ಕೊಲ್ಕೊತ್ತಾ(ಜ. 01) ಸದ್ದಿಲ್ಲದೇ ಬಿಜೆಪಿ ಟಿಎಂಸಿಗೆ ದೊಡ್ಡ ಶಾಕ್ ಕೊಟ್ಟಿದೆ. ತೃಣಮೂಲ ಕಾಂಗ್ರೆಸ್ ಬಿಟ್ಟು ಹೊರಕ್ಕೆ ಬರುತ್ತಿರುವವರ ಪಟ್ಟಿ ದೊಡ್ಡದಾಗುತ್ತಲೇ ಇದೆ.

ಟಿಎಂಸಿಯ ಪ್ರಭಾವಿ ನಾಯಕ,  ಮಮತಾ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದ ಸುವೇಂದು ಅಧಿಕಾರಿ ಟಿಎಂಸಿಗೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಡೆಯಾಗಿದ್ದರು. ಇದೀಗ ಅವರ ಸಹೋದರ ಕೌನ್ಸಿಲರ್‌ ಹಾಗೂ ಕಾಂತಿ ಪುರಸಭೆ ಅಧ್ಯಕ್ಷರಾಗಿರುವ ಸೌಮೇಂದು ಅಧಿಕಾರಿ ಕೂಡ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.

ಸೋಲುವ ಭೀತಿಯಿಂದ ಕಣ್ಣೀರು ಹಾಕಿದ್ರಾ ಮಮತಾ?

ಕಳೆದ ವಾರ ಹುದ್ದೆಯಿಂದ  ಸೌಮೇಂದು ಅಧಿಕಾರಿ ಅವರನ್ನು ವಜಾಗೊಳಿಸಲಾಗಿತ್ತು. ವರ್ಷದ ಮೊದಲ ದಿನವೇ ಅವರು ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಕಾಂತಿ ನಗರದಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ ಸೇರಲಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂಗಾಳದಲ್ಲಿ ಪ್ರವಾಸ ಮಾಡಿದ್ದರು. ಈ ವರ್ಷ ವಿಧಾನಸಭೆ ಚುನಾವಣೆ ಎದುರಾಗಿದ್ದು ಬಿಜೆಪಿ ತಳಮಟ್ಟದಿಂದ ಪಕ್ಷ ಬಲಪಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. 

ಏತನ್ಮಧ್ಯೆ, ಅವರ ತಂದೆ ಸಿಸಿರ್ ಅಧಿಕಾರಿ ಮತ್ತು ಇನ್ನೊಬ್ಬ ಸಹೋದರ ದಿಬ್ಯೆಂಡು ಟಿಎಂಸಿ ಸಂಸದರಾಗಿದ್ದು, ಟಿಎಂಸಿಯನ್ನು ತೊರೆಯುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ.