ಬೆಳಗಾವಿಯಲ್ಲಿ ಆವಾಜ್ ಆದ್ರೆ ರಾಜ್ಯದಲ್ಲೇ ಹೆಚ್ಚು ಆವಾಜ್ Satish jarkiholi
- ಬೆಳಗಾವಿಯಲ್ಲಿ ಗೆದ್ರೆ ರಾಜ್ಯದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ ಎಂದ ಸತೀಶ್
- ಬಿಜೆಪಿ ಭ್ರಷ್ಟಾಚಾರ 40 ಪರ್ಸೆಂಟ್‌ನಿಂದ 50 ಪರ್ಸೆಂಟ್ ಏರಿಕೆ
- 224 ಶಾಸಕರಲ್ಲಿ ಪದವೀಧರು ಎಷ್ಟಿದ್ದಾರೆ ಎಂದು ಪ್ರಕಾಶ್ ಹುಕ್ಕೇರಿ ಪ್ರಶ್ನೆ
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಮೇ.23): ಜೂನ್ 13ರಂದು ವಾಯುವ್ಯ ಪದವೀಧರ, ಶಿಕ್ಷಕರ ಮತ ಕ್ಷೇತ್ರದ ಚುನಾವಣೆ ನಡೆಯಲಿದೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಕ್ಷೇತ್ರ ವ್ಯಾಪ್ತಿ ಹೊಂದಿರುವ ವಾಯುವ್ಯ ಪದವೀಧರ ಶಿಕ್ಷಕರ ಕ್ಷೇತ್ರದಲ್ಲಿ ಚುನಾವಣಾ ಅಖಾಡ ರಂಗೇರಿದೆ. ಬೆಳಗಾವಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆದಿದ್ದು ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಸತೀಶ್ ಜಾರಕಿಹೊಳಿ (Satish jarkiholi held prty meeting) ರಾಜ್ಯ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, 'ಬೆಳಗಾವಿಯಲ್ಲಿ ಆವಾಜ್ ಆದ್ರೆ ರಾಜ್ಯದಲ್ಲಿ ಹೆಚ್ಚು ಆವಾಜ್ ಆಗುತ್ತೆ. ಬೆಳಗಾವಿಯಲ್ಲಿ ಗೆದ್ರೆ ರಾಜ್ಯದಲ್ಲಿ ಹೆಚ್ಚು ಪ್ರಾಮುಖ್ಯತೆ ಕೊಡ್ತಾರೆ. ಹೀಗಾಗಿ ಎಲ್ಲರೂ ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ, ಪದವೀಧರ ಕ್ಷೇತ್ರದ ಅಭ್ಯರ್ಥಿ ಸುನಿಲ್ ಸಂಕ್ ಪರ ಕೆಲಸ ಮಾಡಿ ಅವರನ್ನು ಗೆಲ್ಲಿಸಿ ತನ್ನಿ ಎಂದು ಕರೆ ಕೊಟ್ಟರು.
ನನ್ನ ಹುಡುಗಿ ಜೊತೆಗೆ ಮದುವೆ ಮಾಡಿಸೆಂದು ಬಾಳೆ ಹಣ್ಣಿನಲ್ಲಿ ದೇವರಿಗೆ ಬೇಡಿಕೆ ಇಟ್ಟ ಭಕ್ತ!
ಇನ್ನು ವಾಯುವ್ಯ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಶಿಕ್ಷಕರೂ ಅಲ್ಲ ಪದವೀಧರರು ಅಲ್ಲ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿ, 'ಈ ದೇಶದಲ್ಲಿ ನಾವು ಕೆಲಸ ಮಾಡಿದ್ರೆ ಸರ್ಟಿಫಿಕೇಟ್ ಸಿಗುತ್ತೆ. ಜನರೇ ಸರ್ಟಿಫಿಕೇಟ್ ನೀಡಿದ ಮೇಲೆ ಯಾರ ಸರ್ಟಿಫಿಕೇಟ್ ಅವಶ್ಯಕವಿಲ್ಲ. ಪ್ರಕಾಶ್ ಹುಕ್ಕೇರಿಗೆ ಜನರೇ 7 ಬಾರಿ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಸ್ಪರ್ಧೆ ಮಾಡುವವರಿಗೆ ಡಿಗ್ರಿ ಇರಬೇಕು ಅಂತಾ ಏನಿಲ್ಲ. ಕಾನೂನಿನಲ್ಲಿ ಯಾರು ಬೇಕಾದರೂ ಸ್ಪರ್ಧೆ ಮಾಡಬಹುದು ಅಂತಾ ಇದೆ. ಮತ ಹಾಕುವವರು ಪದವೀಧರರು ಬೇಕು, ಚುನಾವಣೆ ನಿಲ್ಲುವವರಿಗೆ ಇದು ಅನ್ವಯಿಸಲ್ಲ. ಬೇಕಾದ್ರೆ ಅವರದ್ದೇ ಸರ್ಕಾರ ಇದೇ ಮುಂದಿನ ಬಾರಿ ಬದಲಾವಣೆ ಮಾಡಲಿ. ಎಂಎ, ಪಿಹೆಚ್‌ಡಿ ಲಂಡನ್‌ಗೆ ಹೋಗಿದ್ರು ಅಂತಾ ಬರೆದುಕೊಳ್ಳಲಿ. ಈಗಂತೂ ಇಲ್ಲ ಅದು, ಮತ ಹಾಕುವವರು ಪದವೀಧರ ಬೇಕು ಅಂದಿದ್ದಾರೆ.
ಚುನಾವಣೆ ನಿಲ್ಲುವವರು ಯಾರು ಅಂತಾ ಚುನಾವಣಾ ಆಯೋಗ ಸ್ಪೆಸಿಫಿಕ್ ಆಗಿ ಹೇಳಿಲ್ಲ. ಮೂರು ಬಾರಿ ಲೋಕಸಭೆಗೆ ಸ್ಪರ್ಧೆ ಮಾಡಿದ್ದಾರೆ. ಒಂದು ಸಾರಿ ಎಂಎಲ್‌ಸಿ ಆಗಿ ಹಲವು ಬಾರಿ ಶಾಸಕರಾಗಿ ಕೆಲಸ ಮಾಡಿದ್ದಾರೆ. ಅದೇ ಪ್ರಕಾಶ್ ಹುಕ್ಕೇರಿಗೆ ಸರ್ಟಿಫಿಕೇಟ್, ಬೇರೆ ಸರ್ಟಿಫಿಕೇಟ್ ಅವಶ್ಯಕತೆ ಇಲ್ಲ' ಎಂದರು. ಬಿಜೆಪಿಯವರಿಗೆ ಯಾವುದೇ ವಿಷಯ ಇಲ್ಲ. ಬೆಲೆ ಏರಿಕೆ ಗಗನಕ್ಕೆ ಹೋಗ್ತಿದೆ, ಭ್ರಷ್ಟಾಚಾರ 40 ರಿಂದ 50 ಪರ್ಸೆಂಟ್‌ಗೆ ಏರಿಕೆ ಆಗಿದೆ. ನಮ್ಮ ಸದನ ಸಮಿತಿ ರಾಯಚೂರು ಜಿಲ್ಲೆ ಲಿಂಗಸೂರುಗೆ ಹೋಗಿತ್ತು. ಅಲ್ಲಿ ಕಾಮಗಾರಿಯಲ್ಲಿ 50 ಪರ್ಸೆಂಟ್ ಭ್ರಷ್ಟಾಚಾರ ಆಗಿದೆ.
ಆ ಕಮಿಟಿಯಲ್ಲಿ ಬಿಜೆಪಿ ಸದಸ್ಯರೇ ಇದ್ದು ಅವರೇ ತನಿಖೆ ಮಾಡ್ತಿದ್ದಾರೆ. ಚುನಾವಣೆ ವೇಳೆ ಭ್ರಷ್ಟಾಚಾರ 100 ಪರ್ಸೆಂಟ್ ಆದರೂ ಅಚ್ಚರಿಪಡಬೇಕಿಲ್ಲ. ಚುನಾವಣೆ ಮುಗಿದಮೇಲೆ ಐದಾರು ಸೀಟು ಕಡಿಮೆ ಬಂದ್ರೆ 30 ಕೋಟಿಗೆ ಶಾಸಕರ ಖರೀದಿ ಮಾಡಬೇಕು. 30 ಕೋಟಿ ಪ್ಲಸ್ ಮಂತ್ರಿಗಿರಿಗೆ ಹಣ ಬೇಕಲ್ವಾ' ಅಂತಾ ಬಿಜೆಪಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಚುನಾವಣೆ ಗೆಲ್ಲಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೇತೃತ್ವದಲ್ಲಿ ಸ್ಟ್ರಾಂಗ್ ಕಮಿಟಿ ಆಗಬೇಕು. ಜಿ.ಪಂ. ಸದಸ್ಯರು ಮಾಜಿ ಸದಸ್ಯರಿಗೆ ಕನಿಷ್ಟ ನೂರು ಮತ ತರಿಸುವ ಜವಾಬ್ದಾರಿ ನೀಡಬೇಕು.
Karnataka MLC polls: ಭಾರೀ ನಿರೀಕ್ಷೆಯಲ್ಲಿದ್ದ SR Patilಗೆ ಕೈ ತಪ್ಪಿದ ಪರಿಷತ್ ಟಿಕೆಟ್
ಶಿಕ್ಷಕರ ಕ್ಷೇತ್ರದಲ್ಲಿ ಪ್ರಕಾಶ್ ಹುಕ್ಕೇರಿ ಏಕೆ ಮನಸ್ಸು ಮಾಡಿದ್ರು ಅಂದುಕೊಂಡಿದ್ವಿ. ಆದ್ರೆ ಚುನಾವಣೆ ಅಂದ್ರೆ ಒಂದು ಕಲೆ ಇದ್ದ ಹಾಗೇ, ಪ್ರಕಾಶ್ ಹುಕ್ಕೇರಿ ಸಾಕಷ್ಟು ಚುನಾವಣೆ ಮಾಡಿದ್ದಾರೆ. ಚುನಾವಣೆ ನಿಲ್ಲಲು ಆಸಕ್ತಿ ಬೇಕು. ಅದು ಪ್ರಕಾಶ್ ಹುಕ್ಕೇರಿಯವರ ಬಳಿ ಇದೆ. ಸೀರಿಯಸ್ ಆಗಿ ಎಲ್ಲ ಕಾರ್ಯಕರ್ತರು ಚುನಾವಣೆ ಮಾಡಬೇಕು. ಚನ್ನರಾಜ ಹಟ್ಟಿಹೊಳಿ ಗೆಲುವಲ್ಲಿ ಕಾರ್ಯಕರ್ತರ ಪಾಲು ಹೆಚ್ಚು ಮುಖಂಡರ ಪಾಲು ಕಡಿಮೆ ಇದೆ.ಈ ಬಾರಿಯೂ ಕಾರ್ಯಕರ್ತರ ಚುನಾವಣೆ ಇದೆ. ನಾವು ನಮ್ಮ ಶಕ್ತಿ ಅವರ ಜೊತೆ ಕೂಡಿಸೋಣ. ಚುನಾವಣೆ ಗೆಲ್ಲಲು ಸಂಪೂರ್ಣ ಅವಕಾಶ ಇದೆ' ಎಂದರು.
ನಮಗೆ ಮತ ಬೇಕು ನಾವು ಟೀಕೆ ಟಿಪ್ಪಣಿ ಮಾಡಲ್ಲ: ಬೆಳಗಾವಿ ಕಾಂಗ್ರೆಸ್ ಸಭೆಯಲ್ಲಿ ಕಾರ್ಯಕರ್ತರ ಉದ್ದೇಶಿಸಿ ಮಾತನಾಡಿದ ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ, 'ವಿಪಕ್ಷಗಳ ರೀತಿ ನಾನು ಟೀಕೆ ಟಿಪ್ಪಣಿ ಮಾಡೋದಿಲ್ಲ. ಚಿಕ್ಕೋಡಿಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಪ್ರಕಾಶ್ ಹುಕ್ಕೇರಿಗೆ ಪದವಿ ಇಲ್ಲ ಅಂತಾ ಬಿಜೆಪಿ ನಾಯಕರು ಹೇಳಿದ್ದಾರೆ. 'ಪದವಿ ಇದ್ದವರು ವಿಧಾನಸಭೆಯಲ್ಲಿ ಏನು ಮಾತನಾಡಿದಾರೆ ಹೇಳಲಿ. ಕೋವಿಡ್, ಪ್ರವಾಹ ಬಂದಾಗ ಇವರು ಏನು ಮಾಡಿದಾರೆ ಅಂತಾ ಹೇಳಲಿ.
ನಮಗೆ ಮತ ಬೇಕು, ನಾವು ಟೀಕೆ ಟಿಪ್ಪಣಿ ಮಾಡಲ್ಲ. ಪದವೀಧರ ಎಂಎಲ್‌ಎ ಮಂತ್ರಿಗಳು, ಶಾಸಕರು ಎಷ್ಟು ಜನ ಇದ್ದಾರೆ ಹೇಳಲಿ. 224 ಶಾಸಕರಲ್ಲಿ ಎಷ್ಟು ಜನ ಪದವೀಧರ ಇದ್ದಾರೆ ಹೇಳಲಿ. ಅಧಿಕಾರ ಬೇಕು ಅಂತಾ ಚುನಾವಣೆ ನಿಂತಿದ್ದಾರೆ ಅಂತಾ ಹೇಳ್ತಾರೆ. ನಾನು ಐದು ಬಾರಿ ಎಂಎಲ್‌ಎ, ಒಮ್ಮೆ ಎಂಎಲ್‌ಸಿ, ಒಮ್ಮೆ ಎಂಪಿ ಆಗಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಹಲವು ಕೆಲಸ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ 18 ಶಾಸಕರ ಪೈಕಿ ಎಷ್ಟು ಜನ ಪದವೀಧರ ಇದ್ದಾರೆ. ನನ್ನ ಬಳಿ ಇದರ ಬಗ್ಗೆ ಲಿಸ್ಟ್ ಇದೆ. ಟೀಕೆ ಟಿಪ್ಪಣಿ ಮಾಡದೇ ಅವರು ಮತಯಾಚನೆ ಮಾಡಲಿ, ನಾವು ಮಾಡ್ತೀವಿ' ಎಂದು ತಿಳಿಸಿದ್ದಾರೆ.