ಬೆಂಗಳೂರು, [ಜ.05]: ವಿಧಾನಸೌಧದಲ್ಲಿ ಹಣ ಜಪ್ತಿ ಪ್ರಕರಣ ವಿವಾದದ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಮಾಜಿ ಸಿಎಂ ಸಿದ್ದರಾಮಯ್ಯರಿಂದ ಪುಟ್ಟರಂಗಶೆಟ್ಟಿಗೆ ಬುಲಾವ್​ ನೀಡಲಾಗಿದೆ.

ವಿಧಾನಸೌಧದಲ್ಲಿ ಪುಟ್ಟರಂಗಶೆಟ್ಟಿ ಅವರ ಕಚೇರಿ ಸಿಬ್ಬಂದಿ ಟೈಪಿಸ್ಟ್​​ ಮೋಹನ್ ಸುಮಾರು 25 ಲಕ್ಷ ಅಕ್ರಮ ಹಣ ಸಾಗಿಸುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ವಿಧಾನಸೌಧದಲ್ಲೇ ಲಕ್ಷ ಲಕ್ಷ ಹಣದೊಂದಿದೆ ಪೊಲೀಸ್ ಬಲೆಗೆ ಸಚಿವರ ಆಪ್ತ : ಯಾರಾತ..?

ಈ ಹಿನ್ನೆಲೆ ತನ್ನನ್ನು ತಕ್ಷಣ ಭೇಟಿ ಮಾಡುವಂತೆ ಪುಟ್ಟರಂಗಶೆಟ್ಟಿಗೆ ಸಿದ್ದರಾಮಯ್ಯ ಬುಲಾವ್​​ ನೀಡಿದ್ದು, ಅದರಂತೆ  ಪುಟ್ಟರಂಗಶೆಟ್ಟಿ ಅವರು ಕಾವೇರಿ ನಿವಾಸಕ್ಕೆ ಬಂದು ಸಿದ್ದರಾಮಯ್ಯ ಜೊತೆ ಚರ್ಚೆ ಮಾಡಿದರು.

ಮಾಜಿ ಸಿಎಂ ಆಪ್ತ ಸಚಿವರ ಸಿಬ್ಬಂದಿ ಬಳಿ ವಿಧಾನಸೌಧದಲ್ಲೆ ಲಕ್ಷಗಟ್ಟಲೆ ಹಣ ಪತ್ತೆ

ವಿಧಾನಸೌಧದಲ್ಲಿ ಹಣ ಜಪ್ತಿ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು, ನಾಳೆ [ಭಾನುವಾರ] ಬಿಜೆಪಿ ರಾಜ್ಯಾದ್ಯಾಂತ ಪ್ರತಿಭಟನೆಗೆ ಕರೆ ನೀಡಿದೆ.