Asianet Suvarna News Asianet Suvarna News

ಹಣ, ಹೆಂಡ, ಜಾತಿ ಮೇಲೆ ಮತ ಕೇಳಲ್ಲ: ಆಯನೂರು ಮಂಜುನಾಥ್

ಪದವೀಧರರ ಮತ್ತು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡಿದ್ದರ ಆಧಾರದ ಮೇಲೆಯೇ ಮತ ಕೇಳುತ್ತೇನೆ ವಿನಾ ಹಣ, ಹೆಂಡ, ಜಾತಿ ಧರ್ಮದ ಮೇಲೆ ಮತ ಕೇಳುವುದಿಲ್ಲ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. 
 

Seeking vote on behalf of government employees Says Ayanuru Manjunath gvd
Author
First Published May 23, 2024, 7:39 PM IST

ಶಿವಮೊಗ್ಗ (ಮೇ.23): ಪದವೀಧರರ ಮತ್ತು ಸರ್ಕಾರಿ ನೌಕರರ ಪರವಾಗಿ ಕೆಲಸ ಮಾಡಿದ್ದರ ಆಧಾರದ ಮೇಲೆಯೇ ಮತ ಕೇಳುತ್ತೇನೆ ವಿನಾ ಹಣ, ಹೆಂಡ, ಜಾತಿ ಧರ್ಮದ ಮೇಲೆ ಮತ ಕೇಳುವುದಿಲ್ಲ ಎಂದು ನೈಋತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈಗಾಗಲೇ ಕ್ಷೇತ್ರದ ಎಲ್ಲೆಡೆ ಪ್ರವಾಸ ಮಾಡಿ ಬಂದಿದ್ದೇನೆ. ನನ್ನ ಪರ ಉತ್ತಮ ವಾತಾವರಣವಿದೆ. ನನ್ನ ಬಗ್ಗೆ ಮತದಾರರಲ್ಲಿ ಆತ್ಮವಿಶ್ವಾಸವಿದೆ. ನನ್ನ ಹೋರಾಟವನ್ನು ಅವರು ಗುರುತಿಸಿದ್ದಾರೆ. ಈಗಾಗಲೇ ನೌಕರರ ಸಮಸ್ಯೆಗಳ ಸರ್ಕಾರಕ್ಕೆ ಮುಟ್ಟಿಸುವಲ್ಲಿ ಶ್ರಮಿಸಿದ್ದೇನೆ. 

ನನ್ನ ಹೋರಾಟದ ಹಿನ್ನೆಲೆಯಲ್ಲಿಯೇ ಮತ ಕೇಳುತ್ತೇನೆ ಎಂದರು.ನೌಕರರ ಸಮಸ್ಯೆಗಳು ನನಗೆ ಗೊತ್ತಿವೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಯಾಗಬೇಕಾಗಿದೆ. ಬಡ್ತಿ, ವರ್ಗಾವಣೆ ಸಮಸ್ಯೆಗಳಿವೆ. ಪೊಲೀಸರ ಸಮಸ್ಯೆಗಳ ಬಗ್ಗೆಯೂ ನನಗೆ ಅರಿವಿದೆ. ಅತಿಥಿ ಉಪನ್ಯಾಸಕರ ಕಷ್ಟಗಳ ಅರಿವು ಕೂಡ ಅನುದಾನಿತ ಶಾಲಾ ಕಾಲೇಜುಗಳ ಸಮಸ್ಯೆಗಳು ಗೊತ್ತಿದೆ. 7ನೇ ವೇತನ ಆಯೋಗ ಪೂರ್ಣವಾಗಿ ಜಾರಿಯಾಗಬೇಕಾಗಿದೆ. ಈ ಎಲ್ಲಾ ಸಮಸ್ಯೆಗಳ ಖಂಡಿತ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಚುನಾವಣಾ ವ್ಯವಸ್ಥೆಯಲ್ಲಿ ದೋಷ: ನಾನು ಈಗಾಗಲೇ 10 ಸಾರ್ವತ್ರಿಕ ಚುನಾವಣೆಗಳನ್ನು ಎದುರಿಸಿದ್ದೇನೆ. ಎಲ್ಲಿಯೂ ವಾಮ ಮಾರ್ಗದ ಮೂಲಕ ಚುನಾವಣೆ ಮಾಡುವುದಿಲ್ಲ. ಹಣ ಖರ್ಚು ಮಾಡುವವರು ಮಾಡಲಿ ನನಗೆ ಆ ಬಗ್ಗೆ ಚಿಂತೆ ಇಲ್ಲ. ನನ್ನ ಹೋರಾಟವೇ ನನಗೆ ಸ್ಫೂರ್ತಿ ಮತ್ತು ಗೆಲುವು ತಂದು ಕೊಡುತ್ತದೆ. ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ದೋಷವಿದೆ. ಮತದಾರರ ಪಟ್ಟಿಯಲ್ಲೂ ದೋಷವಿದೆ. ಇದೆಲ್ಲ ಸರಿಯಾಗಬೇಕಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಎಂ. ರಮೇಶ್ ಶೆಟ್ಟಿ ಶಂಕರಘಟ್ಟ, ಮುಖಂಡರಾದ ಎಂ.ಶ್ರೀಕಾಂತ್, ಶಾಂತವೀರ ನಾಯಕ್, ಇಕ್ಕೇರಿ ರಮೇಶ್, ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಜಿ.ಡಿ.ಮಂಜುನಾಥ್, ವೈ.ಎಚ್.ನಾಗರಾಜ್, ಚಾಮರಾಜ್ ಮುಂತಾದವರಿದ್ದರು.

ಅಯೋಧ್ಯೆ ಶ್ರೀರಾಮನಿಗೆ ಬೆಳ್ಳಿಯ ಬಿಲ್ಲು-ಬಾಣ ಸಮರ್ಪಿಸಿದ ಭಕ್ತ: ಶೃಂಗೇರಿ ಹಿರಿಯ ಶ್ರೀ ಭಾರತೀ ತೀರ್ಥಗಳಿಂದ ಪೂಜೆ

ಬಿಜೆಪಿಯಿಂದ ಬಂಡಾಯವಾಗಿ ರಘುಪತಿ ಭಟ್ ಸ್ಪರ್ಧೆ ಮಾಡುತ್ತಿದ್ದಾರೆ. ಅವರು ಅವರ ಮತಗಳ ತೆಗೆದುಕೊಳ್ಳುತ್ತಾರೆ. ಯಾರ ಸ್ಪರ್ಧೆಯೂ ನನಗೆ ತೊಂದರೆ ಕೊಡುವುದಿಲ್ಲ. ಬಿಜೆಪಿಯಲ್ಲಿ ಟಿಕೆಟ್ ವಂಚಿತರೆಲ್ಲ ಇದ್ದಕ್ಕಿದ್ದಂತೆ ರಾಷ್ಟ್ರಭಕ್ತರಾಗುತ್ತಾರೆ. ಈಶ್ವರಪ್ಪನವರು ಅವರನ್ನು ಬೆಂಬಲಿಸಿರುವುದು ಸಹಜವಾಗಿದೆ. ಅವರ ಸ್ಪರ್ಧೆಯಿಂದ ನನಗೆ ಯಾವ ರೀತಿಯ ಲಾಭ-ನಷ್ಟ ಆಗುವುದಿಲ್ಲ.
-ಆಯನೂರು ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ

Latest Videos
Follow Us:
Download App:
  • android
  • ios