ಬೆಂಗಳೂರು(ಮಾ. 18)  ಶುಕ್ರವಾರ ವಿಧಾನಸಭಾ ಕಲಾಪದಲ್ಲಿ ಪ್ರಸಿಡಿ ಪ್ರಕರಣ ತಿಧ್ವನಿಸಲಿದೆ. ಕಾಂಗ್ರೆಸ್ ನಾಯಕರು ನಿಲುವಳಿ ಸೂಚನೆ ನೀಡಿದ್ದಾರೆ. ನಾಳೆಯ(ಶುಕ್ರವಾರ)  ಚರ್ಚೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಸಭೆ ನಡೆದಿದೆ.

ಡಿ ಕೆ ಶಿವಕುಮಾರ್, ರಮೇಶ್ ಕುಮಾರ್, ವಿ ಎಸ್ ಉಗ್ರಪ್ಪ ಸೇರಿದಂತೆ ಪ್ರಮುಖರು ಸಭೆಯಲ್ಲಿ ಭಾಗಿಯಾಗಿದ್ದರು ಕಾನೂನು ಅಂಶಗಳು, ಬಿಜೆಪಿಯಿಂದ ವ್ಯಕ್ತವಾಗಬಹುದಾದ ಆಕ್ಷೇಪಗಳ ಬಗ್ಗೆ ಸಮಾಲೋಚನೆ ನಡೆದಿದೆ.

'ನಾನು ಮೊದಲೆ ಈ ಹೆಸರು ಹೇಳಿದ್ದೆ' ಕುಮಾರಸ್ವಾಮಿ

ಕಲಾಪದಲ್ಲಿ ಎಲ್ಲಾ ಶಾಸಕರು ಇರುವಂತೆ ಶಾಸಕರಿಗೆ ಸೂಚನೆ ಕೊಡಲು ಸಭೆಯಲ್ಲಿ ತಿರ್ಮಾನ ತೆಗೆದುಕೊಳ್ಳಲಾಗಿದೆ. ಚರ್ಚೆಯಲ್ಲಿ ಪ್ರಮುಖ ನಾಯಕರು ಮಾತ್ರ ಸಿಡಿ ಕುರಿತು  ಪ್ರಸ್ತಾಪ ಮಾಡಲು ತೀರ್ಮಾನ ಮಾಡಲಾಗಿದೆ.

ವೈಯಕ್ತಿಕ ಟೀಕೆ ಮಾಡಿ ಕಲಾಪ ಗೊಂದಲ ಆಗದಂತೆ ನೋಡಿಕೊಳ್ಳಬೇಕು. ಪ್ರಶ್ನೋತ್ತರದ ಮುನ್ನವೇ ಅವಕಾಶ ಕೇಳಲು ಸಭೆಯಲ್ಲಿ ತಿರ್ಮನ ಮಾಡಲಾಗಿದ್ದ ಅವಕಾಶ ಸಿಗದಿದ್ದರೆ ಪ್ರಶ್ನೋತ್ತರ ಕಲಾಪದ ಬಳಿಕ ಚರ್ಚೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ..