Asianet Suvarna News Asianet Suvarna News

ಹಿಂದೂ ವಿರೋಧಿ ಹೇಳಿಕೆ ವಿವಾದ, ಸೂಲಿಬೆಲೆ ಸವಾಲು ಸ್ವೀಕರಿಸಿದ ಸತೀಶ್ ಜಾರಕಿಹೊಳಿ!

ಹಿಂದೂ ಭಾರತದ ಪದ ಅಲ್ಲ, ಹಿಂದೂ ಪದ ಅಶ್ಲೀಲ, ನಮ್ಮ ಮೇಲೆ ಹಿಂದೂ ಹೇರಿಕೆ ಯಾಕೆ? ಎಂದು ಭಾಷಣ ಮಾಡಿದ್ದ ಸತೀಶ್ ಜಾರಕಿಹೊಳಿ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದೆ.  ಇದಕ್ಕೆ ಪ್ರತಿಯಾಗಿ ಯುವ ಬ್ರಿಗೇಡ್ ಜಾರಕಿಹೊಳಿ ಕ್ಷೇತ್ರದಲ್ಲಿ ನಾನು ಹಿಂದೂ ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮದಲ್ಲಿ ಚರ್ಕವರ್ತಿ ಸೂಲೆಬೆಲೆ ಬಹಿರಂಗ ಸವಾಲು ಹಾಕಿದ್ದರು. ಈ ಸವಾಲನ್ನು ಸತೀಶ್ ಜಾರಕಿಹೊಳಿ ಸ್ವೀಕರಿಸಿದ್ದಾರೆ.
 

Satish jarkiholi accept chakravarty sulibele open challenge debate on Hindu word and origin remark ckm
Author
First Published Nov 17, 2022, 4:24 PM IST

ಯಮಕನಮರಡಿ(ನ.17):  ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ತಾವು ಆಡಿದ ವಿವಾದಾತ್ಮಕ ಹಿಂದೂ ಪದ ಹಾಗೂ ಧರ್ಮದ ಭಾಷಣ ಸಮರ್ಥನೆ ಮಾಡಿಕೊಳ್ಳುವ ಹಲವು ಪ್ರಯತ್ನ ಮಾಡಿದ್ದಾರೆ. ಆದರೆ ಸ್ವತಃ ಕಾಂಗ್ರೆಸ್ ಪಕ್ಷದಿಂದಲೇ ವಿರೋಧ ವ್ಯಕ್ತವಾದ ಕಾರಣ ಅನಿವಾರ್ಯವಾಗಿ ವಿಷಾಧ ವ್ಯಕ್ತಪಡಿಸಿದ್ದಾರೆ. ಆದರೆ ಈ ವಿವಾದ ಇಷ್ಟಕ್ಕೆ ನಿಂತಿಲ್ಲ, ಹಿಂದೂ ಧರ್ಮವನ್ನು ಅವಹೇಳನ ಮಾಡಿದ ಸತೀಶ್ ಜಾರಕಿಹೊಳಿ ವಿರುದ್ಧ ಕರ್ನಾಟಕ ಸೇರಿದಂತೆ ಹಲವು ಕಡೆ ಪ್ರತಿಭಟನೆಗಳು ನಡೆದಿದೆ. ಸತೀಶ್ ಜಾರಕಿಹೊಳಿ ಕ್ಷೇತ್ರವಾಗಿ ಯಮಕನಮರಡಿಯಲ್ಲಿ ಯುವಾ ಬ್ರಿಗೇಡ್ ನಾನು ಹಿಂದೂ ಅನ್ನೋ ಬೃಹತ್ ಕಾರ್ಯಕ್ರಮ ಆಯೋಜಿಸಿ ಜಾರಕಿಹೊಳಿಗೆ ತಿರುಗೇಟು ನೀಡಿತ್ತು. ಈ ಕಾರ್ಯಕ್ರಮದಲ್ಲಿ ಭಾಷಣದ ಮಾಡಿ ಚಿಂತಕ ಚಕ್ರವರ್ತಿ ಸೂಲೆಬೆಲೆ, ಚರ್ಚೆಗೆ ಬರುವಂತೆ ಬಹಿರಂಗ ಸವಾಲು ಹಾಕಿದ್ದರು. ಈ ಸವಾಲನ್ನು ಸತೀಶ್ ಜಾರಕಿಹೊಳಿ ಸ್ವೀಕರಿಸಿದ್ದಾರೆ. ಈ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ ಸತೀಶ್ ಜಾರಕಿಹೊಳಿ, ನಾನು ಚರ್ಚೆಗೆ ಸಿದ್ಧ ಎಂದಿದ್ದಾರೆ.

ಚಕ್ರವರ್ತಿ ಸೂಲೆಬೆಲೆ ಯಮಕನಮರಡಿ ಕಾರ್ಯಕ್ರಮದಲ್ಲಿ ಏನು ಮಾತನಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಆದರೆ ಚರ್ಚೆಗೆ ಸಿದ್ದ ಅನ್ನೋದು ಮೊದಲೇ ಹೇಳಿದ್ದೇನೆ. ಈಗಲೂ ಹೇಳುತ್ತೇನೆ. ನಾನು ಯಾರಿಗೂ ಬೈದಿದ್ದೇನೋ..? ಯಾರಿಗೆ ಬೈಯಲಿಲ್ಲವೊ...?ಅದೆಲ್ಲಾ ಚರ್ಚೆ ಆಗಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಪ್ರಗತಿಪರ ವೇಷ ಹಾಕಿದವರಿಗೆ ಹಿಂದೂ ಧರ್ಮದ ಮೇಲೆ ಅದೆಷ್ಟು ತಕರಾರುಗಳು..!

ಚಾಲೆಂಜ್ ಸ್ವೀಕರಿಸಿದ್ದೇನೆ ಎಂದ ಸತೀಶ್ ಜಾರಕಿಹೊಳಿ, ಯಮಕನಮರಡಿಯಲ್ಲಿ ಆಯೋಜಿಸಿದ ನಾನು ಹಿಂದೂ ಕಾರ್ಯಕ್ರಮ ಯಶಸ್ವಿಯಾಗಿಲ್ಲ ಎಂದಿದ್ದಾರೆ. ನಿನ್ನೆ ನಡೆದ ಸಮಾವೇಶದಲ್ಲಿ ಯಮಕನಮರಡಿ ಕ್ಷೇತ್ರದ ಕೇವಲ ಸಾವಿರ ಜನ ಮಾತ್ರ ಪಾಲ್ಗೊಂಡಿದ್ದಾರೆ. ಇನ್ನುಳಿದವರು ಬೇರೆ ಕ್ಷೇತ್ರದ ಜನರು ಎಂದಿದ್ದಾರೆ.  

ಯಮಕನಮರಡಿಯ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಬುಧವಾರ ನಡೆದ ಹಿಂದು ಸಮಾವೇಶದಲ್ಲಿ ಚಕ್ರವರ್ತಿ ಸೂಲೆಬೆಲೆ ಹಿಂದೂ ಜಾಗೃತಗೊಂಡಿದ್ದಾರೆ. ಇದರ ಅಪಾಯ ಅರಿತಿರುವ ಹಲವರು ಹಿಂದೂ ಸಮಾಜ ಒಡೆಯುವ ಕಾರ್ಯ ಮಾಡುತ್ತಿದ್ದಾರೆ ಎಂದು ಎಚ್ಚರಿಸಿದ್ದರು. , ಹಿಂದು ಧರ್ಮ ಹೇಡಿಯ ಧರ್ಮವಲ್ಲ ಎಂದು ತೋರಿಸುವ ಸಮಯ ಬಂದಿದೆ. ಹಿಂದುಗಳ ಭಾವನೆಗೆ ದಕ್ಕೆ ತರುವಂಥವರು ರಾಜಕೀಯದಲ್ಲಿ ಇರುವುದಿಲ್ಲ ಎಂಬ ಸ್ಥಿತಿ ಸೃಷ್ಟಿಸುವ ಅಗತ್ಯವಿದೆ. ಹಿಂದುಗಳು ಚುನಾವಣೆಯಲ್ಲಿ ಮತ ಚಲಾಯಿಸುವಾಗ ಹಿಂದು ಎಂದರೆ ಅಶ್ಲೀಲ ಎಂಬ ಹೇಳಿಕೆ ನೆನಪಿಟ್ಟುಕೊಂಡು ಮತ ಚಲಾಯಿಸಬೇಕು. ಹಿಂದುಗಳ ಭಾವನೆಗೆ ಧಕ್ಕೆ ತಂದವರಿಗೆ ಬುದ್ಧಿ ಕಲಿಸಿ ಎಂದು ಸತೀಶ ಜಾರಕಿಹೊಳಿ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಸಂಭಾಜಿ ಮಹಾರಾಜರಿಗೆ ಜಾರಕಿಹೊಳಿ ಅಪಮಾನ ಆರೋಪ: ರಾಹುಲ್ ಗಾಂಧಿಯನ್ನು ಪ್ರಶ್ನಿಸಿದ ಫಡ್ನವಿಸ್!

ಹಿಂದು ಸಮಾಜವನ್ನು ಕೀಳಾಗಿ ಮಾತನಾಡುತ್ತಿದ್ದವರೂ, ಪ್ರಸ್ತುತ ಹಣೆ ಮೇಲೆ ಪಟ್ಟೆಬಳಿದುಕೊಂಡು ಜನಿವಾರ ಹಾಕಿಕೊಂಡು ತಿರುಗುತ್ತಿದ್ದಾರೆ. ಇದೆಕ್ಕೆಲ್ಲಾ ಹಿಂದುಗಳು ಜಾಗೃತರಾಗಿರುವುದೇ ಕಾರಣ ಎಂದು ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.

ಬಾಲ್ಯದಲ್ಲಿ ಮಲವಿಸರ್ಜನೆಗೆ ತೆರಳಬೇಕಾದರೇ ಲಂಡನ್‌ ಗೆ ಹೋಗುತ್ತೇವೆ ಎನ್ನುತ್ತಿದ್ದೆವು. ಅದು ಕಾಲೇಜು ದಿನಗಳಲ್ಲಿ ಶೌಚಾಲಯಕ್ಕೆ ಹೋದಾಗ ಪಾಕಿಸ್ತಾನಕ್ಕೆ ಸ್ವಾಗತ ಎಂಬ ನಾಮಫಲಕಗಳನ್ನು ಕಾಣುತ್ತಿದ್ದೆವು. ಡಿಕ್ಷನರಿಯಲ್ಲಿ ಶೌಚಾಲಯಕ್ಕೆ ಪಾಕಿಸ್ತಾನ ಎಂಬ ಅರ್ಥವಿದೆ. ಈ ವಿಷಯದ ಕುರಿತು ಚರ್ಚಿಸಲು ಸಾಧ್ಯವೇ ಎಂದು ಚಕ್ರವರ್ತಿ ಸೂಲಿಬೆಲೆ ಅವರು ಪರೋಕ್ಷವಾಗಿ ಸತೀಶ ಜಾರಕಿಹೊಳಿ ಅವರಿಗೆ ಪ್ರಶ್ನಿಸಿದರು.
 

Follow Us:
Download App:
  • android
  • ios