂಂ ಉದ್ಘಾಟಿಸಿದ್ದರು.

ಸಿದ್ದು ಸ್ಪರ್ಧೆಗೆ ವಿವಿಧ ಸಮುದಾಯಗಳ ಆಗ್ರಹ

ಅಂದಿನಿಂದ 10 ಮಂದಿ ಇಲ್ಲಿ ಚುನಾವಣಾ ವಾರಿಯ​ರ್‍ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದ ಗ್ರಾಮವಾರು, ಜಾತಿವಾರು ಅಂಕಿ-ಅಂಶಗಳನ್ನು ಕಲೆಹಾಕುತ್ತಿದ್ದರು. ಕ್ಷೇತ್ರದಲ್ಲಿ ಎಷ್ಟುಮಂದಿ ಮತದಾರರಿದ್ದಾರೆ, ಇವರಲ್ಲಿ ಬಿಜೆಪಿ, ಜೆಡಿಎಸ್‌ ಹಾಗೂ ಸಿದ್ದರಾಮಯ್ಯ ಪರ ಎಷ್ಟುಮಂದಿಯಿದ್ದಾರೆ ಎಂಬುದರ ಬಗ್ಗೆ ಗ್ರಾಮೀಣವಾರು ಮಾಹಿತಿ ಸಂಗ್ರಹಿಸುವ ಕೆಲಸ ನಡೆಸಲಾಗುತ್ತಿದೆ.

ಆದರೆ, ಇದೀಗ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸದಿರುವ ಸುಳಿವು ನೀಡಿರುವ ಹಿನ್ನೆಲೆಯಲ್ಲಿ ಈ ವಾರ್‌ರೂಂನ ಅಸ್ತಿತ್ವವೇ ಡೋಲಾಯಮಾನ ಸ್ಥಿತಿಗೆ ತಲುಪಿದೆ. ಈವರೆಗೂ ವಾರ್‌ರೂಮ್‌ನಲ್ಲಿ ಕೆಲಸ ಮಾಡುತ್ತಿರುವವರಿಗೆ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿಲ್ಲ ಎಂದು ಖಚಿತ ಸಂದೇಶ ರವಾನೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರವೂ ಈ ವಾರ್‌ರೂಮ್‌ನಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ಮುಂದುವರಿದಿವೆ.

ಕೋಲಾರದಲ್ಲಿ ಸಿದ್ದು ಸ್ಪರ್ಧೆ ಕ್ಯಾನ್ಸಲ್‌: ಅಖಾಡಕ್ಕೆ ಎಂಟ್ರಿ ಕೊಟ್ಟ ಡಿಕೆಶಿ, ಮತ್ತೊಂದು ಮಾಸ್ಟರ್‌ ಪ್ಲಾನ್‌ ರೆಡಿ..!