Karnataka Assembly Polls: ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್‌ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಕಣಕ್ಕೆ

Karnataka Assembly Elections 2023: ದಾವಣಗೆರೆ ಜಿಲ್ಲೆಯಲ್ಲಿ ಎಲೆಕ್ಷನ್ ಜ್ವರ ಶುರುವಾಗಿದ್ದು  ಜಿಲ್ಲೆಯ  ಏಳು ವಿಧಾನ ಸಭಾ ಕ್ಷೇತ್ರದಲ್ಲಿ ನಾ ಮುಂದು ತಾ ಮುಂದು ಎಂದು ಅಭ್ಯರ್ಥಿಗಳು ಚುನಾವಣೆ ಸಿದ್ಧತೆ ನಡೆಸಿದ್ದಾರೆ. ಅದರಲ್ಲು ಈಗಾಗಲೇ ಕೆಪಿಸಿಸಿ ಸೂಚನೆಯಂತೆ ಕಾಂಗ್ರೆಸ್ ನಿಂದ ಟಿಕೇಟ್ ಪಡೆಯುವ ಆಕಾಂಕ್ಷಿಗಳು ಕ್ಷೇತ್ರವಾರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

senior Congress leader Shamanur Shivashankarappa contest from Davanagere south constituency gow

ವರದಿ : ವರದರಾಜ್  ಏಷ್ಯಾನೆಟ್ ಸುವರ್ಣ ನ್ಯೂಸ್ 

ದಾವಣಗೆರೆ (ನ.14): ದಾವಣಗೆರೆ ಜಿಲ್ಲೆಯಲ್ಲಿ ಎಲೆಕ್ಷನ್ ಜ್ವರ ಶುರುವಾಗಿದ್ದು  ಜಿಲ್ಲೆಯ  ಏಳು ವಿಧಾನ ಸಭಾ ಕ್ಷೇತ್ರದಲ್ಲಿ ನಾ ಮುಂದು ತಾ ಮುಂದು ಎಂದು ಅಭ್ಯರ್ಥಿಗಳು ಚುನಾವಣೆ ಸಿದ್ಧತೆ ನಡೆಸಿದ್ದಾರೆ. ಅದರಲ್ಲು ಈಗಾಗಲೇ ಕೆಪಿಸಿಸಿ ಸೂಚನೆಯಂತೆ ಕಾಂಗ್ರೆಸ್ ನಿಂದ ಟಿಕೇಟ್ ಪಡೆಯುವ ಆಕಾಂಕ್ಷಿಗಳು ಕ್ಷೇತ್ರವಾರು ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ. ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್ ನ ಹಿರಿಯ ಮುಖಂಡ 91 ವರ್ಷ ಶಾಮನೂರು ಶಿವಶಂಕರಪ್ಪ ಈ ಬಾರಿ ದಾವಣಗೆರೆ  ದಕ್ಷಿಣ ಕ್ಷೇತ್ರದಿಂದ  ಅರ್ಜಿ ಸಲ್ಲಿಸಿದ್ದರೆ  ಇನ್ನು ದಾವಣಗೆರೆ ಉತ್ತರ  ಚನ್ನಗಿರಿ ಮಾಯಕೊಂಡ ಹರಿಹರ ಹೊನ್ನಾಳಿ ಕ್ಷೇತ್ರದಿಂದ ಸ್ಪರ್ಧೆಗೆ ಬಿದ್ದು ಅರ್ಜಿ ಸಲ್ಲಿಸಿದ್ದಾರೆ. ಇನ್ನು ಚನ್ನಗಿರಿ  ಕ್ಷೇತ್ರದಲ್ಲಿ  ದಿವಂಗತ ಮಾಜಿ ಮುಖ್ಯಮಂತ್ರಿ  ಜೆ ಹೆಚ್ ಪಟೇಲ್ ಕುಟುಂಬದಿಂದ  ಚನ್ನಗಿರಿ ಟಿಕೇಟ್ ಆಕಾಂಕ್ಷಿಯಾಗಿ  ಈ ಬಾರಿ ಟಿಕೇಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.. ಜೆ ಹೆಚ್ ಪಟೇಲ್ ಸಹೋದರನ ಪುತ್ರ ರಾಜ್ಯ ಕಬ್ಬುಬೆಳೆಗಾರರ ಸಂಘದ ಕಾರ್ಯದರ್ಶಿ ತೇಜಸ್ವಿ ಪಟೇಲ್ ರಿಂದ ಕೆಪಿಸಿಸಿಗೆ ಅರ್ಜಿ ಸಲ್ಲಿಕೆ  ಸಂದರ್ಭದಲ್ಲಿ ಬಡಕುಟುಂಬವೊಂದರ ಮದುವೆಗೆ ಸಹಾಯ ಮಾಡಲು ನಿರ್ಧರಿಸಿದ್ದಾರೆ.

ಕೆಪಿಸಿಸಿಗೆ ನೀಡುವ 2 ಲಕ್ಷ ನಿಧಿ ಹಣವನ್ನು ಬಡ ವಿಕಲ ಚೇತನ ಮಹಿಳೆ ಮದುವೆಗೆ ನೀಡಲು ನಿರ್ಧಾರ ಮಾಡಿ   ಆ ಕುಟುಂಬಕ್ಕೆ ಚೆಕ್ ನೀಡಿದ್ದಾರೆ.  ದಾವಣಗೆರೆ ಅಂಬೇಡ್ಕರ್ ಸರ್ಕಲ್ ನಲ್ಲಿ ಆ ಮಹಿಳೆ ಕುಟುಂಬಕ್ಕೆ ಚೆಕ್ ನೀಡಿದ್ದಾರೆ.  2 ಲಕ್ಷ ಹಣವನ್ನು ಮದುವೆಗೆ ಬಳಸಲು ಅನುಮತಿ ನೀಡಿ  ಎಂದು ಕೆಪಿಸಿಸಿಗೆ  ಮನವಿ ಮಾಡುತ್ತಿರುವ ತೇಜಸ್ವಿ ಪಟೇಲ್ ಕೆಪಿಸಿಸಿಗೆ ಈ 2 ಲಕ್ಷ ಹಣ  ಹೊರೆಯಾಗುವುದಿಲ್ಲ. ಈ ಹಣವನ್ನು ಬಡ ವಿಕಲಚೇತನ ಮಹಿಳೆಗೆ ನೀಡಿ ಎಂದಿದ್ದಾರೆ.  ಕೆಪಿಸಿಸಿ ಒಂದು ವೇಳೆ ಒಪ್ಪದಿದ್ದರೇ ತಾನೇ ಬಡ ಮಹಿಳೆಗೆ ಹಣ ನೀಡಲು ನಿರ್ಧಾರ ಮಾಡಿದ್ದಾರೆ.

ಚುನಾವಣೆ ಬಂದಾಗಲೆಲ್ಲಾ ಸಿದ್ದು ಅಬ್ಬೇಪಾರಿ: ಪ್ರಹ್ಲಾದ್‌ ಜೋಶಿ ಲೇವಡಿ

ಬೆಳಲಗೆರೆ ಯಲ್ಲಮ್ಮ ಹಾಗು ಅಕಾಡದರ ರಂಗಪ್ಪ ದಂಪತಿಗಳಿಗೆ ಐವರು ಹೆಣ್ಣಮಕ್ಕಳಿದ್ದು ಐವರು ಹೆಣ್ಣುಮಕ್ಕಳು ಸಹ ಮಾತನಾಡಲು ಬಾರದೆ  ವಿಕಲಚೇತನ ರಾಗಿದ್ದಾರೆ. ಅದರಲ್ಲಿ ಓರ್ವ ಮಹಿಳೆ ಗೀತಾ ಎಂಬ ಯುವತಿಯ ಮದುವೆ ಒದಗಿಬಂದಿದ್ದು ಹರಪನಹಳ್ಳಿ ತಾಲ್ಲೂಕಿನ ವಡ್ಡಿನಹಳ್ಳೀ ಗ್ರಾಮದ ಮಂಜುನಾಥ್ ಮದುವೆ ಆಗಲು ಮುಂದೆ ಬಂದಿದ್ದಾರೆ. ಮಂಜುನಾಥ್ ಸಹ ವಿಕಲಚೇತನ ರಾಗಿದ್ದು ಗೀತಾ ಕುಟುಂಬಕ್ಕೆ 2 ಲಕ್ಷ ಹಣವನ್ನು ಹೊಂದಿಸುವುದು ಕಷ್ಟವಾಗಿದೆ.

ಜೆಡಿಎಸ್‌ನದ್ದು ಮೊಸರಲ್ಲಿ ಕಲ್ಲು ಹುಡುಕುವ ಯತ್ನ: ರವಿಕುಮಾರ್‌

ಈ ಬಗ್ಗೆ ತೇಜಸ್ವಿ ಪಟೇಲ್ ರಲ್ಲಿ ಆ ಕುಟುಂಬ ಬಂದು ಕೇಳಿಕೊಂಡಾಗ ಆಯ್ತು ನೀವು ಮದುವೆಗೆ ವ್ಯವಸ್ಥೆ ಮಾಡಿಕೊಳ್ಳಿ ಎಂದರು. ಈ ಬಗ್ಗೆ ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ಏನಾದ್ರು ಸಹಾಯ ಮಾಡಲು ವಿಚಾರಿಸಿದಾಗ ಸರ್ಕಾರದ ಮಟ್ಟದಲ್ಲಿ ಸಹಾಯ ಮಾಡುವ ಯಾವುದೇ ಅವಕಾಶ ಇಲ್ಲ ಎಂದರು. ಆಗ ತೇಜಸ್ವಿ ಪಟೇಲ್ ಕೆಪಿಸಿಸಿಗೆ ನೀಡುವ ಹಣವನ್ನೇ ಏಕೆ ನೀಡಬಾರದು ಎಂದು ವಿಚಾರಿಸಿ ಈ ಬಗ್ಗೆ ಕೆಪಿಸಿಸಿ ಬಳಿ ಮನವಿ ಮಾಡುತ್ತಿದ್ದಾರೆ. ಒಂದು ವೇಳೆ ಕೆಪಿಸಿಸಿ ಒಪ್ಪಿದರೆ  ಶಾಮನೂರು ಶಿವಶಂಕರಪ್ಪನವರ ಮುಖಾಂತರ  ಆ ಕುಟುಂಬದ ಮದುವೆಗೆ ನೆರವಾಗಲು ನಿರ್ಧರಿಸಿದ್ದಾರೆ.

Latest Videos
Follow Us:
Download App:
  • android
  • ios