ಬೆಂಗಳೂರು, [ಜ.09]: ರಾಜ್ಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ನಿಗಮ ಮಂಡಳಿಗಳಿಗೆ ಮತ್ತೊಂದು ಸುತ್ತಿನ ನೇಮಕಾತಿ ನಡೆದಿದೆ. 

ಕಾಂಗ್ರೆಸ್ ವತಿಯಿಂದ ಕೆ. ಎನ್.​ ಸುಬ್ಬಾರೆಡ್ಡಿ, ಎನ್.​ ಎ. ಹ್ಯಾರಿಸ್​ ಮತ್ತು ಎಸ್​​ಟಿ ಸೋಮಶೇಖರ್​ ಅವರನ್ನು ನೇಮಕ ಮಾಡಿ ಮುಖ್ಯಮಂತ್ರಿ ಎಚ್​​ ಡಿ ಕುಮಾರಸ್ವಾಮಿ ಆದೇಶ ಹೊರಡಿಸಿದ್ದಾರೆ. 

ಕೊನೆಗೂ ನಿಗಮ ಮಂಡಳಿಗೆ ಕುಮಾರಸ್ವಾಮಿ ಅಂಕಿತ: ಯಾರಿಗೆಲ್ಲ ಚಾನ್ಸ್?

ಬೆಂಗಳೂರು ನಗರ ಸಾರಿಗೆ ಸಂಸ್ಥೆ ಅಧ್ಯಕ್ಷರಾಗಿ ಶಾಂತಿ ನಗರ ಶಾಸಕ ಎನ್.ಎ. ಹ್ಯಾರೀಶ್, ಹಾಗೂ ಎಸ್ ಎನ್. ಸುಬ್ಬಾರಡ್ಡಿ  ಅವರನ್ನು ಕರ್ನಾಟಕ ರೇಷ್ಮೇ ಕೈಗಾರಿಕೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ಇನ್ನು ಬೆಂಗಳೂರು ನಗಾರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಎಸ್.ಟಿ ಸೋಮಶೇಖರ ಆಯ್ಕೆಯಾಗಿದ್ದಾರೆ. ಆದ್ರೆ, ನಿಗಮ- ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕದ ವಿಚಾರವಾಗಿ ದೋಸ್ತಿ ಸರ್ಕಾರದಲ್ಲಿನ ಗೊಂದಲ ಇನ್ನೂ ಬಗೆ ಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. 

ನಿಗಮ ಮಂಡಳಿ:ಐದು ಕೈ ಶಾಸಕರಿಗಿಲ್ಲ 'ಕುಮಾರ' ಕೃಪೆ, ಮತ್ತೆ ಭುಗಿಲೆದ್ದ ಅಸಮಧಾನ

ಏಕೆಂದರೆ, ಇನ್ನೂ ಕೆಲವೊಂದು ನಿಗಮಕ್ಕೆ ಅಧ್ಯಕ್ಷರನ್ನು ನೇಮಿಸಲು ಕಾಂಗ್ರೆಸ್​​ ಕಳಿಸಿರುವ ಪಟ್ಟಿಗೆ ಸಿಎಂ ಕುಮಾರಸ್ವಾಮಿ ಅಸ್ತು ಅಂದಿಲ್ಲ. 

 ಅದ್ರಲ್ಲೂ ಮಾಲಿನ್ಯ ನಿಯಂತ್ರಣ ಮಂಡಳಿ, ಯೋಜನಾ ಆಯೋಗದ ಉಪಾಧ್ಯಕ್ಷ ಮತ್ತು ದೆಹಲಿ ವಿಶೇಷ ಪ್ರತಿನಿಧಿ ಸ್ಥಾನಕ್ಕೆ ಸಿಎಂ ಕುಮಾರಸ್ವಾಮಿ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ.

ಇದ್ರಿಂದ ದೋಸ್ತಿಗಳ ಮಧ್ಯೆ ಮತ್ತೊಂದು ಸುತ್ತಿನ ಮುಸುಕಿನ ಗುದ್ದಾಟ ನಡೆಯುವ ಸೂಚನೆ ನೀಡಿದೆ.