ಬೆಂಗಳೂರು, (ಮಾ.03): ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೇ ಜಾರಕಿಹೊಳಿ ಎನ್ನುವ ದೊಡ್ಡ ಕುಟುಂಬಕ್ಕೆ ಬಿಗ್ ಶಾಕ್ ಆಗಿದೆ. 

ಸಹೋದರ ರಮೇಶ್ ಜಾರಕಿಹೊಳಿ ಬೆಳವಣಿಗೆಯಿಂದ ಕಂಗೆಟ್ಟಿರುವ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಪಕ್ಷದ ಮಹತ್ವದ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.

ಹೌದು...ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಇಂದು (ಬುಧವಾರ) ನಡೆದ ಕಾಂಗ್ರೆಸ್ ಜನಧ್ವನಿ ಯಾತ್ರೆ ಕಾರ್ಯಕ್ರಮದಿಂದ‌ ದೂರ ಉಳಿದ್ದಾರೆ.

CD ರಿಲೀಸ್ ಹಿಂದೆ ಯಾರ ಕೈವಾಡ? ಅಜ್ಞಾತ ಸ್ಥಳದಲ್ಲಿ ಜಾರಕಿಹೊಳಿ ಬ್ರದರ್ಸ್‌ ಚರ್ಚೆ...!

ಬೆಂಗಳೂರು: ವಂಚನೆ ಆರೋಪ ಹಾಗೂ CD ವಿವಾದದಲ್ಲಿ ಬಿಜೆಪಿ ಮುಖಂಡ ಸಚಿವ ರಮೇಶ್ ಜಾರಕಿಹೊಳಿ ಸಿಲುಕಿಕೊಂಡಿದ್ದಾರೆ. ಇದರಿಂದ ತೀವ್ರ ಬೇಸರಗೊಂಡಿರುವ 

ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಕೆ ಸೇರಿದಂತೆ ಜನಸಾಮಾನ್ಯರಿಗೆ ಹೊರೆಯಾಗುತ್ತಿರುವ ದರ ಏರಿಕೆ ಖಂಡಿಸಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಂದು (ಬುಧವಾರ) ದೇವನಹಳ್ಳಿಯಿಂದ​ ಬೃಹತ್ ಜನಧ್ವನಿ ಜಾಥಾ ನಡೆಸಿದ್ದು, ಇದರಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಹರಿಪ್ರಸಾದ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ರು. 

ಈವರೆಗೆ ಪಕ್ಷದ ಚಟುವಟಿಕೆಯಲ್ಲಿ ಸಂಕ್ರೀಯವಾಗಿದ್ದ ಸತೀಶ್ ಜಾರಕಿಹೊಳಿ ಮುಜುಗರದ ಕಾರಣ ಇಂದಿನ ಕಾರ್ಯಕ್ರಮದಿಂದ‌ ದೂರ ಉಳಿದ್ದಾರೆ ಎನ್ನಲಾಗಿದೆ.