ರೇಷನ್ ಕಾರ್ಡ್ ರದ್ದು ಮಾಡಿ ಗ್ಯಾರಂಟಿ ಕೊಡೋ ಕೆಲಸ ಮಾಡ್ತಿದ್ದಾರೆ: ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಬಿ.ವೈ.ರಾಘವೇಂದ್ರ
ನಮಗೆ ಆಪರೇಶನ್ ಮಾಡಿ ಅಧಿಕಾರಕ್ಕೆ ಬರುವ ಅವಶ್ಯಕತೆ ಇಲ್ಲ. ಅವರ ಮೇಲೆ ಭ್ರಷ್ಟಾಚಾರ, ಕಪ್ಪು ಚುಕ್ಕೆಗಳು ಇದೆ. ಅವರಲ್ಲಿ ಆಂತರಿಕ ರಾಜಕೀಯ ಕಚ್ಚಾಟ ನಡೀತಾ ಇದೆ. ಶಾಸಕರು ತಮ್ಮ ಪರ ಇದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ: ಸಂಸದ ಬಿ.ವೈ. ರಾಘವೇಂದ್ರ
ದಾವಣಗೆರೆ(ನ.19): ಕಾಂಗ್ರೆಸ್ ಸರ್ಕಾರಕ್ಕೆ ಜನರು 2\3 ಮೆಜಾರಿಟಿ ಕೊಟ್ಟಿದ್ದಾರೆ. ಇವರು 137 ಜನರಿದ್ದು ಒಳ್ಳೆಯ ಅಭಿವೃದ್ಧಿ ಕೆಲಸ ಮಾಡೋಕೆ ಸಾಕಷ್ಟು ಅವಕಾಶಗಳಿವೆ. ಆದರೆ ಸರ್ಕಾರದಲ್ಲಿ ದಸರಾ, ಗಣೇಶ ದೀಪಾವಳಿ ಹಬ್ಬದಂತೆ ಒಂದೊಂದೆ ಭ್ರಷ್ಟಾಚಾರ ಹಗರಣಗಳು ಹೊರ ಬರುತ್ತಿವೆ. ಈ ಗಡಿಬಿಡಿಯಲ್ಲಿ ಬಿಪಿಎಲ್ ಕಾರ್ಡ್ ರದ್ದು ಮಾಡ್ತಾ ಇದ್ದಾರೆ. ಇವರು ಕೊಟ್ಟ ಗ್ಯಾರಂಟಿಗಳನ್ನ ಪೂರೈಸೋಕೆ ಆಗುತ್ತಿಲ್ಲ. ಸರ್ಕಾರಿ ನೌಕರರಿಗೆ ಸಂಬಳ ಕೊಡೋಕೆ ಆಗುತ್ತಿಲ್ಲ. ಅದಕ್ಕೆ ಕಾರ್ಡ್ ಕ್ಯಾನ್ಸಲ್ ಮಾಡಿ ಗ್ಯಾರಂಟಿ ಕೊಡೋ ಕೆಲಸ ಮಾಡ್ತಾ ಇದ್ದಾರೆ. ಅಂತಹ ದುಸ್ಥಿಗೆ ಸರ್ಕಾರ ಬಂದಿದೆ. ಇದರಿಂದ ಬಡವರಿಗೆ ಅನ್ಯಾಯ ಆಗ್ತಾ ಇದೆ ಇದರ ವಿರುದ್ಧ ನಾವು ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಸಂಸದ ಬಿ.ವೈ. ರಾಘವೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು(ಮಂಗಳವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ ಅವರು, ನಮಗೆ ಆಪರೇಶನ್ ಮಾಡಿ ಅಧಿಕಾರಕ್ಕೆ ಬರುವ ಅವಶ್ಯಕತೆ ಇಲ್ಲ. ಅವರ ಮೇಲೆ ಭ್ರಷ್ಟಾಚಾರ, ಕಪ್ಪು ಚುಕ್ಕೆಗಳು ಇದೆ. ಅವರಲ್ಲಿ ಆಂತರಿಕ ರಾಜಕೀಯ ಕಚ್ಚಾಟ ನಡೀತಾ ಇದೆ. ಶಾಸಕರು ತಮ್ಮ ಪರ ಇದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಬಿ.ವೈ.ರಾಘವೇಂದ್ರ ಜನರ ಭಾವನೆಗೆ ಸ್ಪಂದಿಸುವ ಸಂಸದ: ಸಚಿವ ವಿ.ಸೋಮಣ್ಣ ಶ್ಲಾಘನೆ
ಸಿದ್ದರಾಮಯ್ಯ ಮುಟ್ಟಿದ್ರೆ ಸರ್ಕಾರ ಉಳಿಯಲ್ಲ ಅನ್ನೋ ಸಂದೇಶ ಡಿ.ಕೆ ಶಿವಕುಮಾರ್ ಗೆ ಕೊಡೊಕೆ ಈ ರೀತಿ ಸುಳ್ಳು ಆರೋಪ ಮಾಡ್ತಾ ಇದ್ದಾರೆ. ರಾಜ್ಯದಲ್ಲಿ ಬಡವರಿಗೆ ಸೈಟ್ ಸಿಗದೆ ಇರೋ ಟೈಮ್ ನಲ್ಲಿ ಅವರಿಗೆ ಸೈಟ್ ಸಿಗುತ್ತೆ. ಮುಡಾದಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ. ವಕ್ಫ್ ಆಸ್ತಿಯನ್ನ ಯಾರು ನುಂಗಿದ್ದಾರೆ ಅನ್ನೋದು ಅಧಿವೇಶದಲ್ಲಿ ಹೊರ ಬರುತ್ತೆ. ನಮ್ಮ ಸರ್ಕಾರದಲ್ಲಿ ಅನ್ವರ್ ಮಾನ್ಪಡಿ ತನಿಖೆ ಮಾಡಿ ವಕ್ಫ್ ಹಗರಣದ ಮೇಲೆ ಬೆಳಕು ಚೆಲ್ಲಿದ್ದಾರೆ . ವಕ್ಫ್ ವಿಚಾರ ಎತ್ಕೊಂಡಿದ್ದು ಪ್ರಧಾನಿ ನರೇಂದ್ರ ಮೋದಿ. ವಕ್ಫ್ ಟ್ರುಬ್ಯುನಲ್ ಗೆ ಸಂವಿಧಾನದಲ್ಲಿ ಇಲ್ಲದ ಸುಪ್ರೀಂ ಅಧಿಕಾರ ನೀಡಲಾಗಿದೆ. ಸಂವಿಧಾನದಲ್ಲಿ ವಕ್ಫ್ ಪ್ರಶ್ನೆ ಮಾಡೋಕೆ ಬರೆದ ಇರೋ ತರಾ ವಕ್ಫ್‌ನಲ್ಲಿ ಟ್ರಿಬ್ಯೂನಲ್ ಮಾಡಲಾಗಿದೆ. ಮನಮೋಹನಸಿಂಗ್ ಸರ್ಕಾರದಲ್ಲಿ ವಕ್ಫ್ ಟ್ರಿಬ್ಯೂನಲ್ ಮಾಡಲಾಗಿದೆ. ವಕ್ಫ್ ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡೋಕೆ ಬರಲ್ಲ. ನಾವು ಇದರ ವಿರುದ್ಧ ಅಧಿವೇಶನದಲ್ಲಿ ಹೋರಾಟ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದಕ್ಕೆ ಸದನ ಸಮಿತಿ ರಚನೆಯಾಗಿದ್ದು ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಸುಧೀರ್ಘ ಬದಲಾವಣೆ ಆಗಲಿದೆ. ವಕ್ಫ್ ಮುಡಾ ಹಗರಣಗಳನ್ನು ಡಿಪೆನ್ಸ್ ಮಾಡಲು ಕೋವಿಡ್ ಹಗರಣವನ್ನು ಎತ್ತಿಕೊಂಡಿದೆ ರಾಜ್ಯ ಸರ್ಕಾರ. ಕೋವಿಡ್ ಸಂಕಷ್ಟ ಕಾಲದಲ್ಲಿ ಜನರ ಜೀವ ಉಳಿಸುವ ಬಿಜೆಪಿ ಸರ್ಕಾರ ಸಾಕಷ್ಟು ಕೆಲಸ ಮಾಡ್ತು. ಎಲ್ಲಂದರಲ್ಲಿ ಆಕ್ಸಿಜನ್ ತಂದು ಜನರ ಜೀವ ಉಳಿಸುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದೆ. ಯಾರು ಪಿಪಿಇ ಕಿಟ್ ಇಲ್ಲದೆ ಕೆಲಸ ಮಾಡದೆ ಇರೋ ಸಂದರ್ಭದಲ್ಲಿ ಪಿಪಿಇ ಕಿಟ್ ಕೊಟ್ಟು ಕೆಲಸ ಮಾಡಿಸಲಾಗಿದೆ. ಇಂತಹ ವಿಚಾರದಲ್ಲಿ ಇಲ್ಲಸಲ್ಲದ ಆರೋಪವನ್ನ ಮಾಡ್ತಾ ಇದ್ದಾರೆ. ಜನರ ಗಮನ ಬೇರೆ ಕಡೆ ಸೆಳೆಯಲು ಈ ರೀತಿ ಮಾಡಲಾಗ್ತಾ ಇದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಯಡಿಯೂರಪ್ಪ ಬೆದರಿಸಲು ಅಲ್ಲ, ವಿಜಯೇಂದ್ರ ಉತ್ತಮ ನಾಯಕರಾಗಿ ಬೆಳಿತಾ ಇದ್ದಾರೆ. ಅದಕ್ಕೂ ಮೂಗುದಾರ ಹಾಕಬೇಕು ಅಂತ ಕಾನೂನು ಚೌಕಟ್ಟಿನಲ್ಲಿರೋ ಕಾನೂನು ಸಂಸ್ಥೆಗಳನ್ನ ದುರ್ಬಳಕೆ ಮಾಡಿಕೊಳ್ತಾ ಇದಾರೆ. ಧಮ್ಕಿ ಹಾಕಲು ಕಾನೂನು ದುರಪಯೋಗಪಡಿಸಿಕೊಂಡು ಈ ರೀತಿ ಮಾಡಲಾಗ್ತಾ ಇದೆ. ವಕ್ಫ್ ಹೋರಾಟ ವಿಚಾರದಲ್ಲಿ ಬಿಜೆಪಿಯಲ್ಲಿ ಎರಡು ಟೀಮ್ ಇಲ್ಲ. ಎರಡಲ್ಲ ಹತ್ತು ಟೀಮ್ ಆಗಿ ಹೋರಾಟ ಮಾಡಿದ್ರು ಪರವಾಗಿಲ್ಲ ಎಂದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.