'ಹುಲಿಯಾ VS ಕಾಡು ಮನುಷ್ಯ' ಸಿದ್ದು ಮಾತಿಗೆ ಕಟೀಲ್ ಅದ್ಭುತ ಕೌಂಟರ್!
ಕರ್ನಾಟಕ ಉಪಚುನಾವಣಾ ರಣ ಕಣ/ ಬಿಜೆಪಿ ವರ್ಸಸ್ ಕಾಂಗ್ರೆಸ್/ ಸಿದ್ದರಾಮಯ್ಯ ವರ್ಸಸ್ ಕಟೀಲ್/ ಟ್ವಿಟರ್ ವಾರ್ ನಲ್ಲಿ ಬೈಗುಳಗಳದ್ದೆ ದರ್ಬಾರ್
ಬೆಂಗಳೂರು (ಅ.22) ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನಡುವೆ ಟ್ವಿಟರ್ ವಾರ್ ಜೋರಾಗಿದೆ. ನಳಿನ್ ಕುಮಾರ್ ಕಟೀಲ್ ವಿರುದ್ಧ ಸರಣಿ ಟ್ವೀಟ್ಗಳ ಮೂಲಕ ಇಂದು ಟೀಕಾಸ್ತ್ರ ಪ್ರಯೋಗಿಸಿದ್ದ ಸಿದ್ದರಾಮಯ್ಯ, "ಆತನೋರ್ವ ಕಾಡು ಮನುಷ್ಯ, ಮಂಗಳೂರಿನಲ್ಲಿ ಬೀದಿ ಬೀದಿ ಅಲೆಯುತ್ತಿದ್ದವನನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಮಾಡಿದೆ" ಎಂದು ಕಿಡಿಕಾರಿದ್ದರು.
ಇದಕ್ಕೆ ತಕ್ಕುದಾದ ಉತ್ತರ ನೀಡಿರುವ ಕಟೀಲ್, ನಿಮ್ಮ ಖಾತೆ ಹ್ಯಾಕ್ ಆಗಿದೆ ಎಂದು ಭಾವಿಸುತ್ತೇನೆ. ದಯವಿಟ್ಟು ಪೊಲೀಸರಿಗೆ ದೂರು ಕೊಡಿ.. ಒಂದು ವೇಳೆ ಇದನ್ನು ನೀವೇ ಹಾಕಿದ್ದರೆ ನಿಮ್ಮ ಬಗ್ಗೆ ಸಹಾನುಭೂತಿ ಇದೆ' ಎಂದು ಕಟೀಲ್ ಕೌಂಟರ್ ಕೊಟ್ಟಿದ್ದಾರೆ.
'ಮೈತ್ರಿ ಸರ್ಕಾರ ಪತನ ಮಾಡಿದ್ದು ಯಾರು?'
ಸಿದ್ದರಾಮಯ್ಯ ಆರೋಪಗಳಿಗೆ ಆಕ್ರೋಶಗೊಂಡಿರುವ ರಾಜ್ಯ ಬಿಜೆಪಿ ಸರಣಿ ಟ್ವೀಟ್ ಗಳ ಮೂಲಕ ಉತ್ತರ ನೀಡಿದೆ. "ಮಾನ್ಯ ಸಿದ್ದರಾಮಯ್ಯ ನೀವು ಬಳಸುತ್ತಿರುವ ಪದಗಳೇ ಯಾರು ʼಕಾಡು ಮನುಷ್ಯʼ ಎಂಬುದನ್ನು ಸಾಬೀತು ಪಡಿಸುತ್ತಿದೆ. ಕಾಡುಮನುಷ್ಯ, ನಾಲಾಯಕ್, ಬೀದಿ ಅಲೆಯುತ್ತಿದ್ದವ, ಎಲುಬಿಲ್ಲದವ ಎಂಬ ನಿಮ್ಮ ಮಾತುಗಳೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯನ್ನು ಬಿಂಬಿಸುತ್ತಿದೆ. ನೀವು ಕಾಂಗ್ರೆಸ್ ಪಕ್ಷದ ವಿದೂಷಕ ಇದ್ದ ಹಾಗೆ ಹಾಗಿದೆ, ಎಂದು ಬಿಜೆಪಿ ಹೇಳಿದೆ.
ಆರ್ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚುನಾವಣಾ ಪ್ರಚಾರ ನಡೆಸಿದ್ದ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಸ್ತ್ರ ಪ್ರಯೋಗಿಸಿದ್ದರು. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಉಲ್ಲೇಖಿಸಿ "ಹುಲಿಯಾ ಕಾಡಿಗೆ, ಬಂಡೆ ಛಿದ್ರ" ಎಂಬ ಹೇಳಿಕೆ ನೀಡಿದ್ದು ಇಷ್ಟೆಲ್ಲ ವಾಕ್ ಸಮರಕ್ಕೆ ಮೂಲ.
ಮಾನ್ಯ ಸಿದ್ದರಾಮಯ್ಯ ಚುನಾವಣೆಯಲ್ಲಿ ಸ್ವಾರ್ಥಕ್ಕಾಗಿ ಪರಮೇಶ್ವರರನ್ನೇ ಸೋಲಿಸಿದ ಕುತಂತ್ರಿ ನೀವಲ್ಲವೇ? ಈ ಹಿಂದಿನ ಉಪಚುನಾವಣೆಯಲ್ಲಿ ನಳಿನ್ ಕುಮಾರ್ ಕಟೀಲ್ ಅವರ ನಾಯಕತ್ವದಲ್ಲಿ 15 ಕ್ಷೇತ್ರಗಳಲ್ಲಿ 12 ಸ್ಥಾನ ಗೆದ್ದು ಬಿಎಸ್ವೈ ಮತ್ತು ಬಿಜೆಪಿ ಗದ್ದುಗೆ ಬಲಪಡಿಸಿದ್ದೇವೆ. ಈ ಉಪಚುನಾವಣೆಯಲ್ಲೂ ಬಿಜೆಪಿ ಗೆಲ್ಲಲಿದೆ ಎಂದು ರಾಜ್ಯ ಬಿಜೆಪಿ ಖಾತೆ ಹೇಳಿದೆ.