ಮಂಡ್ಯ, [ಜ.13]: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ಚುನಾವಣಾ ಕಣಗಳೂ ರಂಗೇರುತ್ತಿವೆ. ಅದರಲ್ಲೂ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಯಾವ ಪಕ್ಷದಿಂದ ಯಾವ ಅಭ್ಯರ್ಥಿಗಳು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 

"

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದು, ಬಹುತೇಕ ಜೆಡಿಎಸ್​ನಿಂದ ಮಂಡ್ಯ ಅಭ್ಯರ್ಥಿಯೇ ಕಣಕ್ಕಿಳಿಯುತ್ತಾರೆ ಎಂಬುದು ಸಾಮಾನ್ಯ ಲೆಕ್ಕಾಚಾರ.

ಮಂಡ್ಯ ಲೋಕಸಭಾ ಕಣಕ್ಕೆ ಕಾಂಗ್ರೆಸ್‌ನಿಂದ ಅಂಬಿ ಪುತ್ರ?

 ಇನ್ನೂ ಇಲ್ಲಿನ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಜೆಡಿಎಸ್​ ಶಾಸಕರೇ ಗೆಲುವು ಸಾಧಿಸಿರುವುದರಿಂದ ಲೋಕಸಭಾ ಕ್ಷೇತ್ರವನ್ನೂ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರ ಪಕ್ಷಕ್ಕಿದೆ. ಇದೇ ಕಾರಣಕ್ಕೆ ಅಭ್ಯರ್ಥಿಯಾಗಲೂ ಸಹ ತೀವ್ರ ಪೈಪೋಟಿಯಿದೆ. 

ಒಂದೆಡೆ ಹಾಲಿ ಸಂಸದ ಎಲ್​.ಆರ್​.ಶಿವರಾಮೇಗೌಡ ಮತ್ತೊಮ್ಮೆ ತಾವೇ ಅಭ್ಯರ್ಥಿಯಾಗಲು ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ, ಅಚ್ಚರಿ ಎಂಬಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್​ ಕೂಡ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. 

ಮಂಡ್ಯದಿಂದ ಸ್ಪರ್ಧೆ.. ಮನಸಿನಲ್ಲಿದ್ದಿದ್ದನ್ನು ಹೇಳಿದ ನಿಖಿಲ್ ಕುಮಾರಸ್ವಾಮಿ

ಈ ವಿಷಯವನ್ನು ಎಲ್ಲೂ ನೇರವಾಗಿ ಹೇಳದೇ ಇದ್ದರೂ, ಕಾರ್ಯಕರ್ತರು ನನ್ನ ಮೇಲೆ ಚುನಾವಣೆಗೆ ನಿಲ್ಲುವಂತೆ ಒತ್ತಡ ಹೇರುತ್ತಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ರಾಜಕಾರಣಕ್ಕೆ ಬಂದರೂ ಚಿತ್ರರಂಗ ಹಾಗೂ ರಾಜಕಾರಣ ಎರೆಡರಲ್ಲೂ ಮುಂದುವರೆಯುವುದಾಗಿಯೂ ಹೇಳಿದ್ದಾರೆ. 

ಆದ್ರೆ ನಿಖಿಲ್ ಕುಮಾರಸ್ವಾಮಿ ರಾಜಕೀಯಕ್ಕೆ ಎಂಟ್ರಿಕೊಡಲು ಮತ್ತೊಬ್ಬರು ಅಡ್ಡಿಯಾಗುವ ಸಾಧ್ಯತೆಗಳಿವೆ. ಯಾಕಂದ್ರೆ ಅಂಬರೀಶ್ ಅವರ ಪತ್ನಿ ಸಮಲತ ಅಂವರೀಶ್ ಅವರನ್ನು ಮಂಡ್ಯ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧೆ ಮಾಡುವಂತೆ ಸ್ಯಾಂಡಲ್ ವುಡ್ ಒತ್ತಾಯಿಸಿದೆ.

ಹಾಸನದಿಂದ ಪ್ರಜ್ವಲ್, ಮಂಡ್ಯದಿಂದ ನಿಖಿಲ್‌ಗೆ ಟಿಕೆಟ್ ಖಚಿತ?

ನಿನ್ನೆ [ಶನಿವಾರ] ಮಂಡ್ಯದಲ್ಲಿ ನಡೆದಿದ್ದ ಅಂಬಿ ನುಡಿನಮನ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಟರು ಸುಮಲತಾ ಅವರನ್ನು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಆಗ್ರಹಿಸಿದ್ದಾರೆ.

ತಾವೂ ಚುನಾವಣೆಗೆ ಸ್ಪರ್ಧಿಸಿದ್ದೇ ಆದರೆ, ತಮ್ಮನ್ನು ಗೆಲ್ಲಿಸಲು ಎಲ್ಲ ರೀತಿಯ ಶ್ರಮ ಹಾಕುವುದಾಗಿ ಚಿತ್ರರಂಗದ  ಸ್ಟಾರ್​ ನಟರು ಭರವಸೆ ನೀಡಿದ್ದಾರೆ.

ಮತ್ತೊಂದು ಪ್ರಮುಖ ವಿಷಯ ಅಂದ್ರೆ ಸುಮಲತಾ ಅವರು ಒಂದು ವೇಳೆ ಲೋಕಸಭಾ ಚುನಾವಣೆಗೆ ಸ್ಪರ್ಧೆಗೆ ಒಪ್ಪಿದ್ದೇ ಆದರೆ, ಯಾವ ಪಕ್ಷದಿಂದ ಸ್ಪರ್ಧೆಗಿಳಿಯುತ್ತಾರೆ ಎನ್ನುವುದ ಭಾರೀ ಕುತೂಹಲ ಮೂಡಿಸಿದೆ.

ಮಂಡ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಜಟಾಪಟಿ! ಶಾಸಕನ ವಿರುದ್ಧ ಬೀದಿಗಿಳಿದ ಕೈಪಡೆ

ಸುಮಲತಾ ಅವರು ಕಾಂಗ್ರೆಸ್ ಅಥವಾ ಜೆಡಿಎಸ್ ಯಾವ ಪಕ್ಷದಿಂದ ಸ್ಪರ್ಧಿಸಿದರೂ ಬೆಂಬಲ ನೀಡುವುದಾಗಿ ಕನ್ನಡ ಚಿತ್ರರಂಗ ಸ್ಪಷ್ಟಪಡಿಸಿದೆ. 

ಒಂದು ಕಡೆ ಕಾಂಗ್ರೆಸ್  ಅಂಬರೀಶ್ ಸ್ಥಾನವನ್ನು ಸುಮಲತ ಅವರಿಗೆ ನೀಡಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದೆ. ಮತ್ತೊಂದೆಡೆ ಜೆಡಿಎಸ್ ನಿಂದ ಸ್ಪರ್ಧೆಗೆ ಒಪ್ಪಿದರೆ ಸುಮಲತಾ ಅವರಿಗೆ ಮುಕ್ತ ಮನಸ್ಸಿನಿಂದ ಟಿಕೇಟ್ ನೀಡುವುದುರಲ್ಲಿ ಎರಡು ಮಾತಿಲ್ಲ.

ಆದ್ರೆ ಸುಮಲತಾ ಅವರು ಇದಕ್ಕೆ ಸಮಯ ಕೇಳಿದ್ದು, ಒಂದು ವೇಳೆ ರಾಜಕೀಯಕ್ಕೆ ಎಂಟ್ರಿಗೆ ಸಮ್ಮತಿಸಿದರೆ, ಯಾವ ಪಕ್ಷದಿಂದ ಕಣಕ್ಕಿಳಿಯುತ್ತಾರೆ ಎನ್ನುವುದು ಮಾತ್ರ ಎಲ್ಲರಲ್ಲಿ ಕುತೂಹಲ ಮೂಡಿಸಿದೆ.

ಮತ್ತೊಂದೆಡೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿರುವುದರಿಂದ ಅಂತಿಮವಾಗಿ ಯಾವ ಪಕ್ಷ ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೆ ಎನ್ನುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.