ಶಿವಮೊಗ್ಗ ಮಹಾನಗರ ಪಾಲಿಕೆಗೆ ಶಿವಕುಮಾರ್ ಮೇಯರ್, ಲಕ್ಷ್ಮೀ ಉಪ ಮೇಯರ್
- ಪಾಲಿಕೆಗೆ ಶಿವಕುಮಾರ್ ಮೇಯರ್,ಲಕ್ಷ್ಮೇ ಉಪ ಮೇಯರ್
- ನಿರೀಕ್ಷೆಯಂತೆ ನಾಲ್ಕನೇ ಅವಧಿಯ ಆಡಳಿತ ಬಿಜೆಪಿ ಪಾಲಿಗೆ
- ಬಿಜೆಪಿಯ 23 ಸದಸ್ಯರ ಜೊತೆಗೆ ಶಾಸಕರು, ಪರಿಷತ್ ಸದಸ್ಯರಿಂದ ಮತ ಚಲಾವಣೆ
ಶಿವಮೊಗ್ಗ(ಅ.29) : ಮಹಾನಗರ ಪಾಲಿಕೆಯ ನಾಲ್ಕನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಬಿಜೆಪಿಯ ಎಸ್.ಶಿವಕುಮಾರ್ ಮೇಯರ್ ಆಗಿ, ಲಕ್ಷ್ಮೇ ಶಂಕರ್ ನಾಯ್‌್ಕ ಉಪ ಮೇಯರ್ ಆಗಿಯೂ ಆಯ್ಕೆಯಾಗಿದ್ದಾರೆ. ಬೆಳಗ್ಗೆ ಪಾಲಿಕೆ ಸಭಾಂಗಣದಲ್ಲಿ ಆರಂಭವಾದ ಚುನಾವಣಾ ಪ್ರಕ್ರಿಯೆಯಲ್ಲಿ ಎಸ್‌ಸಿ ವರ್ಗಕ್ಕೆ ಮೀಸಲಾದ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಎಸ್.ಶಿವಕುಮಾರ್ ಮತ್ತು ಕಾಂಗ್ರೆಸ್‌ನಿಂದ ಆರ್.ಸಿ. ನಾಯ್‌್ಕ ನಾಮಪತ್ರ ಸಲ್ಲಿಸಿದರೆ, ಬಿಸಿಎಂ ಮಹಿಳೆಗೆ ಮೀಸಲಾದ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯಿಂದ ಲಕ್ಷ್ಮೇ ಶಂಕರ್ ನಾಯ್‌್ಕ ಮತ್ತು ಕಾಂಗ್ರೆಸ್‌ನಿಂದ ರೇಖಾ ರಂಗನಾಥ್ ನಾಮಪತ್ರ ಸಲ್ಲಿಸಿದ್ದರು.
ಛೇ... ಶಿವಮೊಗ್ಗದಲ್ಲೊಂದು ಅಮಾನವೀಯ ಘಟನೆ..!
ಒಟ್ಟು 35 ಸದಸ್ಯರ ಪೈಕಿ ಬಿಜೆಪಿ 23 ಸ್ಥಾನ ಹೊಂದಿದ್ದರೆ, ಕಾಂಗ್ರೆಸ್ 8, ಜೆಡಿಎಸ್ 2, ಎಸ್‌ಡಿಪಿಐ 1 ಮತ್ತು ಪಕ್ಷೇತರರಾಗಿ ಒಬ್ಬ ಸದಸ್ಯರಿದ್ದಾರೆ. ಪಕ್ಷೇತರ ಅಭ್ಯರ್ಥಿ ಡಿ. ನಾಗರಾಜ್ ಎಸ್‌ಸಿ ವರ್ಗಕ್ಕೆ ಮೇಯರ್ ಸ್ಥಾನ ಮೀಸಲಿಡಲು ಕೋರಿ ಹೈಕೋರ್ಚ್ ಮೆಟ್ಟಿಲೇರಿದ್ದರು. ಅ.31ರಂದು ಇದರ ವಿಚಾರಣೆ ನಡೆಯಲಿದ್ದು, ಈ ನಡುವೆಯೇ ಚುನಾವಣೆ ಘೋಷಣೆಯಾಗಿ ಚುನಾವಣೆಯೂ ನಡೆದಿದೆ.
ಒಬ್ಬ ಸದಸ್ಯ ಚುನಾವಣೆಯಲ್ಲಿ ತಟಸ್ಥ:
ಚುನಾವಣೆಯಲ್ಲಿ ಬಿಜೆಪಿಯ ಶಿವಕುಮಾರ್ ಪರವಾಗಿ 23 ಮತಗಳ ಜೊತೆಗೆ ಶಾಸಕ ಕೆ. ಎಸ್.ಈಶ್ವರಪ್ಪ, ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್‌ನಾಯ್‌್ಕ ಮತ್ತು ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಆರ್.ಸಿ.ನಾಯ್‌್ಕ ಪರವಾಗಿ ಕಾಂಗ್ರೆಸ್, ಜೆಡಿಎಸ್ ಮತ್ತು ಎಸ್‌ಡಿಪಿಐ ಸೇರಿ ಒಟ್ಟು 11 ಮತಗಳು ಚಲಾವಣೆಯಾದವು. ಕೋರ್ಚ್ ಮೊರೆ ಹೋಗಿದ್ದ ಸದಸ್ಯ ಚುನಾವಣೆಯಲ್ಲಿ ತಟಸ್ಥರಾಗಿ ಉಳಿದರು.
ಉಪ ಮೇಯರ್ ಚುನಾವಣೆಯಲ್ಲಿ ಕೂಡ ಲಕ್ಷ್ಮೇ ಶಂಕರ್ ನಾಯ್‌್ಕ ಪರವಾಗಿ 26 ಮತಗಳು ಮತ್ತು ರೇಖಾ ರಂಗನಾಥ್ ಪರವಾಗಿ 11 ಮತಗಳು ಬಂದವು. ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಬಿಜೆಪಿಯ ಶಿವಕುಮಾರ್‌ರನ್ನು ಮೇಯರ್ ಹಾಗೂ ಲಕ್ಷ್ಮೇ ಶಂಕರ್‌ನಾಯ್‌್ಕರನ್ನು ಉಪ ಮೇಯರ್ ಆಗಿಯೂ ಘೋಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಮಹಾನಗರಪಾಲಿಕೆ ಆಯುಕ್ತ ಕೆ. ಮಾಯಣ್ಣಗೌಡ, ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಶ್ರೀಪಾದ ಉಪಸ್ಥಿತರಿದ್ದರು. ನೂತನ ಮೇಯರ್ ಮತ್ತು ಉಪಮೇಯರ್‌ರನ್ನು ಮಾಜಿ ಸಚಿವ ಕೆ. ಎಸ್.ಈಶ್ವರಪ್ಪ ಅಭಿನಂದಿಸಿದರು.
ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಕಡತ ವಿಲೇವಾರಿಗೆ ಡಿಜಿಫೈಲ್ ತಂತ್ರಾಂಶ ಅಳವಡಿಕೆ
ಶಿವಮೊಗ್ಗ ನಗರದ ಸ್ವಚ್ಛತೆ, ಬೀದಿ ದೀಪ, ಶುದ್ಧ ಕುಡಿಯುವ ನೀರು ಸೇರಿ ಪಾಲಿಕೆ ವ್ಯಾಪ್ತಿಯ ಸಮಸ್ಯೆಗಳಿಗೆ ಸಕಾಲದಲ್ಲಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಂಡು ನಗರದ ಸರ್ವಾಂಗೀಣ ವಿಕಾಸಕ್ಕೆ ಶ್ರಮಿಸುವೆ.
ಎಸ್.ಶಿವಕುಮಾರ್, ನೂತನ ಮೇಯರ್