ಡಿಸಿಸಿ ಬ್ಯಾಂಕ್ ಮೂಲಕ ಸ್ವ ಸಹಾಯ ಹಾಗೂ ಸ್ತ್ರೀ ಶಕ್ತಿಗಳಿಗೆ ಸಾಲ ನೀಡುವ ಮೂಲಕ ಬ್ಯಾಲಹಳ್ಳಿ ಗೋವಿಂದಗೌಡ ಅವರು ಭಾರೀ ಜನಮನ್ನಣೆ ಗಳಿಸಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕ ಬ್ಯಾಲಹಳ್ಳಿ ಗೋವಿಂದಗೌಡ ತಮ್ಮದೇ ಓಟ್‌ ಬ್ಯಾಂಕ್ ಹೊಂದಿದ್ದಾರೆ. 

ಕೋಲಾರ(ಮಾ.19): ಕೋಲಾರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಕ್ಯಾನ್ಸಲ್‌ ಆದ ಹಿನ್ನೆಲೆಯಲ್ಲಿ ಮತ್ತೊಬ್ಬ ಸೂಕ್ತ ಅಭ್ಯರ್ಥಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಹೌದು, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡಗೆ ಅವರಿಗೆ ಡಿ.ಕೆ ಶಿವಕುಮಾರ್ ಕರೆ ಮಾಡಿದ್ದು ಚುನಾವಣೆಗೆ ತಯಾರಾಗುವಂತೆ ಸೂಚನೆ ನೀಡಿದ್ದಾರೆ ಅಂತ ತಿಳಿದು ಬಂದಿದೆ. 

ಹೀಗಾಗಿ ಕೋಲಾರದಲ್ಲಿ ಡಿ.ಕೆ ಶಿವಕುಮಾರ್ ನಡೆ ಭಾರೀ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಹಾಗೂ ಕೆ.ಎಚ್ ಮುನಿಯಪ್ಪರನ್ನು ಡಿ.ಕೆ ಶಿವಕುಮಾರ್‌ ಓವರ್ ಟೇಕ್ ಮಾಡಿದ್ದಾರೆ. ಸಿದ್ದು ಸ್ಪರ್ಧೆ ಘೋಷಣೆಗೂ ಮುನ್ನವೇ ಕೋಲಾರದ ಟಿಕೆಟ್‌ಗಾಗಿ ಬ್ಯಾಲಹಳ್ಳಿ ಗೋವಿಂದಗೌಡ ಅರ್ಜಿ ಹಾಕಿದ್ದರು. ಸಿದ್ದು ಸ್ಪರ್ಧೆ ಘೋಷಣೆ ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಬ್ಯಾಲಹಳ್ಳಿ ಗೋವಿಂದಗೌಡ ಓಡಾಟ ನಡೆಸಿದ್ದರು. 

ಕೋಲಾರದ ಸ್ಪರ್ಧೆ ಗೊಂದಲ: ಸಿದ್ದರಾಮಯ್ಯ ಇಮೇಜ್‌ಗೆ ಧಕ್ಕೆ

ಡಿಸಿಸಿ ಬ್ಯಾಂಕ್ ಮೂಲಕ ಸ್ವ ಸಹಾಯ ಹಾಗೂ ಸ್ತ್ರೀ ಶಕ್ತಿಗಳಿಗೆ ಸಾಲ ನೀಡುವ ಮೂಲಕ ಬ್ಯಾಲಹಳ್ಳಿ ಗೋವಿಂದಗೌಡ ಅವರು ಭಾರೀ ಜನಮನ್ನಣೆ ಗಳಿಸಿದ್ದಾರೆ. ಒಕ್ಕಲಿಗ ಸಮುದಾಯದ ನಾಯಕ ಬ್ಯಾಲಹಳ್ಳಿ ಗೋವಿಂದಗೌಡ ತಮ್ಮದೇ ಓಟ್‌ ಬ್ಯಾಂಕ್ ಹೊಂದಿದ್ದಾರೆ. ಬ್ಯಾಲಹಳ್ಳಿ ಗೋವಿಂದಗೌಡ ಅವರು ಸಿದ್ದರಾಮಯ್ಯ ಜೊತೆಯಲ್ಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ಇವರನ್ನ ಕೋಲಾರದಲ್ಲಿ ಕಣಕ್ಕಿಳಿಸಿದರೆ ಗೆಲ್ಲಬಹುದು ಅನ್ನೋದು ಡಿಕೆಶಿ ಲೆಕ್ಕಾಚಾರವಾಗಿದೆ. ಶತಾಯ ಗತಾಯ ಮಾಡಿಯಾದರೂ ಕೋಲಾರದಲ್ಲಿ ಕಾಂಗ್ರೆಸ್‌ ಗೆಲ್ಲಿಸಲು ಡಿಕೆಶಿ ಮಾಸ್ಟರ್‌ ಪ್ಲಾನ್‌ ಮಾಡಿದ್ದಾರೆ ಅಂತ ಹೇಳಲಾಗುತ್ತಿದೆ.