Asianet Suvarna News Asianet Suvarna News

ನನ್ನ ಜತೆ ಯಾರ‍್ಯಾರು ಬರ್ತಾರೆ ಅಂತ ಡಿ.25ಕ್ಕೆ ನೋಡಿ: ಜನಾರ್ದನ ರೆಡ್ಡಿ

ಗಂಗಾವತಿ ನಗರ ನನಗೆ ಅಚ್ಚುಮೆಚ್ಚಿನ ತಾಣ. ಇದೇ ನಗರದಲ್ಲಿ ಜೀವಮಾನವಿಡೀ ಕಳೆಯುತ್ತೇನೆ. ಬಳ್ಳಾರಿ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ಜನತೆಯ ಬಗ್ಗೆ ಹೆಚ್ಚಿನ ಪ್ರೀತಿ, ವಿಶ್ವಾಸ ಇದೆ: ಗಾಲಿ ಜನಾರ್ದನ ರೆಡ್ಡಿ 

See Who Will Come With Me on December 25th Says Janardhana Reddy grg
Author
First Published Dec 23, 2022, 3:30 AM IST

ಗಂಗಾವತಿ(ಡಿ.23): ಚುನಾವಣೆಗೆ ಸ್ಪರ್ಧಿಸುವುದಾಗಿ ಈಗಾಗಲೇ ಪ್ರಕಟಿಸಿದ್ದೇನೆ. ಆದರೂ ಅಂತಿಮ ನಿರ್ಧಾರವನ್ನು ಬೆಂಗಳೂರಿನಲ್ಲಿ ಡಿ.25ರಂದು ಘೋಷಿಸುತ್ತೇನೆ. ಅಂದೇ ನನ್ನ ಜತೆ ಯಾರಾರ‍ಯರು ಬರುತ್ತಾರೆ, ಬರುವುದಿಲ್ಲ ಎಂಬುದು ನಿಮಗೆ ಗೊತ್ತಾಗಲಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾವತಿ ನಗರ ನನಗೆ ಅಚ್ಚುಮೆಚ್ಚಿನ ತಾಣ. ಇದೇ ನಗರದಲ್ಲಿ ಜೀವಮಾನವಿಡೀ ಕಳೆಯುತ್ತೇನೆ. ಬಳ್ಳಾರಿ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ಜನತೆಯ ಬಗ್ಗೆ ಹೆಚ್ಚಿನ ಪ್ರೀತಿ, ವಿಶ್ವಾಸ ಇದೆ ಎಂದು ತಿಳಿಸಿದರು.

ಡಿ.25 ರಂದು ಹೊಸ ಪಕ್ಷ ಘೋಷಣೆ ಮಾಡ್ತಾರಾ ಜನಾರ್ದನ ರೆಡ್ಡಿ..?

ಬಳ್ಳಾರಿಯಲ್ಲಿ ಗ್ರಾಮದೇವತೆ ದುರ್ಗಾದೇವಿ ನಮಗೆ ಆಶೀರ್ವಾದ ಮಾಡಿದ್ದಾರೆ. ಅದರಂತೆ ಗಂಗಾವತಿ ಗ್ರಾಮ ದೇವತೆ ದುರ್ಗಾದೇವಿಯ ಆಶೀರ್ವಾದವನ್ನೂ ಪಡೆಯುತ್ತೇನೆ. ನನಗೆ ಅಂಜನಾದ್ರಿ ಆಂಜನೇಯಸ್ವಾಮಿ ಆಶೀರ್ವಾದವೂ ಇದೆ ಎಂದರು.

ಕಳೆದ ವಾರ ಗಂಗಾವತಿ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ನಿಮ್ಮ ಬೆಂಬಲವಾಗಿದ್ದರು. ಈಗ ಮರೆಯಾಗಿದ್ದಾರಲ್ವಾ ಎಂಬ ಪ್ರಶ್ನೆಗೆ, ಎಲ್ಲರೂ ನಮ್ಮವರೇ. ಮುಂಬರುವ ದಿನಗಳಲ್ಲಿ ಎಲ್ಲರೂ ನಮ್ಮ ಜತೆ ಇರುತ್ತಾರೆ ಎಂದರು.

Follow Us:
Download App:
  • android
  • ios