Asianet Suvarna News Asianet Suvarna News

ಕಾಂಗ್ರೆಸಿನಲ್ಲಿ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ: ಶ್ರೀಧರ್ ಗೌಡ

ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮವಿಲ್ಲದೆ ಎಲ್ಲರನ್ನು ಸಮನಾಗಿ ಕಾಣುತ್ತಿದ್ದು, ನಾವೆಲ್ಲ ಒಂದೆ ಎಂಬ ಭಾವನೆಯನ್ನು ಹೊಂದಿದೆ. ರಾಹುಲ್ ಗಾಂಧಿ ಅವರು ಒಡೆದು ಆಳುವ ನೀತಿ ಅನುಸರಿಸಿದ ಬಿಜೆಪಿ ವಿರುದ್ಧ ದೇಶವನ್ನು ಒಗ್ಗೂಡಿಸಬೇಕೆಂದು ಐಕ್ಯತ ಯಾತ್ರೆ ಮಾಡಿದರು. ಹಾಗಾಗಿ ಹಿಂದಿನ ಚುನಾವಣೆ ಬಗ್ಗೆ ಚರ್ಚೆ ಬೇಡ. ಮುಂಬರುವ ಜಿ.ಪಂ., ತಾ.ಪಂ., ಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಪಕ್ಷ ಸಂಘಟನೆ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದ ಕಾಂಗ್ರೆಸ್ ಮುಖಂಡ ಎಚ್. ಪಿ. ಶ್ರೀಧರ್ ಗೌಡ 

Shridhar Gowda talks Over Congress grg
Author
First Published Oct 8, 2023, 9:45 PM IST

ಅರಕಲಗೂಡು(ಅ.08): ನಮಗೆ ಕಾಂಗ್ರೆಸ್ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ. ಪಕ್ಷವಿದ್ದರೆ ಮಾತ್ರ ನಾವು ಎಂದು ಕಾಂಗ್ರೆಸ್ ಮುಖಂಡ ಎಚ್. ಪಿ. ಶ್ರೀಧರ್ ಗೌಡ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಕಾಂಗ್ರೆಸ್ ಮುಖಂಡ ಎಚ್. ಪಿ. ಶ್ರೀಧರ್ ಗೌಡ ಅವರ ನೇತೃತ್ವದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಲ್ಪಸಂಖ್ಯಾತರ ಘಟಕದ ಸಮಾಲೋಚನ ಸಭೆ ಮತ್ತು ಅರಕಲಗೂಡು ಹಾಗೂ ಹಳ್ಳಿಮೈಸೂರು ಬ್ಲಾಕ್ ಅದ್ಯಕ್ಷರು ಹಾಗೂ ಪಧಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಣದ ರಾಜಕೀಯ ಬೇಡ. ನಮಗೆ ಕಾಂಗ್ರೆಸ್ ಪಕ್ಷ ಮುಖ್ಯವೇ ಹೊರತು ವ್ಯಕ್ತಿಯಲ್ಲ. ನಾವು ಪಕ್ಷಕ್ಕಾಗಿ ದುಡಿಯೋಣ. ವ್ಯಕ್ತಿಗಾಗಿ ದುಡಿಯುವುದು ಬೇಡ. ನನ್ನಂತಹವರು ಹಲವಾರು ಜನರು ಬರುತ್ತಾರೆ. ಆದರೆ ಪಕ್ಷ ಒಂದೆ. ಹಾಗಾಗಿ ಬಣ ರಾಜಕೀಯ ಬೇಡ ಎಂದು ಹೇಳಿದರು.

ಹಾಸನದ ಕಾಡಲ್ಲಿ ದಂಪತಿ ವನವಾಸ, ಅರಣ್ಯದೊಂದಿಗೇ ಅನುದಿನದ ಅನುರಾಗ!

ಕಾಂಗ್ರೆಸ್ ಪಕ್ಷ ಯಾವುದೇ ಜಾತಿ ಧರ್ಮವಿಲ್ಲದೆ ಎಲ್ಲರನ್ನು ಸಮನಾಗಿ ಕಾಣುತ್ತಿದ್ದು, ನಾವೆಲ್ಲ ಒಂದೆ ಎಂಬ ಭಾವನೆಯನ್ನು ಹೊಂದಿದೆ. ರಾಹುಲ್ ಗಾಂಧಿ ಅವರು ಒಡೆದು ಆಳುವ ನೀತಿ ಅನುಸರಿಸಿದ ಬಿಜೆಪಿ ವಿರುದ್ಧ ದೇಶವನ್ನು ಒಗ್ಗೂಡಿಸಬೇಕೆಂದು ಐಕ್ಯತ ಯಾತ್ರೆ ಮಾಡಿದರು. ಹಾಗಾಗಿ ಹಿಂದಿನ ಚುನಾವಣೆ ಬಗ್ಗೆ ಚರ್ಚೆ ಬೇಡ. ಮುಂಬರುವ ಜಿ.ಪಂ., ತಾ.ಪಂ., ಎಂಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಪಕ್ಷ ಸಂಘಟನೆ ಮಾಡಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸೋಣ ಎಂದರು.

ಮನೆಯಲ್ಲಿ ಕುಳಿತಿದ್ದಾರೆ: 

ರಾಜಕೀಯ ಲಾಭಕ್ಕೆ ಬಂದವರು ಕಾಂಗ್ರೆಸ್ ಪಕ್ಷದ ಅಸಹನೆಯಿಂದ ಮನೆ ಸೇರಿಕೊಂಡಿದ್ದಾರೆ. ಅವರಿಗೆ ರಾಜಕೀಯ ಮಾಡುವ ಆಸಕ್ತಿದ್ದರೆ ಚುನಾವಣೆ ಮುಗಿದ ಬಳಿಕ ಮನೆ ಸೇರುತ್ತಿರಲಿಲ್ಲ. ನಂಬಿದ್ದ ಕಾರ್ಯಕರ್ತರನ್ನು ಕೈಬಿಡುತ್ತಿರಲಿಲ್ಲ. ಹಾಗೆ ಆಗಬಾರದು. ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದು ಹೆಸರೇಳದೆ ಪಕ್ಷೇತರ ಅಭ್ಯರ್ಥಿಯನ್ನು ಟೀಕಿಸಿದರು.

ಜಾತ್ಯತೀತ ಪದ ತೆಗೆಯಲಾಗಿದೆ. ತಾಲೂಕಿನಲ್ಲಿ ಅಲ್ಪಸಂಖ್ಯಾತರು ಜೆಡಿಎಸ್ ಗೆ ಮತ ಹಾಕಿದ್ದು, ಇಂದು ಅವರು ಹಾಕಿದ್ದು ಬಿಜೆಪಿಗೆ ಅನಿಸುತ್ತಿದೆ. ಜೆಡಿಎಸ್‌ನಲ್ಲಿ ಸೆಕ್ಯೂಲರ್ (ಜಾತ್ಯತೀತ) ಪದವನ್ನೇ ತೆಗೆದುಹಾಕಲಾಗಿದೆ ಎಂದು ಟೀಕಿಸಿದರು.

ಮುಸ್ಲಿಂರಿಗೆ ಎಲ್ಲ ಸವಲತ್ತು‌ ಕೊಟ್ಟಿದ್ದು ದೇವೇಗೌಡ್ರು, 60 ವರ್ಷದ ಕಾಂಗ್ರೆಸ್ ಕೊಡುಗೆ ಏನು?: ರೇವಣ್ಣ

ಇದೇ ಸಂದರ್ಭದಲ್ಲಿ ಹಾಸನ ಜಿಲ್ಲಾ ಘಟಕದ ಉಪಾಧ್ಯಕ್ಷರಾಗಿ ಸಲೀಂ, ಅರಕಲಗೂಡು ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಪಟ್ಟಣ ಪಂಚಾಯತಿ ಸದಸ್ಯ ಸುಭಾನ್ ಪರೀಪ್, ಹಳ್ಳಿ ಮೈಸೂರು ಬ್ಲಾಕ್‌ ಅಧ್ಯಕ್ಷರಾಗಿ ತನ್ವೀರ್ ಖಾನ್, ಅರಕಲಗೂಡು ಬ್ಲಾಕ್ ಪ್ರಧಾನ ಕಾರ್ಯದರ್ಶಿ ರಫೀಕ್, ಅರಕಲಗೂಡು ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ ಮುಸಾವೀರ್ ಪಾಷ, ಹಾಗೂ ಐಎನ್ ಟಿ ಯು ಸಿ ಅರಕಲಗೂಡು ಘಟಕದ ಅರಕಲಗೂಡು ಬ್ಲಾಕ್ ಅಧ್ಯಕ್ಷರಾಗಿ ರಂಗನಾಥ್ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಹಾಸನ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಸಿ.ಆರ್. ಅಬ್ದುಲ್ ಹಾದಿ, ಅಲ್ಪಸಂಖ್ಯಾತರ ರಾಜ್ಯ ಘಟಕದ ಸದಸ್ಯ ಶಫಿ ಅಹಮದ್, ಹಾಸನ‌ ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಎಸ್, ಎಲ್. ಗಣಪತಿ, ಹಾಸನ ಜಿಪಂ ಮಾಜಿ ಸದಸ್ಯ ಶಂಕರ್, ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಹಾಗೂ ಕೊಣನೂರು ಗ್ರಾಪಂ ಜಾಕೀರ್, ಹಾಸನ ಜಿಲ್ಲಾ ಘಟಕದ ಉಪಾಧ್ಯಕ್ಷ ಸೂಪಿ ಇಬ್ರಾಹಿಂ, ಅರಕಲಗೂಡು ಬ್ಲಾಕ್ ಪರಿಶಿಷ್ಟ ಜಾತಿ ಘಟಕದ ಅದ್ಯಕ್ಷ ನಾಗರಾಜು, ಕಾಂಗ್ರೆಸ್ ನ‌ ಹಿರಿಯ ಮುಖಂಡ ಪತ್ತೆ ಅಹಮದ್, ಹಾಸನ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪುಟ್ಟಯ್ಯ, ಕಾರ್ಯದರ್ಶಿ ಪುಷ್ಬಕುಮಾರ್, ಹಾಸನ ಜಿಲ್ಲಾ ಐಎನ್ ಟಿ ಯು ಸಿಯ ಉಪಾಧ್ಯಕ್ಷ ಮಲ್ಲೇಶ್, ಕಟ್ಟೇಪುರ ಗ್ರಾಪಂ ಮಾಜಿ ಅಧ್ಯಕ್ಷ ಚಾಂದ್ ಪಾಷ, ಕೊಣನೂರು ಗ್ರಾಪಂ ಸದಸ್ಯ ಇರ್ಷದ್, ಮೋಕಲಿ ಗ್ರಾಪಂ ಮಾಜಿ ಅದ್ಯಕ್ಷ ಕಾಂತರಾಜು, ಹೊಳಲಗೂಡು ಕಾಂಗ್ರೆಸ್ ಮುಖಂಡ ಮುಕ್ತಾರ್ ಖಾನ್, ಖಲೀಲ್ ಅಹಮದ್ ಮತ್ತಿತರಿದ್ದರು.

Follow Us:
Download App:
  • android
  • ios