'ಮುಲ್ಲಾನ ಎದೆ ಸೀಳಿದರೆ ಮೂರಕ್ಷರವಿಲ್ಲ..' ಎಂಬ ಎಂಎಲ್‌ಸಿ ಸಿಟಿ ರವಿ ಹೇಳಿಕೆ ವಿಚಾರವಾಗಿ ಎಸ್‌ಡಿಪಿಐ ಆಕ್ರೋಶ ವ್ಯಕ್ತಪಡಿಸಿದ್ದು, ಸಿಟಿ ರವಿ ಇದೇ ರೀತಿ ಮಾತು ಮುಂದುವರಿಸಿದರೆ ಚಿಕ್ಕಮಗಳೂರಿಗೆ ಕಾಲಿಡಲು ಬಿಡೋಲ್ಲ ಎಂದು ಎಚ್ಚರಿಕೆ ನೀಡಿದರು.
ಚಿಕ್ಕಮಗಳೂರು (ಜು.28): 'ಮುಲ್ಲಾನ ಎದೆ ಸೀಳಿದರೆ ಮೂರಕ್ಷರವಿಲ್ಲ..' ಎಂಬ ಎಂಎಲ್‌ಸಿ ಸಿಟಿ ರವಿ ಹೇಳಿಕೆ ವಿಚಾರವಾಗಿ ಇದೀಗ ಚಿಕ್ಕಮಗಳೂರಿನಲ್ಲಿ ಹಿಂದೂ-ಮುಸ್ಲಿಂ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಸಿಟಿ ರವಿ ಹೇಳಿಕೆಗೆ ಮುಸ್ಲಿಂ ಸಮುದಾಯ ಆಕ್ರೋಶ ವ್ಯಕ್ತಪಡಿಸಿದ್ದು, 'ಇದೇ ರೀತಿ ಮಾತನಾಡುತ್ತಿದ್ದಾರೆ, ಮುಸ್ಲಿಂರೆಲ್ಲ ಒಗ್ಗಟ್ಟಾಗಿ ಚಿಕ್ಕಮಗಳೂರಿಗೆ ಕಾಲಿಡದಂತೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಸಿಟಿ ರವಿಗೆ ಎಸ್‌ಡಿಪಿಐ ಎಚ್ಚರಿಕೆ
ಸಿಟಿ ರವಿ ಹೇಳಿಕೆ ವಿಚಾರವಾಗಿ ಇಂದು ಎಸ್‌ಡಿಪಿಐ ಮುಖಂಡ ಅತೀಕ್ ಚಿಕ್ಕಮಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮುಲ್ಲಾಗಳು ಯಾರೂ ಅನಕ್ಷರಸ್ಥರಲ್ಲ. ಸಿಟಿ ರವಿ ಮಾತೆತ್ತಿದ್ದರೆ ಮುಸ್ಲಿಂರನ್ನ ಎಳೆದು ತರ್ತಾರೆ, ಮುಸ್ಲಿಮರನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡ್ತಿದ್ದಾರೆ. ಇನ್ಮುಂದೆ ನಾವು ದ್ವೇಷ ಭಾಷಣ ಸಹಿಸೋಲ್ಲ. ಭಾಷಣದಲ್ಲಿ ಇದೇ ರೀತಿ ಬಾಯ್ಬಿಡ್ತಿದ್ರೆ ನಾವು ನಿಮ್ಮನ್ನು ಚಿಕ್ಕಮಗಳೂರಿಗೆ ನುಗ್ಗೋಕೆ ಬಿಡೋಲ್ಲ, ಮುಂದೆ ಇಂತಹ ಸನ್ನಿವೇಶ ಎದುರಿಸಬೇಕಾಗುತ್ತೆ ಎಂದು ಎಚ್ಚರಿಸಿದರು.
ಸಿಟಿ ರವಿ ಎದೆ ಸೀಳಿದರೆ ಎಷ್ಟು ಅಕ್ಷರ ಇವೆ?
ಸಿಟಿ ರವಿ ಮುಲ್ಲಾನ ಎದೆ ಸೀಳಿದರೆ ಮೂರಕ್ಷರ ಇಲ್ಲ ಅಂತಾರೆ. ಹಾಗಾದ್ರೆ ಸಿಟಿ ರವಿ ಎದೆ ಸೀಳಿದ್ರೆ ಎಷ್ಟು ಇದೆ ಎಂದು ಹೇಳಬೇಕು ಎಂದು ಮುಸ್ಲಿಮ್ ಮುಖಂಡ ಅತೀಕ್ ಪ್ರಶ್ನಿಸಿದರೆ. ಅತೀಕ್ ಮಾತಿಗೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಈ ಬೆಳವಣಿಗೆ ಪರಸ್ಪರ ವಾಗ್ವಾದಕ್ಕೆ ಕಾರಣವಾಯಿತು


