ಮುಂಬೈ(ಜ. 07) ಶಿವಸೇನೆ ರಾಹುಲ್ ಗಾಂಧಿ ಅವರನ್ನು ಹಾಡಿ ಹೊಗಳಿದೆ. ದೆಹಲಿ ಆಡಳಿತಗಾರರು ರಾಹುಲ್ ಗೆ ಮಾತ್ರ   ಹೆದರುತ್ತಾರೆ ಎಂದಿದೆ.

ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಶಿವಸೇನೆ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರೆ ಒಳ್ಳೆಯದು ಎಂದಿದೆ.

ದೆಹಲಿ ದೊರೆಗಳು ರಾಹುಲ್ ಗಾಂಧಿಗೆ ಹೆದರುತ್ತಾರೆ. ಒಬ್ಬ ಯೋಧ ಪ್ರಾಮಾಣಿಕವಾಗಿದ್ದರೆ ಎಂಥ ಎದುರಾಳಿಯಾದರೂ ಹೆದರಲೇಬೇಕು ಎಂದು ರಾಹುಲ್ ಕೊಂಡಾಡುತ್ತ ಪ್ರಧಾನಿ ಮೋದಿ ಮತ್ತು ತಂಡಕ್ಕೆ ಟಾಂಗ್ ನೀಡಿದೆ.

ಇದ್ದಕ್ಕಿದ್ದಂತೆ ರಾಹುಲ್  ಇಟಲಿಗೆ ಹಾರಿದ್ದು ಯಾಕೆ?

ರಾಹುಲ್ ಅವರನ್ನು ದುರ್ಬಲ ನಾಯಕ ಎಂದು ಪದೇ ಪದೇ  ಬಿಂಬಿಸುವ ಕೆಲಸ ಮಾಡಲಾಗಿದೆ. ಆದರೆ ಅವರು ಅವಕಾಶ ಬಳಸಿಕೊಂಡು ಮೇಲೆ ಬರುತ್ತಿದ್ದಾರೆ ಎಂದಿದೆ. ಮೋದಿಯನ್ನು ಎದುರಿಸಲು ಯುಪಿಎ ತನ್ನ ವಿಸ್ತಾರ ಹೆಚ್ಚು ಮಾಡಿಕೊಳ್ಳಬೇಕು ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಹೇಳಿದ್ದರು. 

ದೆಹಲಿಯಲ್ಲಿ ಮನಡೆಯುತ್ತಿರುವ ರೈತರ ಪ್ರತಿಭಟನೆ ಸಂಬಂಧ ರಾಷ್ಟ್ರಪತಗಳನ್ನು ಭೇಟಿ ಮಾಡಿದ್ದ ರಾಹುಲ್ ನಂತತ ಇಟಲಿ ಪ್ರವಾಸ ಕೈಗೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪರ  ಮತ್ತು ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಿದ್ದವು .