ಮೈಸೂರು(ಮಾ. 25) ಕೋಟ್ಯಂತರ ಲೂಟಿ ಆಗಿರುವ ಇಡಿ ಬಗ್ಗೆ ಚರ್ಚೆ ಮಾಡೋಲ್ಲ ಸಿಡಿ ಚರ್ಚೆ ಮಾಡ್ತಿರಾ? ಸಿಡಿಯೇ ಹೆಚ್ಚಾಯ್ತಾ ನಿಮಗೆ? ಸದನದಲ್ಲಿ ಸರ್ಕಾರಕ್ಕೆ ಚಾಟಿ ಬಿಸಲಿಲ್ಲ ಎಂದು ವಿರೋಧ ಪಕ್ಷಗಳಿಗೆ ಬಿಜೆಪಿ ಮುಖಂಡ, ವಿಧಾನಪರಿಚತ್ ಸದಸ್ಯ ಎಚ್.ವಿಶ್ವನಾಥ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಿನ್ನೆ ಮುಗಿದ ಸದನ ಮುಗಿತು ಅಷ್ಟೆ. ಇದರಲ್ಲಿ ರಾಜ್ಯದ ಜನರಿಗೆ ಯಾವುದೇ ಪ್ರಯೋಜನ ಆಗಲಿಲ್ಲ. ಬಜೆಟ್ ಅಧಿವೇಶ ಅಂದ್ರೆ ಆದಾಯ,ತೆರಿಗೆ,ಹಣಕಾಸಿನ ಬಗ್ಗೆ ಚರ್ಚೆ ಆಗಬೇಕಿತ್ತು. ಆದ್ರೆ ಅದ್ಯಾವುದು ಚರ್ಚೆ ಆಗಲೇ ಇಲ್ಲ. ಈ ಬಜೆಟ್ ಅಧಿವೇಶನ ಜನತಂತ್ರ ವ್ಯವಸ್ಥೆಯ ಅಣಕ. ಇದು ಸರ್ಕಾರದಷ್ಟೆ ಅಲ್ಲ ವಿರೋಧ ಪಕ್ಷದ ತಪ್ಪು ಇದೆ. ಎಲ್ಲಿ ವಿರೋಧ ಪಕ್ಷ ಬಲಿಷ್ಠವಾಗಿರುತ್ತೆ ಅಲ್ಲಿ ಸರ್ಕಾರ ಚೆನ್ನಾಗಿದೆ. ಆದ್ರೆ ರಾಜ್ಯದಲ್ಲಿ ವಿರೋಧ ಪಕ್ಷಗಳು ಹೊಣಗೇಡಿತನ ಪ್ರದರ್ಶನ ಮಾಡಿವೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜಕಾರಣವೇ ಹೆಚ್ಚಾಯ್ತು. ರಾಜ್ಯ ನಾಲ್ಕು ಲಕ್ಷ ಕೋಟಿ ಸಾಲಕ್ಕೆ ಬಂದು ನಿಂತಿದೆ. 2.5 ಲಕ್ಷ ಕೋಟಿ ಬಜೆಟ್ ನ್ನು ಚರ್ಚೆಯೇ ಇಲ್ಲದೆ ಮುಗಿಸಿದ್ದಾರೆ. ಇಬ್ಬರು ಮಾಜಿ ಸಿಎಂಗಳ ಜವಬ್ದಾರಿ ಏನು? ನಿಮಗೆ ಸಿಡಿಯೇ ದೊಡ್ಡದಾಯಿತಾ? ಮಂತ್ರಿಯೇ ರಾಜೀನಾಮೆ ನೀಡಿದ್ದಾರೆ ಇನ್ನೆನಿದೆ.? ಎಂದು ಪ್ರಶ್ನೆ ಮಾಡಿದರು.

ಸಿಡಿ ಲೇಡಿ ಪ್ರತ್ಯಕ್ಷ;  ತನಿಖೆಗೆ ಹೊಸ ದಿಕ್ಕು ಕೊಟ್ಟ ಸಾರಾಂಶ, ಯಾರ ವಶದಲ್ಲಿದ್ದಾಳೆ?

6 ಮಂತ್ರಿಗಳ ಮೇಲೆ ಚರ್ಚೆ,ಸುಧಾಕರ್ ಮೇಲೆ ಚರ್ಚೆ. ಇದೆಲ್ಲ  ಬೇಕಾಗಿತ್ತಾ ನಿಮಗೆ? ಬಜೆಟ್ ಅಧಿವೇಶದಲ್ಲಿ ಇದೇನಾ ಚರ್ಚೆನಾ ಮಾಡೋದು? ಈ ಬಗ್ಗೆ ನಮಗೆ ಜವಬ್ದಾರಿ ಇಲ್ಲವೇನೋ ಅನ್ನೋ ಥರ ನಡೆದುಕೊಂಡಿದ್ದೀರಿ.. 30 ದಿನ ನಡೆಯಬೇಕಿದ್ದ ಸದನ 21 ದಿನಕ್ಕೆ ಮುಗಿಗಿದೆ, ಅದಾದರೂ ಸರಿಯಾಗಿ ನಡೆದೇಯಾ? ಒಬ್ಬ ಮಾಜಿ ಸಿಎಂ ಸದನಕ್ಕೆ ಬಂದು ಸಮಯ ವ್ಯರ್ಥ ಮಾಡಿದ್ರು. ಇನ್ನೊಬ್ಬ ಮಾಜಿ ಸಿಎಂ ಸದನಕ್ಕೆ ಬಂದ್ರೆ ಉಪಯೋಗ ಇಲ್ಲ ಎಂದು ಹೇಳಿದ್ರು. ಇಂತವರೇಲ್ಲ ವಿರೋಧ ಪಕ್ಷದಲ್ಲಿರೆ ಇನ್ನೆನಾಗುತ್ತೆ?  ನೀವು ರಾಜಕಾರಣ ಮಾಡಿ ಭಾರಿ ವೋಟ್ ಬ್ಯಾಂಕ್ ಹೆಚ್ಚಿಸಿಕೊಳ್ತಿರಾ? ಜನ ಎಲ್ಲವನ್ನು ನೋಡ್ತಿದ್ದಾರೆ ಎಂದು ವಿಶ್ವನಾಥ್ ಹೇಳಿದರು.

ವಿಧಾನಪರಿಷತ್ ನಲ್ಲಿ ಹಳ್ಳಿಹಕ್ಕಿಗೆ ಮರುಜೀವ ಕೊಟ್ಟ ಕತೆ

ಆ ಸಿಡಿ ಹಿಡಿಯನ್ನ ವಿಷ್ಣುಚಕ್ರ ಅಂದುಕೊಂಡಿದ್ದಾರಾ? ಸದನದಲ್ಲಿ ಸಿಡಿ ಹಿಡಿದುಕೊಂಡು ಪ್ರದರ್ಶನ ಮಾಡಿದ್ದಾರೆ. ಇದರಿಂದ ಏನು ಸಿಕ್ತು‌? ಮೈಸೂರಿನ ಅಪಘಾತದ ಬಗ್ಗೆ ಸದನದಲ್ಲಿ ಚರ್ಚೆ ಆಗಬೇಕಿತ್ತು. ಆದ್ರೆ ಅಂತಹ ವಿಚಾರ ಚರ್ಚೆ ಬಿಟ್ಟು ಸಿಡಿಯನ್ನ ವಿಷ್ಣುಚಕ್ರದಂತೆ ತಿರುಗುಸಿದ್ದಾರೆ ಎಂದು ವ್ಯಂಗ್ಯವಾಡಿದರು.

ಸುಧಾಕರ್ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡೋಲ್ಲ. ಅವರು ನಿನ್ನೆಯೇ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ ಅದು ಮುಗಿದು ಹೋಗಿದೆ ಅದರ ಬಗ್ಗೆ ಚರ್ಚೆ ಮಾಡೋಲ್ಲ.
ಆದ್ರೆ ವಿರೋಧ ಪಕ್ಷಗಳು ಇದನ್ನ ಉಪಚುನಾವಣೆಗೆ ಬಳಸಿಕೊಳ್ತಿವೆ. ನಾವಿದ್ದಾಗ ಭಾರಿ ಚಿನ್ನ ವಜ್ರ ಮಾರಾಟ ಮಾಡುವ ಸ್ಥಿತಿ ಇತ್ತು. ಈಗ ಎಲ್ಲವು ಹೋಗಿದೆ ನಾವು ವಾಪಸ್ ಬರ್ತಿವಿ ಅಂತ ಮಾತನಾಡ್ತಿದ್ದಾರೆ. ಇದರಿಂದ ಪ್ರಯೋಜನ ಇಲ್ಲ. ಆರ್ಥಿಕ ನೀತಿ ಬಗ್ಗೆ ಚರ್ಚೆ ಮಾಡದೆ ಸಿಡಿ ಬಗ್ಗೆ ಚರ್ಚೆ ಮಾಡಿದ್ದು ವ್ಯವಸ್ಥೆಯ ಅಣಕ ಎಂದರು.

ಮೈಸೂರು ರಿಂಗ್‌ ರಸ್ತೆಯಲ್ಲಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಪೊಲೀಸ್ ಆಯುಕ್ತರ ವಿರುದ್ದ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು. ಥೂ.. ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು. ಬೈಕ್ ಸವಾರನನ್ನ ಸಾಯಿಸಿದ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿಯ. ನೀನು ಯಾವ್ ಸೀಮೆ ಕಮಿಷನರಯ್ಯ..?. ಎಂದು ಏಕವಚನದಲ್ಲಿಯೇ ದಾಳಿ ಮಾಡಿದರು.

ಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ. ಸಿಟಿ ರೌಂಡ್ ಹಾಕಲ್ಲ, ಎಷ್ಟೊರ್ಷ ಆಯ್ತು ಬಂದು. ಎಷ್ಟು ಜನ ಡಿಸಿಪಿ,‌ಎಸಿಪಿಗಳಿದ್ದೀರಿ ಏನ್ ಮಾಡ್ತಿದ್ದೀರಿ.ಕೇವಲ ಟ್ರಾಫಿಕ್ ಪೊಲೀಸರಿಂದ ಟ್ರಾಫಿಕ್ ಕಂಟ್ರೋಲ್ ಆಗಲ್ಲ.  ಜನಪ್ರತಿನಿಧಿಗಳು, ಜನರ‌ ಬಗ್ಗೆ ಗೌರವ ಇಲ್ಲ. ಸದನದಲ್ಲಿ ಚರ್ಚೆಯೂ ಆಗಿಲ್ಲ, ನಿನ್ನೆಯಲ್ಲ ಸಿಡಿ ಇಡ್ಕೊಂಡು ವಿಷ್ಣು ಚಕ್ರ ತಿರುಗಿಸಿದ್ದಾರೆ ಎಂಧರು.

ಮೈಸೂರಿನಲ್ಲಿ ನಡೆದ ನಿನ್ನೆಯ ಘಟನೆ ಖಂಡನೀಯ. ಇದು ಪೊಲೀಸರ ಅಚಾತುರ್ಯದಿಂದ ನಡೆದಿದೆ. ಓಡಾಡಿಸಿಕೊಂಡು ಬೈಕ್ ಇಡಿಯಿರಿ ಅಂತ ಕಾನೂನು ಎಲ್ಲಿದೆ? ಫೋಟೋ, ಸಿಸಿ ಕ್ಯಾಮೆರಾ ಇಲ್ವ. ಇವರಿಗೆ ಮಾನ ಮಾರ್ಯದೆ ಇಲ್ಲ, ಗೂಂಡಾಗಿರಿ ಮಾಡ್ತಿದ್ದಾರೆ. ಕಮಿಷನರ್ ಸುಮ್ಮನೆ ಕೂರುವುದಲ್ಲ, ಹೊರಗೆ ಬರಬೇಕು. ಬೈಕ್ ಸವಾರನ ಸಾಯಿಸಿದ್ದಕ್ಕೆ ಸಾಯಿಸಿದ್ದಕ್ಕೆ ಪ್ರಶಂಸನಾ ಪತ್ರ ನೀಡ್ತಿಯಾ? ನೀನು ಯಾವ ಸೀಮೆ ಕಮಿಷನರಯ್ಯ‌ ನೀನು. ಸಿಟಿ ಪೊಲೀಸ್ ಕಾಯ್ದೆ ಏನ್ ಹೇಳುತ್ತೆ.
ಓಡಿಸಿಕೊಂಡು ಬೈಕ್ ಇಡಿ ಅಂತ ಹೇಳುತ್ತಾ? ಸರ್ಕಾರದ ದುಡ್ಡಲ್ಲಿ ಕ್ಯಾಮೆರಾ, ಉಪಕರಣಗಳನ್ನ ಕೊಟ್ಟಿದ್ದೀವಿ. ಈ ವರ್ತನೆಯನ್ನ ಯಾರೂ ಕ್ಷಮಿಸಲ್ಲ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಸುದ್ದಿ ಕೊಟ್ಟರೆ ಅಲ್ವೆ ಗೃಹ ಸಚಿವರು ಮಾತನಾಡೋದು. ಮೈಸೂರಿನಲ್ಲಿ ಪೊಲೀಸರು ದಾರಿ ತಪ್ಪುತ್ತಿದ್ದಾರೆ. ಓಡಾಡಿಸಿಕೊಂಡು ವಾಹನ ಹಿಡಿಯೋದನ್ನ ಬಿಡಬೇಕು. ತಪಾಸಣೆ ಮಾಡಿ ಆದರೆ ಕ್ಯಾಮೆರಾ ಇರೋದು ಯಾಕೆ. ಈ ಸಂಬಂಧ ನಾನು ಗೃಹ ಸಚಿವರು, ಜಿಲ್ಲಾ ಮಂತ್ರಿ ಜೊತೆ ಮಾತನಾಡ್ತೀನಿ ಎಂದು ಹೇಳಿದರು.