ಕೋವಿಡ್‌ ವರದಿ ನೋಡಿ ನನಗೇ ಕೊರೋನಾ ಬರುವಂತಿದೆ: ಡಿ.ಕೆ.ಶಿವಕುಮಾರ್‌

ಕಳೆದ ಸರ್ಕಾರದ ಅವಧಿಯಲ್ಲಿ ಕೊರೋನಾ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ.ಕುನ್ಹಾ ಅವರು ನೀಡಿರುವ ವರದಿಯನ್ನು ನೋಡಿ ನನಗೇ ಕೊರೋನಾ ಬರುವಂತೆ ಕಾಣುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

Seeing the Covid Report I Feel Like I am Getting Corona Says DK Shivakumar gvd

ಬೆಂಗಳೂರು (ಅ.30): ಕಳೆದ ಸರ್ಕಾರದ ಅವಧಿಯಲ್ಲಿ ಕೊರೋನಾ ಹಗರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಜಾನ್‌ ಮೈಕಲ್‌ ಡಿ.ಕುನ್ಹಾ ಅವರು ನೀಡಿರುವ ವರದಿಯನ್ನು ನೋಡಿ ನನಗೇ ಕೊರೋನಾ ಬರುವಂತೆ ಕಾಣುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನ್ಯಾ. ಡಿ.ಕುನ್ಹಾ ತನಿಖಾ ಆಯೋಗ ನೀಡಿರುವ ವರದಿ ಕುರಿತಂತೆ ಸೋಮವಾರ ತಮ್ಮ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಉಪಸಮಿತಿ ಸಭೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ನ್ಯಾ. ಡಿ.ಕುನ್ಹಾ ಅವರ ನೇತೃತ್ವದ ತನಿಖಾ ಆಯೋಗ ನೀಡಿರುವ ವರದಿಯನ್ನು ಗಮನಿಸಿದ್ದೇನೆ. 

ಆದರೆ, ವರದಿಯಲ್ಲಿನ ಅಂಶಗಳನ್ನು ನೋಡಿದರೆ ನನಗೇ ಕೋವಿಡ್ ಬರುವಂತೆ ಕಾಣುತ್ತಿದೆ. ಅಲ್ಲದೆ, ವರದಿಯಿಂದಲೇ ಕೊರೋನಾ ಹರಡುವಂತಿದೆ. ಅಷ್ಟು ಗಾಬರಿಯನ್ನುಂಟು ಮಾಡುವ ಅಂಶಗಳು ವರದಿಯಲ್ಲಿವೆ. ಹಗರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ನೀಡುವಂತೆ ನ್ಯಾ. ಜಾನ್ ಮೈಕಲ್‌ ಡಿ.ಕುನ್ಹಾ ಅವರನ್ನು ಕೇಳಿದ್ದೇವೆ. ಉಳಿದ ವಿಚಾರಗಳ ಕುರಿತಂತೆ ಆರೋಗ್ಯ ಸಚಿವರು ಪ್ರತಿಕ್ರಿಯಿಸುತ್ತಾರೆ ಎಂದರು.

ಅಕ್ರಮ ಕಟ್ಟಡ ತಡೆಗೆ ಶೀಘ್ರದಲ್ಲೇ ಪ್ರಬಲ ಕಾನೂನು: ನಗರದಲ್ಲಿ ಕಾನೂನು ಬಾಹಿರ ಕಟ್ಟಡಗಳಿಗೆ ಕಡಿವಾಣ ಹಾಕಲು ಕಷ್ಟವಾಗುತ್ತಿದೆ. ಹೀಗಾಗಿ ನಿಯಮ ಬಾಹಿರ ಕಟ್ಟಡ ನಿರ್ಮಾಣ ಹಾಗೂ ಅದರಿಂದ ಆಗುವ ಅನಾಹುತ ತಡೆಗಟ್ಟಲು ಪ್ರಬಲ ಕಾನೂನು ರೂಪಿಸಲು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಉಂಟಾಗಿರುವ ಅತಿವೃಷ್ಟಿ ಕುರಿತು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಆಯುಕ್ತರೊಂದಿಗೆ ಸಭೆ ನಡೆಸಿದ ಅವರು ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿತದಿಂದ ಸಂಭವಿಸುವ ಗಾಯ ಚಿಕಿತ್ಸೆಗೆ ಮಿಂಟೋ ಕಣ್ಣಾಸ್ಪತ್ರೆ ಸಜ್ಜು

ಬೆಂಗಳೂರು ನಗರದಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿದೆ. ಕಂದಾಯ ಬಡಾವಣೆಗಳಲ್ಲಿ ಹಾಗೂ ಬಿ ಖಾತಾ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ನಕ್ಷೆ ಮಂಜೂರಾತಿ ಪಡೆಯುತ್ತಿಲ್ಲ. ಸೆಟ್‌ ಬ್ಯಾಕ್‌ ಬಿಡದೆ ಅಕ್ರಮವಾಗಿ 6 ರಿಂದ 8 ಮಹಡಿ ಕಟ್ಟುತ್ತಿದ್ದಾರೆ. ಇಂತಹ ಅಕ್ರಮ ನಿರ್ಮಾಣದಿಂದ ಇತ್ತೀಚೆಗೆ ಕಟ್ಟಡ ನೆಲಸಮ ಆಗಿ 8 ಮಂದಿ ಮೃತಪಟ್ಟಿದ್ದಾರೆ. ಹೀಗಾಗಿ ಅಕ್ರಮ ನಿರ್ಮಾಣಗಳನ್ನು ನಿಯಂತ್ರಿಸಲು ಕಾನೂನು ಭದ್ರ ಮಾಡುತ್ತಿದ್ದೇವೆ ಎಂದು ಹೇಳಿದರು.

Latest Videos
Follow Us:
Download App:
  • android
  • ios