ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ, ಪಕ್ಷ ತೊರೆಯುವ ಸುಳಿವು ಕೊಟ್ಟ ಮತ್ತೋರ್ವ ಹಿರಿಯ ನಾಯಕ
ಮುಂದಿನ ಚುನಾವಣೆಯಲ್ಲಿ ಬಹುಮತದೊಂದಿಗೆ ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಸಮಾಧಾನ ಸ್ಫೋಟಗೊಂಡಿದ್ದು, ಕಾಂಗ್ರೆಸ್ ಹಿರಿಯ ನಾಯಕ ಪಕ್ಷ ತೊರೆಯುವ ಎಚ್ಚರಿಕೆ ಜೊತೆಗೆ ಸುಳಿವು ಕೊಟ್ಟಿದ್ದಾರೆ.
ಬೆಂಗಳೂರು, (ಜುಲೈ.02): ವಿಧಾನಸಭೆ ಚುನಾವಣೆಗೆ ಇನ್ನೇನು ಏಳೆಂಟು ತಿಂಗಳು ಮಾತ್ರ ಬಾಕಿ ಇದೆ. ಎಲೆಕ್ಷನ್ ಸಮೀಪಿಸುತ್ತಿದ್ದಂತೆಯೇ ಕರ್ನಾಟಕ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟವಾಗಿದೆ.
ಹೌದು....ಕಾಂಗ್ರೆಸ್ ನಾಯಕರ ನಡುವೆ ಒಮ್ಮತವಿಲ್ಲದೇ ಅಸಮಾಧಾನದ ಹೊಗೆಯಾಡುತ್ತಿದ್ದು, ಕೆಲ ಕಾಂಗ್ರೆಸ್ ಹಿರಿಯ ನಾಯಕರೇ ಪಕ್ಷ ತೊರೆಯಲು ಮುಂದಾಗಿದ್ದಾರೆ. ಈಗಾಗಲೇ ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ ಬಂಡಾಯ ಬಾವುಟ ಹಾರಿಸಿದ್ರೆ, ಹಿರಿಯ ನಾಯಕ ಎಸ್‌ಆರ್ ಪಾಟೀಲ್ ಪಕ್ಷದ ಕಾರ್ಯಚಟುವಟಿಕೆಗಳಿಂದ ದೂರು ಉಳಿದು ಸೈಲೆಂಟ್ ಆಗಿದ್ದಾರೆ. ಇದೀಗ ಮತ್ತೋರ್ವ ಸೀನಿಯರ್ ಲೀಡರ್, ಜಿ ಸಂಸದ ಕೆ.ಹೆಚ್. ಮುನಿಯಪ್ಪ ಅಸಮಾಧಾನ ಹೊರಹಾಕಿದ್ದು, ಪರೋಕ್ಷವಾಗಿ ಪಕ್ಷ ತೊರೆಯುವ ಎಚ್ಚರಿಕೆ ಕೊಟ್ಟಿದ್ದಾರೆ.
Karnataka Politics: ಕೋಲಾರ ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟ!
ಇದೀಗ ಕಾಂಗ್ರೆಸ್ ಪಾಳಯದಿಂದ ಒಂದು ಕಾಲನ್ನ ಹೊರಗೆ ಇಟ್ಟಿರುವ ಮಾಜಿ ಸಂಸದ ಕೆ.ಹೆಚ್. ಮುನಿಯಪ್ಪ ಜೆಡಿಎಸ್ ಗೆ ಹೋಗಲು ತೆರೆಮರೆಯಲ್ಲಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಕಾಂಗ್ರೆಸ್ ನಾಯಕರಿಗೆ ಒಂದು ತಿಂಗಳು ಕಾಲಾವಕಾಶ ನಿಡಿದ್ದಾರೆ.
ಕೆಎಚ್ ಮುನಿಯಪ್ಪ ಅಸಮಾಧಾನ
ಸತತ 7 ಬಾರಿ ಕಾಂಗ್ರೆಸ್ ನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಮುನಿಯಪ್ಪ ಅವರು ಕಳೆದ ಲೋಕಸಭೆ ಚುನಾವಣೆಯಲ್ಲಿ ಸೋಲುಕಂಡಿದ್ದಾರೆ. ಇತ್ತೀಚೆಗೆ ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದ ಮಾಜಿ ಕೇಂದ್ರ ಸಚಿವ ಮುನಿಯಪ್ಪ , ಡಾ. ಎಂ.ಸಿ ಸುಧಾಕರ್, ಕೊತ್ತನೂರು ಮಂಜುನಾಥ್ ರನ್ನ ಪಕ್ಷಕ್ಕೆ ಸೇರಿಸಿಕೊಂಡಿರುವುದ್ಕೆ ಆಕ್ರೋಶಗೊಂಡಿದ್ದಾರೆ.
ಇನ್ನು ಇಂದು(ಶನಿವಾರ) ಕೋಲಾರದಲ್ಲಿ ತಮ್ಮ ಬೆಂಬಲಗರ ಜೊತೆ ಸಭೆ ನಡೆಸಿದ್ದು, ರಾಜಕೀಯ ವಿದ್ಯಾಮನಾ, ಹಾಗೂ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದರು. ಇದೇ ವೇಳೆ ಸ್ವಪಕ್ಷದ ನಾಯಕ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಕೆಶಿ, ಸಿದ್ದು ವಿರುದ್ಧ ಕಿಡಿಕಾರಿದ್ದ ಲಕ್ಷ್ಮೀನಾರಾಯಣಗೆ ನೋಟಿಸ್ ಜಾರಿ
ರಮೇಶ್ ಕುಮಾರ್ ಓರ್ವ ಶಕುನಿ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಶಕುನಿ ಪಾತ್ರ ಮಾಡ್ತಿದ್ದಾನೆ. ನನ್ನ ಪ್ರಾಣ ಪಣಕ್ಕಿಟ್ಟು, ಹಣ ಕೊಟ್ಟು ಗೆಲ್ಲಿಸಿರೋರನ್ನ ಮಾಯಾ ಮಂತ್ರದಲ್ಲಿ ಬಂಧಿಸಿದ್ದಾನೆ. ಈ ಬಾರಿಯ ಚುನಾವಣೆಯಲ್ಲಿ ಸೋಲುತ್ತೇನೆ ಎಂದು ರಮೇಶ್ ಕುಮಾರ್ ಶಕುನಿ ಪಾತ್ರ ಮಾಡ್ತಿದ್ದಾನೆ. ಅವರ ಗುಂಪಿನಲ್ಲಿರುವ ಎಲ್ಲರನ್ನೂ ಸೋಲಿಸಲು ಮಾಟ ಮಂತ್ರ ಮಾಡಿಸಿದ್ದಾನೆ. ಬುದ್ದಿ ಇಲ್ಲದೆ ಕೆಲವರು ಇವನ ಗುಂಪಿಗೆ ಸೇರಿಕೊಂಡಿದ್ದಾರೆ. ರಾಹುಲ್ ಗಾಂಧಿ ಬಂದು ಪ್ರಚಾರ ಮಾಡಿದ್ರು ಈ ಬಾರಿ ರಮೇಶ್ ಕುಮಾರ್ ಸೋಲುತ್ತಾನೆ ಎಂದು ಭವಿಷ್ಯ ನುಡಿದರು.
ಡೆಡ್‌ಲೈನ್ ಕೊಟ್ಟ ಮುನಿಯಪ್ಪ
ಮಹಾಭಾರತದ ಮಹಾಯುದ್ಧ ಮುಕ್ಕಾಲು ಭಾಗ ಮುಗಿದು ಕಾಲು ಭಾಗಮಾತ್ರ ಉಳಿದಿದೆ. ವನವಾಸ ಮುಗಿಸಿ ಪಾಂಡವರಾಗಿದ್ದೇವೆ,ಇನ್ಮುಂದೆ ಯುದ್ಧ ಶುರುವಾಗುತ್ತೆ. ಶಕುನಿ,ದುರ್ಯೋಧನ,ದುಶಾಸನ,ದ್ರೋಣಾಚಾರ್ಯ,ಅಶ್ವತ್ಥಾಮ ಯಾವ ರೀತಿ ಹತವಾಗುತ್ತಾರೆ ಎಂದು ನೋಡ್ತಿರ. ಆ ಕಾಲ ಬರುವ ಸಮಯ ಸನಿಹದಲ್ಲಿದೆ.
ಆಗಾಗಿ ಎಲ್ಲರನ್ನೂ ಕರೆದುಕೊಂಡು ಹೋಗಿ ರಮೇಶ್ ಕುಮಾರ್ ಬಲಿ ಕೊಡ್ತಿದ್ದಾನೆ. ರಮೇಶ್ ಕುಮಾರ್ ಎಲ್ಲಾ ರೀತಿಯ ಏಕಪಾತ್ರಾಭಿನಯ ಮಾಡ್ತಿದ್ದಾನೆ. ನಾನು ರಾಜಿ ಮಾಡಿಕೊಳ್ಳಲು ಒಪ್ಪಿಕೊಂಡಿದ್ದೆ. ಆದ್ರೆ ನನ್ನ ಗಮನಕ್ಕೆ ತರದೆ ಕೆಲವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದಾರೆ. ನಾನು ನಡೆದ ಧರ್ಮದ ದಾರಿಯ ಮೂಲಕ ಶ್ರೀಕೃಷ್ಣ ಪರಮಾತ್ಮ ನಿಮಗೆ ಪಾಠ ಕಲಿಸುತ್ತಾನೆ. ಡಿಕೆಶಿ ಹಾಗೂ ಸಿದ್ದರಾಮಯ್ಯ ರಾಹುಲ್ ಬಳಿ ಏನು ಹೇಳಿದಿರಿ ಗೊತ್ತಿಲ್ಲ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಈ ಬಗ್ಗೆ ನಿಧಾನವಾಗಿ ಅರ್ಥವಾಗುತ್ತೆ. ಬೇರೆ ಪಕ್ಷ ಸೇರುವ ಬಗ್ಗೆ ಪ್ರಚಾರ ಮಾಡೋದು ಬೇಡ, ಕಾರ್ಯಕರ್ತರು ತೀರ್ಮಾನ ಮಾಡ್ತಾರೆ. ಹೈಕಮಾಂಡ್ ತೆಗೆದುಕೊಂಡ ನಿರ್ಧಾರದ ಬಗ್ಗೆ ನನ್ನ ಬಳಿ ಉತ್ತರವಿಲ್ಲ. ನಾಯಕರಿಗೆ ಇನ್ನೊಂದು ತಿಂಗಳು ಕಾಲಾವಕಾಶ ನೀಡುತ್ತೇನೆ, ಬಳಿಕ ಹೊಸ ಅಧ್ಯಾಯ ಪ್ರಾರಂಭವಾಗುತ್ತೆ ಎಂದು ಹೇಳುವ ಮೂಲಕ ಪಕ್ಷ ತೊರೆಯುವ ಎಚ್ಚರಿಕೆ ಜೊತೆಗೆ ಸುಳಿವು ನೀಡಿದರು.