Asianet Suvarna News Asianet Suvarna News

ಕಾರ್ಮಿಕರು, ಶಾಲಾ ಮಕ್ಕಳ ಕಿಟ್‌ನಲ್ಲಿ ಹಗರಣ: ಪ್ರಿಯಾಂಕ್‌ ಖರ್ಗೆ ಆರೋಪ

ರಾಜ್ಯದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ 2021-22 ಹಾಗೂ 2022-23ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡಿರುವ ವಿವಿಧ ಟೂಲ್‌ ಕಿಟ್‌ ಹಾಗೂ ಶಾಲಾ ಮಕ್ಕಳಿಗೆ ನೀಡಿರುವ ಶೈಕ್ಷಣಿಕ ಕಿಟ್‌ಗಳಲ್ಲಿ (ಸ್ಕೂಲ್‌) ವ್ಯಾಪಕ ಭ್ರಷ್ಟಾಚಾರ ನಡೆದಿದೆ. 

Scam on Workers and School Childrens Kit Says Priyank Kharge gvd
Author
First Published Mar 3, 2023, 4:40 AM IST | Last Updated Mar 3, 2023, 4:40 AM IST

ಬೆಂಗಳೂರು (ಮಾ.03): ರಾಜ್ಯದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ 2021-22 ಹಾಗೂ 2022-23ನೇ ಸಾಲಿನಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡಿರುವ ವಿವಿಧ ಟೂಲ್‌ ಕಿಟ್‌ ಹಾಗೂ ಶಾಲಾ ಮಕ್ಕಳಿಗೆ ನೀಡಿರುವ ಶೈಕ್ಷಣಿಕ ಕಿಟ್‌ಗಳಲ್ಲಿ (ಸ್ಕೂಲ್‌) ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಮುಖ್ಯಮಂತ್ರಿಗಳಿಗೆ ನೈತಿಕತೆ ಇದ್ದರೆ 250 ಕೋಟಿ ರು. ಮೌಲ್ಯದ ಹಗರಣದ ಬಗ್ಗೆ ಕೂಡಲೇ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ಪ್ರಿಯಾಂಕ್‌ ಖರ್ಗೆ ಆಗ್ರಹಿಸಿದ್ದಾರೆ.

ಸರ್ಕಾರ ಕಾರ್ಮಿಕರ ಪರವಾಗಿದ್ದರೆ ಈ ಕಿಟ್‌ಗಳನ್ನು ತರಿಸಿ ಮಾರುಕಟ್ಟೆಯಲ್ಲಿ ಈ ಉಪಕರಣಗಳ ಬೆಲೆ ಏನು ಎಂದು ಪರಿಶೀಲಿಸಬೇಕು. ಇಲ್ಲಿ ಯಾವುದೇ ಉನ್ನತ ಮಟ್ಟದ ತನಿಖೆ ಅಗತ್ಯವೇ ಇಲ್ಲ. ಇಲ್ಲಿ ಉಪಕರಣಗಳ ಬೆಲೆ ದುಪ್ಪಟ್ಟಾಗಿದ್ದರೆ ರಾಜೀನಾಮೆ ನೀಡುತ್ತೀರಾ? ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ ಅವರಿಗೆ ಸವಾಲು ಹಾಕಿದರು.

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ವಕ್ತಾರ ರಮೇಶ್‌ ಬಾಬು ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶೇ.40 ಭ್ರಷ್ಟಾಚಾರ ನಡೆಸುವ ಮೂಲಕ ಕನ್ನಡಿಗರ ಪಾಲಿಗೆ ಭ್ರಷ್ಟಾಚಾರದ ಬಕಾಸುರರಾಗಿರುವ ಬಿಜೆಪಿಯವರು ಜನರ ಹಣ ಹಾಗೂ ಜೀವನವನ್ನೂ ನುಂಗುತ್ತಿದ್ದಾರೆ. ಇದೀಗ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಶಾಲಾ ಕಿಟ್‌ಗಳಲ್ಲೂ ಭ್ರಷ್ಟಾಚಾರ ನಡೆಸಿದ್ದಾರೆ. 3,6560 ರು. ಮೌಲ್ಯದ ಕಿಟ್‌ಗೆ 9 ಸಾವಿರ ರು. ಬಿಲ್‌ ಮಾಡಿದ್ದಾರೆ. ಈ ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿಗಳಿಗೆ ದಾಖಲೆಗಳು ನೀಡಲು ಸಿದ್ಧವಿದ್ದೇವೆ. ಅವರಿಗೆ ನೈತಿಕತೆ ಇದ್ದರೆ ಇದನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಒತ್ತಾಯಿಸಿದರು.

6 ರಿಂದ 8 ನೇ ತರಗತಿ ಮಕ್ಕಳಿಗೆ ಒಂದು ಕಿಟ್‌, 1 ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕಿಟ್‌ ನೀಡಲಾಗುತ್ತಿದೆ. ಇದರಲ್ಲಿ 5ನೇ ತರಗತಿ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆಯಾಗಿ ನೀಡಿ ಬಳಿಕ ಉಳಿದರೆ 4,3,2,1 ರಂತೆ ತರಗತಿ ವಿದ್ಯಾರ್ಥಿಗಳಿಗೆ ನೀಡಬೇಕು ಎಂದಿದ್ದಾರೆ. ಸರ್ಕಾರದ ಬಳಿ ಯಾವ ತರಗತಿಯಲ್ಲಿ ಎಷ್ಟುಜನ ನೋಂದಾಯಿತ ಕಾರ್ಮಿಕರ ಮಕ್ಕಳಿದ್ದಾರೆ ಎಂಬ ಅಂಕಿ-ಅಂಶ ಇಲ್ಲವೇ? ಸಮೀಕ್ಷೆ ನಡೆಸದೇ ಏಕಾಏಕಿ ಟೆಂಡರ್‌ ನಡೆಸಿದ್ದೇಕೆ? ಎಂದು ಪ್ರಶ್ನಿಸಿಸಿದರು.

250 ಕೋಟಿ ರು. ವೆಚ್ಚದಲ್ಲಿ ಕಿಟ್‌ ಹಂಚಿಕೆ: ರಮೇಶ್‌ ಬಾಬು ಮಾತನಾಡಿ, ಪ್ರತಿ ಶಾಲಾ ಕಿಟ್‌ಗೆ 9 ಸಾವಿರ ಬೆಲೆ ನಿಗದಿ ಮಾಡಿದ್ದಾರೆ. ನೋಟ್‌ ಬುಕ್‌, ಡ್ರಾಯಿಂಗ್‌ ಬುಕ್‌, ಪೆನ್‌, ಪೆನ್ಸಿಲ್‌ ಬಾಕ್ಸ್‌, ಸ್ವೆಟರ್‌, ಸ್ಕೂಲ್‌ ಬ್ಯಾಗ್‌ ಮತ್ತಿತರ 35 ಸಾಮಗ್ರಿಗಳು ಇದರಲ್ಲಿರುತ್ತವೆ. 2022-23ನೇ ಸಾಲಿನಲ್ಲಿ 1-5ನೇ ತರಗತಿ ಮಕ್ಕಳ ಕಿಟ್‌ಗೆ 38.47 ಕೋಟಿ ರು. ಹಾಗೂ 6-8ನೇ ತರಗತಿ ಕಿಟ್‌ಗೆ 27.80 ಕೋಟಿ ಹಣ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಒಂದು ಪೆನ್ಸಿಲ್ ಬಾಕ್ಸ್‌ ಮೌಲ್ಯ 100 ರು. ಇದ್ದರೆ, ಇವರು 200 ರು. ಹಾಕಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಕಿಟ್‌ ಗರಿಷ್ಠ ಮೌಲ್ಯ 3650 ರೂ. ಆಗಿದೆ. ಆದರೆ ಇವರು 7300ರಿಂದ 9000 ವರೆಗೆ ಬಿಲ್‌ ಮಾಡಿದ್ದಾರೆ ಎಂದು ಆರೋಪಿಸಿದರು.

ಚುನಾವಣೆಗೆ ಬಿಎಸ್‌ವೈ, ಸೋಮಣ್ಣ ಒಟ್ಟಾಗಿ ಹೋಗಬೇಕು: ಮುಖಂಡರು, ಕಾರ್ಯಕರ್ತರ ಅಭಿಮತ

ಇನ್ನು ಎಲೆಕ್ಟ್ರಿಕಲ್‌, ಬಾರ್‌ಬೆಂಡಿಂಗ್‌, ಕಾರ್ಪೆಂಟರಿ,ಪೇಂಟಿಂಗ್‌, ಪ್ಲಂಬಿಂಗ್‌ ಹಾಗೂ ಮೆಷಿನರಿ ಕಿಟ್‌ ವಿತರಣೆಯಲ್ಲೂ ಅವ್ಯವಹಾರ ಆಗಿದೆ. 2,960 ರು. ಬೆಲೆ ಎಲೆಕ್ಟ್ರಿಷಿಯನ್‌ ಕಿಟ್‌ಗೆ 6,904 ರು. ಪಾವತಿ ಮಾಡಿದ್ದಾರೆ. ಕಿಟ್‌ಗಳ ವಿತರಣೆಗೆ 2020-21ನೇ ಸಾಲಿನಲ್ಲಿ 49.94 ಕೋಟಿ ರು., 2021-22ರಲ್ಲಿ 133 ಕೋಟಿ ರು. ವೆಚ್ಚ ಮಾಡಿದ್ದಾರೆ. ಈವರೆಗೆ ಆರು ವಿಧದ ಕಿಟ್‌ಗಳಲ್ಲಿ 250 ಕೋಟಿ ರು. ವೆಚ್ಚ ಮಾಡಿದ್ದು, ಅರ್ಧಕ್ಕಿಂತ ಹೆಚ್ಚು ಹಣ ಅಕ್ರಮ ಮಾಡಿದ್ದಾರೆ ಎಂದು ದೂರಿದರು.

Latest Videos
Follow Us:
Download App:
  • android
  • ios