Asianet Suvarna News Asianet Suvarna News

ಡಿ.25 ರಂದು ಹೊಸ ಪಕ್ಷ ಘೋಷಣೆ ಮಾಡ್ತಾರಾ ಜನಾರ್ದನ ರೆಡ್ಡಿ..?

ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ವಾರದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದ ಮಾಜಿ ಸಚಿವ ಜನಾರ್ದನ ರೆಡ್ಡಿ 

Former Minister Janardhana Reddy Likely Announce New Political Party in Karnataka grg
Author
First Published Dec 18, 2022, 9:24 AM IST

ಬಳ್ಳಾರಿ(ಡಿ.18):  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಇದೇ ಡಿ.25 ರಂದು ಹೊಸ ರಾಜಕೀಯ ಪಕ್ಷವನ್ನ ಘೋಷಣೆ ಮಾಡಲಿದ್ದಾರೆ ಎಂಬು ಸುಳಿವು ನೀಡಿದ್ದಾರೆ. ಈ ಬಗ್ಗೆ ಸ್ವತಃ ಜನಾರ್ದನ ರೆಡ್ಡಿ  ಅವರೇ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಈ ವಾರದ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದ್ದಾರೆ.  

 

ಪಕ್ಷ ಘೋಷಣೆಗೂ ಮುನ್ನ ಜನಾರ್ದನ ರೆಡ್ಡಿ ರಾಜ್ಯದ ಮಠ ಮಂದಿರಗಳನ್ನು ಸುತ್ತಲಿದ್ದಾರೆ. ಡಿ. 19ರಂದು ತುಮಕೂರಿನ ಸಿದ್ದಗಂಗಾ ಮಠ, ಡಿ. 20ರಂದು ಗದಗಿನ ಪುಟ್ಟರಾಜ ಗವಾಯಿಗಳ ಗದ್ದುಗೆ ದರ್ಶನ ಪಡೆಯಲಿದ್ದಾರೆ. ಡಿ. 21ರಂದು ಮಸ್ಕಿ ಕ್ಷೇತ್ರದಲ್ಲಿ ರಾಯಚೂರು ಬಳ್ಳಾರಿ, ಕೊಪ್ಪಳ ವಿಜಯನಗರ ಭಾಗದ ಪ್ರಮುಖ ಮುಖಂಡರ ಜತೆ ಜನಾರ್ದನ ರೆಡ್ಡಿ ಸಭೆ ನಡೆಸಲಿದ್ದಾರೆ. 

ಗಂಗಾವತಿಗೆ ಜನಾರ್ದನ ರೆಡ್ಡಿ: ಬಿಜೆಪಿ ಶಾಸಕ ಪರಣ್ಣಗೆ ಆತಂಕ?

ಡಿ. 22ರಂದು ಗಂಗಾವತಿ ಗ್ರಾಮ ದೇವತೆ ದುರ್ಗಾದೇವಿ ಜಾತ್ರೆಯಲ್ಲಿ ಭಾಗಿಯಾಗಿ ಮತ್ತು ಅಂದು ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರಮುಖವಾದ ಸಭೆಯೊಂದನ್ನ ಮಾಡಲಿದ್ದಾರೆ. ಕೊನೆಯಲ್ಲಿ ಡಿ. 25 ರಂದು ಬೆಂಗಳೂರಿನ ಪಾರಿಜಾತ ಅಪಾರ್ಟ್ಮೆಂಟ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಪಕ್ಷದ ಹೆಸರು ಪ್ರಕಟ ಮಾಡಲಿದ್ದಾರೆ ಅಂತ ತಿಳಿದು ಬಂದಿದೆ. 
 

Follow Us:
Download App:
  • android
  • ios